
ಕರ್ನಾಟಕ ನಾಯರ್ ಸರ್ವೀಸ್ ಸೊಸೈಟಿ ಯಿಂದ ವಿಜೃಂಭಣೆಯ ಓಣಂ ಹಬ್ಬದ ಆಚರಣೆ
ಕರ್ನಾಟಕ ನಾಯರ್ ಸರ್ವೀಸ್ ಸೊಸೈಟಿ ®️, ಮಂಗಳೂರು ಕರಯೋಗಂ ವತಿಯಿಂದ ಓಣಂ ಮಹೋತ್ಸವವನ್ನು 07 ಸೆಪ್ಟೆಂಬರ್ 2025 ರಂದು ಶ್ರೀ ಗೋರಕ್ಷನಾಥ ಜ್ಞಾನ ಮಂದಿರ, ಕದ್ರಿ ಪಾರ್ಕ್ ಎದುರು, ಕದ್ರಿ, ಮಂಗಳೂರಿನಲ್ಲಿ ವಿಜೃಂಭಣೆಯಿಂದ ಆಚರಿಸಲಾಯಿತು.
ಸಂಘದ ಅಧ್ಯಕ್ಷರಾದ ಶ್ರೀ ಮುರಳಿ ನಾಯರ್ ಹೊಸಮಜಲು ಕಾರ್ಯಕ್ರಮಕ್ಕೆ ಅಧ್ಯಕ್ಷತೆ ವಹಿಸಿದರು.
ಸಂಘದ ಕಾರ್ಯದರ್ಶಿ ಶ್ರೀ ವಿ. ಎಂ. ಸತೀಶನ್ ಅವರು ಗೌರವಾನ್ವಿತ ಅತಿಥಿಗಳಿಗೆ ಸ್ವಾಗತ ಕೋರಿದರು.
ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಖ್ಯಾತ ಬಹುಭಾಷಾ ಚಲನಚಿತ್ರ ನಟ ಡಾ. ಸುಮನ್ ತಲ್ವಾರ್ ಹಾಜರಿದ್ದು, ನಾಯರ್ ಮತ್ತು ಕೇರಳ ಸಮುದಾಯವು ಭಾರತೀಯ ಸಂಸ್ಕೃತಿಗೆ ನೀಡಿರುವ ಅಪಾರ ಕೊಡುಗೆಯನ್ನು ಶ್ಲಾಘಿಸಿದರು. ಅವರು ಮಂಗಳೂರು ಕರಯೋಗಂ ನಡೆಸುತ್ತಿರುವ ಸಾಮಾಜಿಕ ಮತ್ತು ಸಾಂಸ್ಕೃತಿಕ ಚಟುವಟಿಕೆಗಳನ್ನು ಹಾಗೂ ಸ್ಥಳೀಯ ಸಮುದಾಯದೊಂದಿಗೆ ಬೆಸೆದಿರುವ ಬಾಂಧವ್ಯವನ್ನು ಕೊಂಡಾಡಿದರು.
ಕೇರಳದ ಕೊಟ್ಟಾರಕ್ಕರದ ಸಂಶೋಧನಾ ವಿದ್ಯಾರ್ಥಿನಿ, ಧಾರ್ಮಿಕ ವಕ್ತಾರೆ, ಪ್ರೇರಣಾದಾಯಕ ಭಾಷಣಕಾರ್ತಿ, ನಿರೂಪಕಿ ಮತ್ತು ಸಾಮಾಜಿಕ ಮಾಧ್ಯಮ ಪ್ರಭಾವಶಾಲಿ ಶ್ರೀಮತಿ. ಪ್ರಿಯಂವದ ಕೆ. ಪಿಶಾರಡಿ ಅವರು ಮುಖ್ಯ ಭಾಷಣ ಮಾಡಿದರು. ತಮ್ಮ ಪ್ರೇರಣಾದಾಯಕ ಉಪನ್ಯಾಸದಲ್ಲಿ ಅವರು ಹಿಂದೂ ಸಂಪ್ರದಾಯಗಳು, ಸಾಹಿತ್ಯ ಮತ್ತು ನೀತಿಯ ಮಹತ್ವವನ್ನು ಪ್ರತಿಪಾದಿಸಿ, ಧರ್ಮ ಮತ್ತು ಸಂಸ್ಕೃತಿಯ ಮೌಲ್ಯಗಳನ್ನು ಕಾಪಾಡಲು ಮಕ್ಕಳನ್ನು ಬಾಲ್ಯದಿಂದಲೇ ಬೆಳೆಸುವ ಅಗತ್ಯತೆಯನ್ನು ಒತ್ತಿ ಹೇಳಿದರು. ವೇದಗಳು, ಉಪನಿಷತ್ತುಗಳು, ರಾಮಾಯಣ ಮತ್ತು ಮಹಾಭಾರತವು ಭಾರತೀಯ ಪರಂಪರೆಯ ಮಾರ್ಗದರ್ಶಕ ದೀಪಗಳಾಗಿವೆ ಎಂದು ಅವರು ಒತ್ತಿ ಹೇಳಿದರು.
