ಬರೋಬ್ಬರಿ ಎರಡು ದಶಕಗಳಿಂದ ತುಕ್ಕು ಹಿಡಿಯುತ್ತಿರುವ ಬ್ರಹ್ಮಾವರ ಸಕ್ಕರೆ ಕಾರ್ಖಾನೆ ಇದೀಗ ಮತ್ತೆ ಸುದ್ದಿಯಲ್ಲಿದೆ. ದಕ್ಷಿಣ ಕನ್ನಡ ಸಹಕಾರಿ ಸಕ್ಕರೆ ಕಾರ್ಖಾನೆಯ ಆಡಳಿತದಲ್ಲಿ ಇರುವ ಈ ಕಂಪೆನಿಯನ್ನು ಮತ್ತೆ ಪುನಾರಂಭಗೊಳಿಸಲು ಎಲ್ಲ ಪ್ರಯತ್ನಗಳು ನಡೆದಿದೆ.
ಈ ಬಾರಿ ದೇವರ ಮೊರೆ ಹೋಗಿದ್ದು, ಪುರೋಹಿತರು ಆರೂಢ ಪ್ರಶ್ನೆಯನ್ನು ಇಡುವ ಮೂಲಕ ಸಕ್ಕರೆ ಕಾರ್ಖಾನೆಯ ಆರಂಭಕ್ಕೆ ಧಾರ್ಮಿಕವಾಗಿ ಮುನ್ನುಡಿ ಬರೆದಿದ್ದಾರೆ.
20 ವರ್ಷಗಳಿಂದ ಉದ್ದಾರವಾಗದ ಸಕ್ಕರೆ ಕಾರ್ಖಾನೆಯ ಬಗ್ಗೆ ಆರೂಢ ಪ್ರಶ್ನಾ ಚಿಂತನವನ್ನು ಏರ್ಪಡಿಸಿದ್ದು, ಇದರಲ್ಲಿ ವೈದಿಕರನ್ನು ಕರೆಸಿ ಪ್ರಶ್ನೆ ಹಾಕಿ ಕೇಳಲಾಯಿತು. ಈ ಸಂದರ್ಭದಲ್ಲಿ ಕೆಲವೊಂದು ಮಾರ್ಗೋಪಾಯಗಳನ್ನು ಪುರೋಹಿತರು ಸೂಚಿಸಿದ್ದಾರೆ.
ಫ್ಯಾಕ್ಟರಿಯೊಳಗೊಂದು ವಿಘ್ನ ನಿವಾರಕನಾದ ಗಣಪತಿಯ ಗುಡಿಯನ್ನು ಕಟ್ಟಿ. ಪಂಜುರ್ಲಿ ದೈವಕ್ಕೆ ಸಾನಿಧ್ಯ ನಿರ್ಮಿಸಿ, ನಾಗ ಸನ್ನಿಧಾನಕ್ಕೆ ನಿರಂತರ ಸೇವೆ... ಇದೆಲ್ಲ ಪರಿಹಾರವನ್ನು ಎಪ್ರಿಲ್ 14ರಂದು ಮಾಡಬೇಕು, ಹೀಗೆ ಮಾಡಿದರೆ ಸಾಕು ಬ್ರಹ್ಮಾವರ ಸಕ್ಕರೆ ಕಾರ್ಖಾನೆ ಮತ್ತೆ ಆರಂಭಗೊಳ್ಳಲಿದೆ ಎಂದು ಪಂಡಿತರು ಪ್ರಶ್ನೆಯಲ್ಲಿ ಉತ್ತರಿಸಿದ್ದಾರೆ.