ಉಡುಪಿ: ಮದುವೆ ನಿರಾಕರಿಸಿದ್ದಕ್ಕೆ ಯುವತಿಗೆ ಚೂರಿಯಿಂದ ಇರಿದ ಪಾಗಲ್ ಪ್ರೇಮಿ
Friday, September 12, 2025
ಉಡುಪಿ: ಮದುವೆಗೆ ನಿರಾಕರಿಸಿದಕ್ಕೆ ಯುವತಿಗೆ ಯುವಕ ಚೂರಿ ಇರಿದ ಘಟನೆ ಉಡುಪಿಯ ಬ್ರಹ್ಮಾವರ ತಾಲೂಕಿನ ಕೊಕ್ಕರ್ಣೆಯಲ್ಲಿ ನಡೆದಿದೆ.
ರಕ್ಷಿತಾ (24) ಇರಿತಕ್ಕೆ ಒಳಗಾದ ಯುವತಿ.ಅವರ
ಆರೋಪಿತ ಯುವಕನು ಯುವತಿಯನ್ನು ಮದುವೆಯಾಗು ಎಂದು ಪೀಡಿಸಿದ್ದಾನೆ. ಆದರೆ ಯುವತಿ ನಿರಾಕರಿಸಿದ್ದಾಳೆ. ಮಾತಿಗೆ ಮಾತು ಬೆಳೆದು ಜಗಳವಾಗಿ ಯುವಕ ಸ್ಥಳದಲ್ಲೇ ಚಾಕುವಿನಿಂದ ಇರಿದಿದ್ದಾನೆ.
ಯುವತಿ ಗಂಭೀರ ಗಾಯಗೊಂಡು ಸ್ಥಳದಲ್ಲಿ ಕುಸಿದು ಬಿದ್ದಿದ್ದಾಳೆ. ಜೀವನ್ಮರಣ ಹೋರಾಟದಲ್ಲಿದ್ದ ಯುವತಿಯನ್ನು ಮಣಿಪಾಲ ಕಸ್ತೂರ್ ಬಾ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಆರೋಪಿತ ಯುವಕನು ರಕ್ಷಿತಾಳನ್ನು ಪ್ರೀತಿಸುತ್ತಿದ್ದು, ಮದುವೆ ಆಗಬೇಕೆಂದು ಬಹಳ ಸಮಯದಿಂದ ಒತ್ತಾಯಿಸುತ್ತಿದ್ದ. ಆಕೆ ಮತ್ತು ಆಕೆಯ ಮನೆಯವರು ಇದಕ್ಕೆ ಒಪ್ಪದ ಹಿನ್ನೆಲೆಯಲ್ಲಿ ಇಬ್ಬರಿಗೆ ಜಗಳ ನಡೆಯುತ್ತಿತ್ತು. ಇಂದು ಬೆಳಗ್ಗೆ ಬಸ್ ನಿಲ್ದಾಣಕ್ಕೆ ಹೋಗುತ್ತಿದ್ದಾಗ ಬೆನ್ನತ್ತಿ ಬಂದ ಯುವಕ,ಯುವತಿಯ ಕುತ್ತಿಗೆಗೆ ಚಾಕು ಇರಿದು ಕೊಲೆಗೈಯ್ಯಲು ಯತ್ನಿಸಿದ್ದಾನೆ.
ಈ ಬಗ್ಗೆ ಬ್ರಹ್ಮಾವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.