ಕಾರ್ಯಕ್ರಮದಲ್ಲಿ ಪಿ. ವಿ. ಅಭಿಲಾಶ್, ಟ್ರಸ್ಟಿ, ಮೂಕಾಂಬಿಕಾ ದೇವಾಲಯ, ಕೊಲ್ಲೂರು, ಎನ್. ಡಿ. ಸತೀಶ್, ಉಪಾಧ್ಯಕ್ಷ III, KNSS, ವಿನೋದ್ ಎ. ಕೆ., CGM, ಯೂನಿಯನ್ ಬ್ಯಾಂಕ್, ಮಂಗಳೂರು, ಶಾಂತರಾಮ ಶೆಟ್ಟಿ, ಅಧ್ಯಕ್ಷರು, ರೆಡ್ ಕ್ರಾಸ್ ಸೊಸೈಟಿ, ಮಂಗಳೂರು, ಸ್ವರಾಜ್ ಶೆಟ್ಟಿ, ನಿರ್ದೇಶಕ ಮತ್ತು ನಟ, ಸತೀಶ್ ಕುಂಪಳ, ಅಧ್ಯಕ್ಷರು, ಬಿಜೆಪಿ ದಕ್ಷಿಣ ಕನ್ನಡ, ರಮಾನಾಥ ರೈ, ಮಾಜಿ ಜಿಲ್ಲಾ ಮತ್ತು ಇನ್-ಚಾರ್ಜ್ ಸಚಿವ, ಕರ್ನಾಟಕ, ಐವನ್ ಡಿ’ಸೋಜಾ, ಮಾನ್ಯ ಸದಸ್ಯರು, ವಿಧಾನ ಪರಿಷತ್, ಕಿಶೋರ್ ಕುಮಾರ್ ಬೊಟ್ಯಾಡಿ, ಮಾನ್ಯ ಸದಸ್ಯರು, ವಿಧಾನ ಪರಿಷತ್, ಅಜಿತ್ ಕುಮಾರ್ ರೈ ಮಾಲಾಡಿ, ಅಧ್ಯಕ್ಷರು, ಬಂಟ್ಸ್ ಸಂಘ, ಮಂಗಳೂರು, ಕಿರಣ್ ಜೋಗಿ, ಅಧ್ಯಕ್ಷರು, ಜೋಗಿ ಸೌಹಾರ್ದಕ ಸಂಘ, ಅಶೋಕ್ ಟಿ. ಎ., ಉಪಾಧ್ಯಕ್ಷರು, ಕೇರಳ ಸಮಾಜಂ, ರಿಂಜು, ಅಧ್ಯಕ್ಷರು, ಮಲಯಾಳಿ ಸಮಾಜಂ ®️, ಮಂಗಳೂರು, ಸಂದೇಶ್ ಎ., ಅಧ್ಯಕ್ಷರು, ಕರ್ನಾಟಕ ವಿಶ್ವಕರ್ಮ ಸಮಾಜಂ ®️, ಮಂಗಳೂರು, ನಿಕ್ಲಾಬೋಸ್, ಅಧ್ಯಕ್ಷರು, ಕೈರಾಳಿ ಕಲಾ ವೇದಿ ®️, ಸೂರತ್ಕಲ್, ಕೆ. ಕೆ. ರಾಧಾಕೃಷ್ಣನ್, ಅಧ್ಯಕ್ಷರು, ಕರಾವಳಿ ಫ್ರೆಂಡ್ಸ್ ಕ್ಲಬ್ ®️, ಮಂಗಳೂರು, ದಿನೇಶ್ ಮಂದನ್, ಶ್ರೀ ನಾರಾಯಣಾ ಸಂಸ್ಕಾರಿಕಾ ಕಲಾ ವೇದಿ (ರಿ), ಮಂಗಳೂರು, ಕೃಷ್ಣನ್ ನಾಯರ್, ಅಧ್ಯಕ್ಷರು, KNSS ಕರಯೋಗಂ ಸುಳ್ಯ, ಮೋಹನ್ ದಾಸ್, ಅಧ್ಯಕ್ಷರು, KNSS