-->

ಓದುಗರ ಗಮನಕ್ಕೆ

ಓದುಗರ ಗಮನಕ್ಕೆ ಇಮುಂಗಾರು ವೆಬ್ಸೈಟ್‌ನಲ್ಲಿ ಪ್ರಕಟವಾಗುವ ಸುದ್ದಿಗಳಲ್ಲಿ ಯಾವುದೇ ಸಲಹೆಗಳಿದ್ದರೆ, ಅವುಗಳನ್ನು ಪಾಲಿಸುವ ಮುಂಚೆ ತಜ್ಞರ ಸಲಹೆಯಿಂದ ಕರಾರುವಕ್ಕಾಗಿ ಪರಿಶೀಲಿಸಿ. ಇಮುಂಗಾರು ಸಂಸ್ಥೆಯು ಯಾವುದೇ ಹಣಕಾಸಿನ ವ್ಯವಹಾರಗಳಲ್ಲಿ ತೊಡಗಿಸಿಕೊಳ್ಳುವುದಿಲ್ಲ. ಯಾವುದೇ ಹಣಕಾಸಿನ ವ್ಯವಹಾರಗಳಿಗೆ ಸಂಬಂಧಿಸಿದಂತೆ ನಮ್ಮ ಸಂಸ್ಥೆಯು ಯಾವುದೇ ಜವಾಬ್ದಾರಿಯನ್ನು ಹೊಂದಿರುವುದಿಲ್ಲ. ನಾವು ಸುದ್ದಿಗಳನ್ನು ವಾಟ್ಸಾಪ್‌ನಲ್ಲಿ ಶೇರ್ ಮಾಡುವಾಗ ಜಾಹೀರಾತು ರೂಪದಲ್ಲಿ ಮೂರನೇ ವಾಟ್ಸಾಪ್ ಗ್ರೂಪ್ ಇನ್ವೈಟ್ ಲಿಂಕ್‌ಗಳನ್ನು ಸೇರಿಸಬಹುದು, ಆದರೆ ಇದಕ್ಕೆ ನಮ್ಮ ಸಂಸ್ಥೆಗೆ ಯಾವುದೇ ಸಂಬಂಧವಿಲ್ಲ.
"ನೆತ್ತೆರೆಕೆರೆ' ತುಳು ಸಿನಿಮಾ ಆಗೋಸ್ಟ್ 29 ರಂದು ತೆರೆಗೆ

"ನೆತ್ತೆರೆಕೆರೆ' ತುಳು ಸಿನಿಮಾ ಆಗೋಸ್ಟ್ 29 ರಂದು ತೆರೆಗೆ

 




ಮಂಗಳೂರು: ಅಸ್ತ್ರ ಪ್ರೊಡಕ್ಷನ್ ಲಾಂಛನದಲ್ಲಿ ಸ್ಮರಾಜ್ ಶೆಟ್ಟಿ ನಿರ್ದೇಶನದಲ್ಲಿ ಲಂಚುಲಾಲ್ ಕೆ ಎಸ್ ನಿರ್ಮಾಣದಲ್ಲಿ ತಯಾರಾದ "ನೆತ್ತರೆಕೆರೆ" ತುಳು ಸಿನಿಮಾ ಆಗೋಸ್ಟ್ 29 ರಂದು ಕರಾವಳಿ ಜಿಲ್ಲೆಯಾದ್ಯಂತ ತೆರೆಕಾಣಲಿದೆ.

 ಈ ಬಗ್ಗೆ ಮಂಗಳೂರಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸ್ಮರಾಜ್ ಶೆಟ್ಟಿ ಮತ್ತು ಲಂಚುಲಾಲ್ ಅವರು ನೆತ್ತರೆಕೆರೆ ಸಿನಿಮಾ ಸಿನಿಮಾರಂಗದಲ್ಲಿ ಹೊಸ ಸಂಚಲನವನ್ನು ಸೃಷ್ಟಿಸಲಿದೆ. ನೆತ್ತರಕೆರೆ ವಿಭಿನ್ನ ಬಗೆಯ ಕಮರ್ಷಿಯಲ್ ಚಿತ್ರವಾಗಿದೆ. ಪಾತ್ರಗಳು ಭಿನ್ನವಾಗಿದೆ. ಸಿನಿಮಾದ ಬಗ್ಗೆ, ಪ್ರೇಕ್ಷಕರಲ್ಲಿ, ಕಾತರ, ಕುತೂಹಲ ಹೆಚ್ಚಿದೆ. ಸಿನಿಮಾಕ್ಕೆ ಚೇಳಾರ್. ಮುಲ್ಕಿ, ಕಿನ್ನಿಗೋಳಿಯಲ್ಲಿ ಚಿತ್ರೀಕರಣಗೊಂಡಿದೆ ಎಂದರು.

