-->

ಓದುಗರ ಗಮನಕ್ಕೆ

ಓದುಗರ ಗಮನಕ್ಕೆ ಇಮುಂಗಾರು ವೆಬ್ಸೈಟ್‌ನಲ್ಲಿ ಪ್ರಕಟವಾಗುವ ಸುದ್ದಿಗಳಲ್ಲಿ ಯಾವುದೇ ಸಲಹೆಗಳಿದ್ದರೆ, ಅವುಗಳನ್ನು ಪಾಲಿಸುವ ಮುಂಚೆ ತಜ್ಞರ ಸಲಹೆಯಿಂದ ಕರಾರುವಕ್ಕಾಗಿ ಪರಿಶೀಲಿಸಿ. ಇಮುಂಗಾರು ಸಂಸ್ಥೆಯು ಯಾವುದೇ ಹಣಕಾಸಿನ ವ್ಯವಹಾರಗಳಲ್ಲಿ ತೊಡಗಿಸಿಕೊಳ್ಳುವುದಿಲ್ಲ. ಯಾವುದೇ ಹಣಕಾಸಿನ ವ್ಯವಹಾರಗಳಿಗೆ ಸಂಬಂಧಿಸಿದಂತೆ ನಮ್ಮ ಸಂಸ್ಥೆಯು ಯಾವುದೇ ಜವಾಬ್ದಾರಿಯನ್ನು ಹೊಂದಿರುವುದಿಲ್ಲ. ನಾವು ಸುದ್ದಿಗಳನ್ನು ವಾಟ್ಸಾಪ್‌ನಲ್ಲಿ ಶೇರ್ ಮಾಡುವಾಗ ಜಾಹೀರಾತು ರೂಪದಲ್ಲಿ ಮೂರನೇ ವಾಟ್ಸಾಪ್ ಗ್ರೂಪ್ ಇನ್ವೈಟ್ ಲಿಂಕ್‌ಗಳನ್ನು ಸೇರಿಸಬಹುದು, ಆದರೆ ಇದಕ್ಕೆ ನಮ್ಮ ಸಂಸ್ಥೆಗೆ ಯಾವುದೇ ಸಂಬಂಧವಿಲ್ಲ.
ಸೋದರನಿಂದಲೇ ಗರ್ಭಿಣಿಯಾದೆ ಅದಕ್ಕೆ ಆತನನ್ನೇ ಮದುವೆಯಾದೆ ಎಂದ ಯುವತಿ

ಸೋದರನಿಂದಲೇ ಗರ್ಭಿಣಿಯಾದೆ ಅದಕ್ಕೆ ಆತನನ್ನೇ ಮದುವೆಯಾದೆ ಎಂದ ಯುವತಿ


ಹಿಂದೂ ಧರ್ಮದಲ್ಲಿ ಸಹೋದರ-ಸಹೋದರಿ ಸಂಬಂಧವನ್ನು ಪವಿತ್ರವೆಂದು ಹೇಳಲಾಗಿದೆ. ಸೋದರಿಯಲ್ಲಿ ತಾಯಿಯನ್ನು ಕಾಣಬೇಕು ಎಂದು ಹೇಳಲಾಗುತ್ತದೆ. ಇತ್ತೀಚೆಗೆ ತಂದೆ-ಪುತ್ರಿಯನ್ನು, ಪುತ್ರ ತಾಯಿಯನ್ನು ಮದುವೆಯಾಗಿದ್ದಾರೆ ಎಂಬ ಬರಹವುಳ್ಳ ಫೋಟೊಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ. ಈ ನಡುವೆ ಯುವತಿಯೋರ್ವಳು ಸೋದರನನ್ನೇ ವಿವಾಹವಾಗಿರುವ ಹೇಳುತ್ತಿರುವ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. 


ವೈರಲ್ ಆಗಿರುವ ವೀಡಿಯೋವನ್ನು @sunilbha965 ಹೆಸರಿನ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಶೇರ್ ಮಾಡಿಕೊಳ್ಳಲಾಗಿದೆ. ಯುವತಿ ದೊಡ್ಡದಾದ ಸಿಂಧೂರ ಹಚ್ಚಿಕೊಂಡಿದ್ದು, ಮಾತನಾಡಲು ಆರಂಭಿಸುತ್ತಾಳೆ. ಯುವತಿ ಪಕ್ಕದಲ್ಲಿರುವ ನಿಂತಿರುವ ಯುವಕನನ್ನು ತೋರಿಸುತ್ತಾ, ಇವನು ನನ್ನ ಸೋದರ, ನಾನು ಇವನಿಗೆ ಸೋದರಿಯಾಗಬೇಕು ಎಂದು ಹೇಳುತ್ತಾನೆ. ಬಳಿಕ ಮಾತು ಮುಂದುವರಿಸುವ ಯುವತಿ, ನಾವಿಬ್ಬರು ಪ್ರೀತಿಸುತ್ತಿದ್ದೇವೆ. ಈಗ ಈತನ ಮಗುವಿಗೆ ನಾನು ತಾಯಿ ಆಗುತ್ತಿದ್ದೇನೆ. ನಮ್ಮಿಬ್ಬರ ಪ್ರೀತಿಯನ್ನು ಯಾರಿಂದಲೂ ಬೇರ್ಪಡಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾಳೆ. 


