Angry over Health Minister | ಆರೋಗ್ಯ ಸಚಿವರ ವಿರುದ್ಧ ಬಿಜೆಪಿ ಶಾಸಕರಿಂದಲೇ ಆಕ್ರೋಶ




ಆರೋಗ್ಯ ಸಚಿವ ಡಾ. ಸುಧಾಕರ್ ವಿರುದ್ಧ ಆಡಳಿತ ಪಕ್ಷ ಬಿಜೆಪಿ ಶಾಸಕರೇ ಗರಂ ಅಗಿದ್ದಾರೆ. ಈಗಾಗಲೇ ಹಲವು ಬಾರಿ ಟೀಕಾಪ್ರಹಾರ ಮಾಡಿದ ಹೊನ್ನಾಳಿ ಶಾಸಕ ರೇಣುಕಾಚಾರ್ಯ ಮತ್ತೆ ಡಾ. ಸುಧಾರಕ್ ಅವರ ಕಾರ್ಯವೈಖರಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.


ನೀವು ಒಳ್ಳೆಯ ಕೆಲಸ ಮಾಡಿದ್ದರೆ, ನಿಮ್ಮ ಜವಾಬ್ದಾರಿಗಳನ್ನು ಬೇರೆಯವರಿಗೆ ಯಾಕೆ ಹಂಚಿಕೆ ಮಾಡುತ್ತಿದ್ದರು ಎಂದು ಸುಧಾಕರ್‌ಗೆ ಖಾರವಾಗಿ ಪ್ರಶ್ನಿಸಿದ್ದಾರೆ.


ಹೊನ್ನಾಳಿಯಲ್ಲಿ ಮಾತನಾಡಿದ ಅವರು, ಸಚಿವರು ಇನ್ನಾದರೂ ಆತ್ಮಾವಲೋಕನ ಮಾಡಬೇಕು, ತಾನು ಮಾಡುವ ಕೆಲಸ ಪರಿಣಾಮಕಾರಿಯೇ ಇಲ್ಲವೇ ಎಂದು. ಇಲ್ಲದಿದ್ದರೆ ಯಾರಿಗೆ ಯಾವ ಜವಾಬ್ದಾರಿ ಎಂದು ನಾವಾಗಲೀ, ಮುಖ್ಯಮಂತ್ರಿಗಳಾಗಲೀ ಹೇಳೋದಲ್ಲ ಎಂದು ಕಿಡಿಕಾರಿದರು.


ತಮ್ಮ ಇಳಿವಯಸ್ಸಿನಲ್ಲೂ ಮುಖ್ಯಮಂತ್ರಿಯವರು ಶಕ್ತಿ ಮೀರಿ ಕೆಲಸ ಮಾಡುತ್ತಿದ್ದಾರೆ. ಸಚಿವರು ಪಕ್ಷಕ್ಕೆ ಮತ್ತು ಮುಖ್ಯಮಂತ್ರಿಗಳಿಗೆ ವರ್ಚಸ್ಸು ತರುವ ಕೆಲಸ ಮಾಡಬೇಕು. ಆದರೆ, ಹಾಗಾಗುತ್ತಿಲ್ಲ ಎಂದು ವಿಷಾದ ವ್ಯಕ್ತಪಡಿಸಿದರು.