ಸ್ವರಾಜ್ ಶೆಟ್ಟಿ ಸಿನಿಮಾಕ್ಕೆ ಚಿತ್ರಕತೆ, ಸಂಭಾಷಣೆಯೊಂದಿಗೆ ನಿರ್ದೇಶನದ ಜವಾಬ್ದಾರಿಯನ್ನೂ ವಹಿಸಿಕೊಂಡಿದ್ದಾರಲ್ಲದೆ ನಾಯಕ ನಟನಾಗಿಯೂ ಅಭಿನಯಿಸಿದ್ದಾರೆ. ನಾಯಕಿಯಾಗಿ ದಿಶಾಲಿ ಪೂಜಾರಿ ನಟಿಸಿದ್ದಾರೆ. ವಿಶೇಷ ಪಾತ್ರದಲ್ಲಿ ಬಹುಭಾಷಾ ತಾರಾ ನಟ ಸುಮನ್ ತಲ್ವಾರ್. ಲಂಚುಲಾಲ್ ಕೆ ಎಸ್ ಅಭಿನಯಿಸಿದ್ದಾರೆ

ಸಿನಿಮಾದಲ್ಲಿ ಯುವ ಶೆಟ್ಟಿ ಪುಷ್ಪರಾಜ್ ಬೊಳ್ಳೂರು, ಅನಿಲ್ ಉಪ್ಪಳ, ಭವ್ಯಾ ಪೂಜಾರಿ, ಪೃಥ್ವಿನ್ ಪೊಳಲಿ, ಉತ್ಸವ್ ವಾಮಂಜೂರು, ನೀತ್ ಪೂಜಾರಿ, ವಿಜಯ ಮಯ್ಯ ಚಂದ್ರಶೇಖರ ಸಿದ್ಧಕಟ್ಟೆ ಮನೀಶ್ ಶೆಟ್ಟಿ ಉಪ್ಪಿರ, ನಮಿತ ಕಿರಣ್, ಸುನೀತಾ, ವಿನಾಯಕ್ ಜಪ್ಪು, ಭಗವಾನ್, ಕೀರ್ತನ್ ಮುಲಿ, ಇದ್ದಾರೆ.

ಸಿನಿಮಾಕ್ಕೆ ಚಿತ್ರಕತೆ ನಿರ್ದೇಶನ ಸ್ವರಾಜ್ ಶೆಟ್ಟಿ, ಕ್ಯಾಮರಾ: ಉದಯ ಬಲ್ಲಾಳ್, ಸಂಗೀತ: ವಿನೋದ್ ರಾಜ್ ಕೋಕಿಲಾ, ಸಂಕಲನ: ಗಣೇಶ್ ನೀರ್ಚಾಲ್, ಸಾಹಸ: ಮಾಸ್ ಮಾದ, ಟೈಗರ್ ಶಿವ, ಎಕ್ಸಿಟಿವ್ ಪ್ರೊಡ್ಯುಸರ್ : ಯತೀಶ್ ಪೂಜಾರಿ, ಲೈನ್ ಪ್ರೊಡ್ಯುಸರ್: ವಿಜಯ ಮಯ್ಯ, ಪ್ರೊಡಕ್ಷನ್ ಮ್ಯಾನೇಜರ್: ರಾಜೇಶ್ ಕುಡ್ಲ, ನಿರ್ದೇಶನ ವಿಭಾಗದಲ್ಲಿ ಅವಿನಾಶ್ ಎಸ್ ಆಪ್ತ, ನೀತ್ ಪೂಜಾರಿ, ಕಾರ್ತಿಕ್ ಜಯಚಂದ್ರನ್, ತುಳಸಿದಾಸ್ ಮಂಜೇಶ್ವರ್, ಮೇಕಪ್ : ಚೇತನ್, ಆರ್ಟ್:ವಿಪಿನ್,

ನೆತ್ತರೆಕೆರೆ ಸಿನಿಮಾ ಮಂಗಳೂರಿನಲ್ಲಿ ಪಿವಿಆರ್, ಸಿನಿಪೊಲಿಸ್, ಭಾರತ್ ಸಿನಿಮಾಸ್, ಸುರತ್ಕಲ್ ನಲ್ಲಿ ಸಿನಿಗ್ಯಾಲಕ್ಕಿ, ಪಡುಬಿದ್ರೆಯಲ್ಲಿ ಭಾರತ್ ಸಿನಿಮಾಸ್, ಉಡುಪಿಯಲ್ಲಿ ಭಾರತ್ ಸಿನಿಮಾಸ್, ಮಣಿಪಾಲದಲ್ಲಿ ಐನಾಕ್ಸ್, ಭಾರತ್ ಸಿನಿಮಾಸ್, ಕಾರ್ಕಳದಲ್ಲಿ ರಾಧಿಕಾ, ಪ್ಲಾನೆಟ್, ಬೆಳ್ತಂಗಡಿಯಲ್ಲಿ ಭಾರತ್, ದೇರಳಕಟ್ಟೆಯಲ್ಲಿ ಭಾರತ್ ಸಿನಿಮಾಸ್ ಚಿತ್ರಮಂದಿರದಲ್ಲಿ ನೆತ್ತೆರೆಕೆರೆ ಸಿನಿಮಾ ತೆರೆ ಕಾಣಲಿದೆ

Ads on article

Advertise in articles 1

advertising articles 2

Advertise under the article