
AICC Gen Sec K.C. Venugopal | ಕೆ.ಸಿ. ವೇಣುಗೋಪಾಲ್ ಗೆ ಮಾತೃವಿಯೋಗ: ಮಾಜಿ ಸಚಿವ ರಮಾನಾಥ ರೈ ಸಾಂತ್ವನ
11/20/2020 09:58:00 AM
ಪಯ್ಯನ್ನೂರು: ಮಾತೃವಿಯೋಗಕ್ಕೆ ಒಳಗಾಗಿರುವ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಅವರಿಗೆ ಮಾಜಿ ದ. ಕ ಜಿಲ್ಲಾ ಉಸ್ತುವಾರಿ ಸಚಿವರಾದ ಬಿ ರಮಾನಾಥ ರೈ ಮತ್ತು ಎಂ.ಎಲ್.ಸಿ ಕೆ ಹರೀಶ್ ಕುಮಾರ್ ಅವರು ಸಾಂತ್ವನ ಹೇಳಿದ್ದಾರೆ.
ಕೇರಳದ ಪಯ್ಯನೂರ್ ನಿವಾಸಕ್ಕೆ ಗುರುವಾರ ಭೇಟಿ ನೀಡಿದ ರಮಾನಾಥ ರೈ ಮತ್ತು ಎಂ.ಎಲ್.ಸಿ ಕೆ ಹರೀಶ್ ಕುಮಾರ್ ಅವರು ವೇಣುಗೋಪಾಲ್ ಕುಟುಂಬಕ್ಕೆ ಸಾಂತ್ವನ ಹೇಳಿ, ಅಗಲಿದ ಆತ್ಮಕ್ಕೆ ಶ್ರದ್ಧಾಂಜಲಿ ಸಮರ್ಪಿಸಿದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ನಾಯಕರಾದ ಎಂ ಎಸ್ ಮೊಹಮ್ಮದ್, ಮಾಜಿ ಮೇಯರ್ ಶಶಿಧರ್ ಹೆಗ್ಡೆ, ಜಯಶೀಲ ಅಡ್ಯಂತಾಯ, ಶಬ್ಬೀರ್ ಎಸ್. ಮೊದಲಾದವರು ಜತೆಗಿದ್ದರು.