-->

ಓದುಗರ ಗಮನಕ್ಕೆ

ಓದುಗರ ಗಮನಕ್ಕೆ ಇಮುಂಗಾರು ವೆಬ್ಸೈಟ್‌ನಲ್ಲಿ ಪ್ರಕಟವಾಗುವ ಸುದ್ದಿಗಳಲ್ಲಿ ಯಾವುದೇ ಸಲಹೆಗಳಿದ್ದರೆ, ಅವುಗಳನ್ನು ಪಾಲಿಸುವ ಮುಂಚೆ ತಜ್ಞರ ಸಲಹೆಯಿಂದ ಕರಾರುವಕ್ಕಾಗಿ ಪರಿಶೀಲಿಸಿ. ಇಮುಂಗಾರು ಸಂಸ್ಥೆಯು ಯಾವುದೇ ಹಣಕಾಸಿನ ವ್ಯವಹಾರಗಳಲ್ಲಿ ತೊಡಗಿಸಿಕೊಳ್ಳುವುದಿಲ್ಲ. ಯಾವುದೇ ಹಣಕಾಸಿನ ವ್ಯವಹಾರಗಳಿಗೆ ಸಂಬಂಧಿಸಿದಂತೆ ನಮ್ಮ ಸಂಸ್ಥೆಯು ಯಾವುದೇ ಜವಾಬ್ದಾರಿಯನ್ನು ಹೊಂದಿರುವುದಿಲ್ಲ. ನಾವು ಸುದ್ದಿಗಳನ್ನು ವಾಟ್ಸಾಪ್‌ನಲ್ಲಿ ಶೇರ್ ಮಾಡುವಾಗ ಜಾಹೀರಾತು ರೂಪದಲ್ಲಿ ಮೂರನೇ ವಾಟ್ಸಾಪ್ ಗ್ರೂಪ್ ಇನ್ವೈಟ್ ಲಿಂಕ್‌ಗಳನ್ನು ಸೇರಿಸಬಹುದು, ಆದರೆ ಇದಕ್ಕೆ ನಮ್ಮ ಸಂಸ್ಥೆಗೆ ಯಾವುದೇ ಸಂಬಂಧವಿಲ್ಲ.
ಕಾರ್ಕಳ ಬ್ಲಾಕ್ ಕಾಂಗ್ರೆಸ್ ಆಶ್ರಯದಲ್ಲಿ ಸರ್ವಜ್ಞ  ಜಯಂತಿ ಆಚರಣೆ

ಕಾರ್ಕಳ ಬ್ಲಾಕ್ ಕಾಂಗ್ರೆಸ್ ಆಶ್ರಯದಲ್ಲಿ ಸರ್ವಜ್ಞ ಜಯಂತಿ ಆಚರಣೆ

ಕಾರ್ಕಳ ಬ್ಲಾಕ್ ಕಾಂಗ್ರೆಸ್ ಆಶ್ರಯದಲ್ಲಿ ಹಿಂದುಳಿದ ವರ್ಗಗಳ ಘಟಕದ ಅಧ್ಯಕ್ಷರಾದ ಅನಿಲ್ ಪೂಜಾರಿ ನೆಲ್ಲಿಗುಡ್ಡೆಯವರ ನೇತೃತ್ವದಲ್ಲಿ ಕಾರ್ಕಳ ತಾಲೂಕು ಸರ್ವಜ್ಞ ವ್ರತ್ತದ ಬಳಿ ಇರುವ ಸರ್ವಜ್ಞ ಪ್ರತಿಮೆಗೆ ದೀಪ ಬೆಳಗಿಸಿ ಹೂ ಹಾರ ಹಾಕುವ ಮೂಲಕ ಸರ್ವಜ್ಞ ಜಯಂತಿಯನ್ನು ಆಚರಿಸಲಾಯಿತು. 