ಕರಯೋಗಂ ಉಡುಪಿ, ಮಹಿಳಾ ವಿಭಾಗ ಕಾರ್ಯದರ್ಶಿ ಶ್ರೀಮತಿ. ಲತಾ ದಿವಾಕರ್, ಖಜಾಂಚಿ ಶ್ರೀಮತಿ. ಜಯಲಕ್ಷ್ಮಿ ಚಂದ್ರಮೋಹನ್, ಮಂಡಳಿ ಸದಸ್ಯರು ಶ್ರೀ ಎಂ. ವಿ. ರಾಜನ್ ಮತ್ತು ಶ್ರೀ ಪಿ. ಕೆ. ಎಸ್. ಪಿಳ್ಳೈ ಹಾಗೂ ಇತರ ಸಮಿತಿ ಸದಸ್ಯರು ಕೂಡ ಹಾಜರಿದ್ದರು.
ಸಂಘದ ಸದಸ್ಯರಿಂದ ಮನಮೋಹಕ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು.. ಕೋಯಿಕೋಡ್ ಟೈಮ್ ಜೋಕ್ಸ್ ಈವೆಂಟ್ ತಂಡದ ಶ್ರೀ ಅಜಯ್ ಕಲೈ ನೇತೃತ್ವದಲ್ಲಿ ಹಾಸ್ಯ ಮತ್ತು ಕರೋಕೆ ಕಾರ್ಯಕ್ರಮವು ಪ್ರೇಕ್ಷಕರಿಗೆ ಮನರಂಜನೆ ನೀಡಿತು.
ಶ್ರೀ ಪಿ. ವಿ. ಅಭಿಲಾಷ್, ಡಾ. ಸುಮನ್ ತಲ್ವಾರ್ ಶ್ರೀ ಕೃಷ್ಣನ್ ನಾಯರ್ ಇವರಿಗೆ ವಿಶೇಷ ಸನ್ಮಾನ ಸಲ್ಲಿಸಲಾಯಿತು. ಹೈ ಜಂಪ್ನಲ್ಲಿ ರಾಜ್ಯ ಮಟ್ಟದ ಪದಕ ವಿಜೇತೆಯಾದ ಕುಮಾರಿ ದಿಯಾ ಭಂಡಾರಿಯನ್ನು ಗೌರವಿಸಲಾಯಿತು. ಇತ್ತೀಚೆಗೆ ಬಿಡುಗಡೆಯಾದ ತುಳು ಚಲನಚಿತ್ರ ನೆತ್ತೆರೆಕೆರೆ ತಂಡವನ್ನು ಆಯೋಜಕರು ಸನ್ಮಾನಿಸಿದರು. ನಾಯರ್ ಸಮುದಾಯದ ಸಾಧಕರಿಗೂ ವಿವಿಧ ಕ್ಷೇತ್ರಗಳಲ್ಲಿ ಅವರ ಸಾಧನೆಗಾಗಿ ಗೌರವಿಸಲಾಯಿತು. ಸಾಂಪ್ರದಾಯಿಕ ಹಾಗೂ ರುಚಿಕರವಾದ ಓಣಂ ಸದ್ಯವನ್ನು ಎಲ್ಲಾ ಅತಿಥಿಗಳಿಗೆ ಸವಿಯಿಸಲಾಯಿತು.
ಕಾರ್ಯಕ್ರಮದ ವಂದನೆಯನ್ನು ಸಂಘದ ಖಜಾಂಚಿ ಶ್ರೀ ರವೀಂದ್ರನಾಥ ಅವರು ಸಲ್ಲಿಸಿದರು. ಶ್ರೀಮತಿ. ನವ್ಯಾ ಕೂರುಪ್ ಮತ್ತು ಶ್ರೀಮತಿ. ನೀತು ಲಕ್ಷ್ಮಿ ಅವರು ನಿರೂಪಿಸಿದರು.