ಕುಕ್ಕೆ ಸುಬ್ರಹ್ಮಣ್ಯದಲ್ಲಿ ಪೂಜೆ, ಹರಕೆಯಾದಿ ಸರ್ವ ಸೇವೆ ಆರಂಭ
ಸುಬ್ರಹ್ಮಣ್ಯ: ದಕ್ಷಿಣ ಕನ್ನಡದ ವಿಶ್ವಪ್ರಸಿದ್ಧ ದೇವಾಲಯವಾದ ಕುಕ್ಕೆ ಸುಬ್ರಹ್ಮಣ್ಯ ದೇವಾಲಯದಲ್ಲಿ ಎಲ್ಲ ಸೇವೆಗಳು ಆರಂಭಗೊಂಡಿವೆ. ಕೋವಿಡ್ ಮಹಾಮಾರಿಯ ಭೀತಿಯಿಂದ ಸ್ಥಗಿತಗೊಂಡಿದ್ದ ಹರಕೆ ಸೇವೆಗಳು ಈಗ ಮೊದಲಿನಂತೆ ನಡೆಯುತ್ತಿರುವುದು ಭಕ್ತಾದಿಗಳಲ್ಲಿ ಸಂತಸ ಮೂಡಿಸಿದೆ.
ತುಲಾ ಭಾರ ಸೇವೆ ಮತ್ತು ಅನ್ನಪ್ರಾಶನ ಸೇವೆಗಳು ನಡೆಯುತ್ತಿವೆ. ದೀಪಾವಳಿ ಪ್ರಯುಕ್ತ ಪಲ್ಲಕ್ಕಿ ಮತ್ತು ಬಂಡಿ ಉತ್ಸವದಿಂದ ಆರಂಭವಾದ ಸೇವೆಗಳು