ಈ ವಿಡಿಯೋ ಎಲ್ಲಿಯದ್ದು? ವಿಡಿಯೋದಲ್ಲಿರುವ ಯುವತಿ ಮತ್ತು ಯುವಕ ಯಾರು ಎಂಬುದರ ಬಗ್ಗೆ ನಿಖರ ಮಾಹಿತಿ ತಿಳಿದು ಬಂದಿಲ್ಲ. ಮದುವೆ ಆದಂತೆ ಇಬ್ಬರು ಕೊರಳಲ್ಲಿ ಹೊವಿನ ಮಾಲೆಯನ್ನು ಹಾಕಿಕೊಂಡಿರೋದನ್ನು ಗಮನಿಸಬಹುದು. ಈ ವಿಡಿಯೋಗೆ 86 ಸಾವಿರಕ್ಕೂ ಅಧಿಕ ವ್ಯೂವ್ ಮತ್ತು 5 ಸಾವಿರದವರೆಗೆ ಕಮೆಂಟ್ಸ್ ಬಂದಿವೆ. 


ಈ ವಿಡಿಯೋ ನೋಡಿದ ನೆಟ್ಟಿಗರು, ಇಬ್ಬರಿಗೂ ಛೀಮಾರಿ ಹಾಕಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುವ ಉದ್ದೇಶದಿಂದ ಇವರಿಬ್ಬರು ನಾಟಕ ಮಾಡುತ್ತಿದ್ದಾರೆ? ಈ ರೀತಿ ಲೈಕ್ಸ್ ಗಾಗಿ ಹಿಂದೂ ಧರ್ಮಕ್ಕೆ ಅವಮಾನ ಮಾಡಬೇಡಿ ಎಂದು ನೆಟ್ಟಿಗರು ವಾಗ್ದಾಳಿ ನಡೆಸಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಇಂಥ ವಿಡಿಯೋಗಳನ್ನು ಅಪ್ಲೋಡ್ ಮಾಡುವ ಮೊದಲು ನೂರು ಬಾರಿ ಯೋಚಿಸಿ. ಇದರಿಂದ ನಿಮ್ಮ ಪೋಷಕರ ಮೇಲೆ ಯಾವ ರೀತಿಯ ಪರಿಣಾಮ ಬೀರುತ್ತೆ ಎಂಬುದನ್ನು ಅರ್ಥ ಮಾಡ್ಕೊಳ್ಳಿ ಎಂದು ಸಲಹೆ ನೀಡಿದ್ದಾರೆ. 


ಸೋನು ರಾಜ್ ಎಂಬವರು, ಹಿಂದೂ ಧರ್ಮಕ್ಕೆ ಕೆಟ್ಟ ಹೆಸರು ತರಲು ಪ್ರಯತ್ನಿಸುತ್ತಿದ್ದಾರೆ. ಇವರು ಯಾರು ಎಂಬುದನ್ನು ಮೊದಲು ಪತ್ತೆ ಮಾಡಬೇಕು ಎಂದು ಆಗ್ರಹಿಸಿದ್ದಾರೆ. ಈ ರೀತಿಯ ಜನರಿಂದಾಗಿ, ಸಾಮಾಜಿಕ ಮಾಧ್ಯಮಗಳಲ್ಲಿ ಧರ್ಮ ಮತ್ತು ಸಂಬಂಧಗಳ ಬಗ್ಗೆ ಅನೇಕರು ಪ್ರಶ್ನೆಗಳನ್ನು ಎತ್ತುತ್ತಾರೆ ಎಂದು ಹಲವರು ತಮ್ಮ ಅಸಮಾಧಾನವನ್ನು ಕಮೆಂಟ್‌ನಲ್ಲಿ ಹಂಚಿಕೊಂಡಿದ್ದಾರೆ. ವೈರಲ್ ಆಗಿರುವ ವಿಡಿಯೋದಲ್ಲಿ ಹುಡುಗ ಮಾತ್ರ ಯಾವುದೇ ಮಾತು ಆಡದೇ ತಲೆ ತಗ್ಗಿಸಿಕೊಂಡು ನಿಂತಿದ್ದಾನೆ.


Ads on article

Advertise in articles 1

advertising articles 2

Advertise under the article

ಸುರ