-->
Offer to JDS by BJP Ministers | ಬಿಜೆಪಿ ಜೊತೆ ವಿಲೀನಕ್ಕೆ ಬಂಪರ್ ಆಫರ್: ಜೆಡಿಎಸ್‌ಗೆ ಆಹ್ವಾನ ನೀಡಿದ ಬಿಜೆಪಿ ಸಚಿವ..!

Offer to JDS by BJP Ministers | ಬಿಜೆಪಿ ಜೊತೆ ವಿಲೀನಕ್ಕೆ ಬಂಪರ್ ಆಫರ್: ಜೆಡಿಎಸ್‌ಗೆ ಆಹ್ವಾನ ನೀಡಿದ ಬಿಜೆಪಿ ಸಚಿವ..!

ಬೆಂಗಳೂರು: ಜೆಡಿಎಸ್‌ ಪಕ್ಷವನ್ನು ಬಿಜೆಪಿ ಜೊತೆ ವಿಲೀನ ಮಾಡಿ.. ಹೀಗೆ ಬಹಿರಂಗವಾಗಿ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಅವರಿಗೆ ರಾಜ್ಯದ ಪ್ರಮುಖ ಸಚಿವರೊಬ್ಬರು ಮುಕ್ತ ಆಹ್ವಾನ ನೀಡಿದ್ದಾರೆ.


ಈ ಬೆಳವಣಿಗೆಯಿಂದ ರಾಜ್ಯ ರಾಜಕಾರಣದಲ್ಲೇ ಭಾರೀ ಸಂಚಲನ ಉಂಟಾಗಿದೆ.ಬಿಜೆಪಿ ಎಂಬ ರೈಲಿನ ಜೊತೆ ಜೆಡಿಎಸ್ ಎಂಬ ಬೋಗಿ ಸೇರಿದರೆ ಅದು ರೈಲಿಗೂ ಒಳ್ಳೆಯದು, ಬೋಗಿಗೂ ಒಳ್ಳೆಯದು ಎಂದು ಹೇಳುವ ಮೂಲಕ ಆರೋಗ್ಯ ಸಚಿವ ಡಾ. ಕೆ. ಸುಧಾಕರ್ ಸ್ಫೋಟಕ ಹೇಳಿಕೆ ನೀಡಿದ್ದಾರೆ.ಚಿಕ್ಕಬಳ್ಳಾಪುರದ ಗ್ರಾಮ ಪಂಚಾಯತ್ ಚುನಾವಣೆ ಫಲಿತಾಂಶದ ಬಗ್ಗೆ ಮಾತನಾಡುತ್ತಾ ಅವರು ಈ ಹೇಳಿಕೆ ನೀಡಿದ್ದಾರೆ.ದೇಶದಲ್ಲಿ ಕಾಂಗ್ರೆಸ್ ಯಾವ ಪರಿಸ್ಥಿತಿಗೆ ತಲುಪಿದೆ ಎಂಬುದು ಎಲ್ಲರಿಗೂ ಗೊತ್ತಿದೆ. ಆದರೆ, ಜೆಡಿಎಸ್ ಪರಿಸ್ಥಿತಿ ಹಾಗೆ ಆಗಿಲ್ಲ. ದಕ್ಷಿಣ ಕರ್ನಾಟಕದಲ್ಲಿ ಜೆಡಿಎಸ್ ಈಗಲೂ ಪ್ರಬಲ ಪಕ್ಷ ಎಂದು ಜನತಾದಳದ ಪರ ಮಾತನಾಡಿದರು.ಜೆಡಿಎಸ್ ನಾಯಕರಿಗೆ ಈಗ ಯಾವ ಪಕ್ಷದ ಜೊತೆ ಇದ್ದರೆ ಒಳ್ಳೆಯದು ಎಂಬುದು ಚೆನ್ನಾಗಿ ಅರಿವಾಗಿದೆ. ಅಂತಹ ರಾಜಕೀಯ ಧ್ರುವೀಕರಣ ಅಗಬೇಕಾಗಿದೆ. ಈ ರೀತಿ ಆದರೆ, ರಾಜ್ಯದ ಜನತೆಗೆ ಮತ್ತು ಜೆಡಿಎಸ್‌ ಪಕ್ಷಕ್ಕೆ ಒಳ್ಳೆಯದು ಎಂದು ಅವರು ಸಲಹೆ ನೀಡಿದರು.

Ads on article

Advertise in articles 1

advertising articles 2

Advertise under the article

WhatsApp Image 2021-10-17 at 10.29.15 PM (1).jpeg