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಶುಭದ ರಾವ್ ಅವರು ಮಾತನಾಡಿ ತ್ರಿಪದಿ ಬ್ರಹ್ಮ ತತ್ವಜ್ಞಾನಿ ಸರ್ವಜ್ಞ ಅವರ ತತ್ವದರ್ಶಗಳು ಮನುಕುಲಕ್ಕೆ ಸದಾ ಕಾಲವು ಆದರ್ಶವಾಗಿದೆ, ಸರ್ವಜ್ಞರ ಅನುಯಾಯಿಗಳಾದ ಕುಲಾಲ ಸಮಾಜ ಬಾಂಧವರು ಜಾತ್ಯಾತೀತ ತತ್ವಗಳೊಂದಿಗೆ ಎಲ್ಲರೊಂದಿಗೆ ಹೊಂದಾಣಿಕೆಯ ಬದುಕನ್ನು ನಡೆಸುತ್ತಿರುವುದು ಶ್ಲಾಘನೀಯವಾಗಿದೆ ಎಂದರು.

 ಕುಲಾಲ ಸಮಾಜದ ಮುಖ‌ಂಡರಾದ ಕುಶ.ಆರ್.ಮೂಲ್ಯ ಅವರು ಮಾತನಾಡಿ ಸರ್ವಜ್ಙ ಅವರ ತ್ರಿಪದಿ ಸಾಹಿತ್ಯದ ಮೇರು ಕವಿಗಳಾಗಿದ್ದು ಸಂತಕವಿ ಎಂದೇ ಪ್ರಸಿದ್ದಿ ಪಡೆದು ಅವರ ಜೀವನಾದರ್ಶಗಳು ನಮಗೆ ಪ್ರೇರಣೆಯಾಗಿದೆ ಎಂದರು. 

ಈ ಸಂದರ್ಭದಲ್ಲಿ ಕುಕ್ಕುಂದೂರು ಗ್ರಾಮ ಪಂಚಾಯತ್ ಅಧ್ಯಕ್ಷೆ ಉಷಾ ಮೋಹನ್, ಬ್ಲಾಕ್ ಉಪಾದ್ಯಕ್ಷರಾದ  ಜಾರ್ಜ್ ಕ್ಯಾಸ್ತಲಿನೋ, ಬ್ಲಾಕ್ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಶ್ರೀಮತಿ ಭಾನು ಭಾಸ್ಕರ್ ಪೂಜಾರಿ, ನಗರ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ರೀನಾ ಡಿಸೋಜ, ಭೂನ್ಯಾಯ ಮಂಡಳಿ ಸದಸ್ಯರಾದ ಸುನೀಲ್ ಭಂಡಾರಿ, ಗ್ಯಾರಂಟಿ ಸಮಿತಿ ಸದಸ್ಯರಾದ  ಪಿಲಿಪ್ ಮಸ್ಕರೇನಸ್, ಯುವ ಕಾಂಗ್ರೆಸ್ ಜಿಲ್ಲಾ  ಪ್ರಧಾನ ಕಾರ್ಯದರ್ಶಿ ಯೋಗೀಶ್ ಆಚಾರ್ಯ ಇನ್ನಾ, ಅಕ್ರಮ ಸಕ್ರಮ ಸದಸ್ಯೆ ಸುನೀತಾ ಶೆಟ್ಟಿ, ಮಾಜಿ ಪುರಸಭಾ ಅದ್ಯಕ್ಷೆ ಪ್ರತಿಮಾ ರಾಣೆ, ವಿಶ್ವನಾಥ್ ಭಂಡಾರಿ, ಕುಕ್ಕುಂದೂರು ಗ್ರಾಮೀಣ ಕಾಂಗ್ರೆಸ್ ಅದ್ಯಕ್ಷ ರುಕ್ಮಯ ಶೆಟ್ಟಿಗಾರ್, ಸಂತೋಷ್ ಶೆಟ್ಟಿ, ದಿನಕರ್ ಶೆಟ್ಟಿ ಪಳ್ಳಿ, ವಿಶ್ವನಾಥ್ ಪಳ್ಳಿ, ಶೋಭಾ ಮತ್ತಿತರರು ಉಪಸ್ಥಿತರಿದ್ದರು. 
ಬ್ಲಾಕ್ ವಕ್ತಾರ ಪ್ರದೀಪ್ ಬೇಲಾಡಿ ನಿರೂಪಿಸಿ ಸ್ವಾಗತಿಸಿದರು, ಗ್ಯಾರಂಟಿ ಯೋಜನೆ ಸದಸ್ಯ ಹೇಮಂತ್ ಧನ್ಯವಾದವಿತ್ತರು.

Ads on article

Advertise in articles 1

advertising articles 2

Advertise under the article

ಸುರ