-->

ಓದುಗರ ಗಮನಕ್ಕೆ

ಓದುಗರ ಗಮನಕ್ಕೆ ಇಮುಂಗಾರು ವೆಬ್ಸೈಟ್‌ನಲ್ಲಿ ಪ್ರಕಟವಾಗುವ ಸುದ್ದಿಗಳಲ್ಲಿ ಯಾವುದೇ ಸಲಹೆಗಳಿದ್ದರೆ, ಅವುಗಳನ್ನು ಪಾಲಿಸುವ ಮುಂಚೆ ತಜ್ಞರ ಸಲಹೆಯಿಂದ ಕರಾರುವಕ್ಕಾಗಿ ಪರಿಶೀಲಿಸಿ. ಇಮುಂಗಾರು ಸಂಸ್ಥೆಯು ಯಾವುದೇ ಹಣಕಾಸಿನ ವ್ಯವಹಾರಗಳಲ್ಲಿ ತೊಡಗಿಸಿಕೊಳ್ಳುವುದಿಲ್ಲ. ಯಾವುದೇ ಹಣಕಾಸಿನ ವ್ಯವಹಾರಗಳಿಗೆ ಸಂಬಂಧಿಸಿದಂತೆ ನಮ್ಮ ಸಂಸ್ಥೆಯು ಯಾವುದೇ ಜವಾಬ್ದಾರಿಯನ್ನು ಹೊಂದಿರುವುದಿಲ್ಲ. ನಾವು ಸುದ್ದಿಗಳನ್ನು ವಾಟ್ಸಾಪ್‌ನಲ್ಲಿ ಶೇರ್ ಮಾಡುವಾಗ ಜಾಹೀರಾತು ರೂಪದಲ್ಲಿ ಮೂರನೇ ವಾಟ್ಸಾಪ್ ಗ್ರೂಪ್ ಇನ್ವೈಟ್ ಲಿಂಕ್‌ಗಳನ್ನು ಸೇರಿಸಬಹುದು, ಆದರೆ ಇದಕ್ಕೆ ನಮ್ಮ ಸಂಸ್ಥೆಗೆ ಯಾವುದೇ ಸಂಬಂಧವಿಲ್ಲ.
ಮಂಗಳೂರು: ಎಂಆರ್‌ಪಿಎಲ್‌ನಲ್ಲಿ ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ - ಡಿಪ್ಲೊಮಾ ಆದವರಿಗೆ ಅವಕಾಶ

ಮಂಗಳೂರು: ಎಂಆರ್‌ಪಿಎಲ್‌ನಲ್ಲಿ ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ - ಡಿಪ್ಲೊಮಾ ಆದವರಿಗೆ ಅವಕಾಶ


ಮಂಗಳೂರು: ಭಾರತದ ಪ್ರಮುಖ ತೈಲ ಕಂಪೆನಿಯಾದ ಒಎನ್​ಜಿಸಿ ಅಂಗಸಂಸ್ಥೆ ಮಂಗಳೂರು ರಿಫೈನರಿ ಪೆಟ್ರೋಕೆಮಿಕಲ್ಸ್​ ಲಿಮಿಟೆಡ್​ (ಎಂಆರ್​ಪಿಎಲ್​)ನಲ್ಲಿ ಅಪ್ರೆಂಟಿಸ್​ ಹುದ್ದೆಗಳಿಗೆ ಅರ್ಜಿ ಆಹ್ವಾನ ಮಾಡಲಾಗಿದೆ. ಡಿಪ್ಲೊಮಾ ಹಾಗೂ ಪದವಿ ಹೊಂದಿರುವ ಅಭ್ಯರ್ಥಿಗಳು  ಅರ್ಜಿಯನ್ನು ಹಾಕಬಹುದು.




ಪದವೀಧರ ಅಪ್ರೆಂಟಿಸ್​ ಟ್ರೈನಿ ಮತ್ತು ಟೆಕ್ನಿಶಿಯನ್​​ ಅಪ್ರೆಂಟಿಸ್​ ಟ್ರೈನಿ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಪದವೀಧರ ಅಪ್ರೆಂಟಿಸ್​ ಟ್ರೈನಿ - ಕೆಮಿಕಲ್​, ಸಿವಿಲ್​, ಮೆಕ್ಯಾನಿಕಲ್​ ಮತ್ತು ಇಲೆಕ್ಟ್ರಾನಿಕ್ಸ್​ ಆ್ಯಂಡ್​ ಕಮ್ಯೂನಿಕೇಷನ್​ನಲ್ಲಿ ಇಂಜಿನಿಯರಿಂಗ್​ ಪದವಿ ಪಡೆದವರು. ಪದವಿ ಅಥವಾ ಡಿಪ್ಲೊಮಾವನ್ನು 2020 ಮತ್ತು 2024ರೊಳಗೆ ಪೂರೈಸಿದ ಅಭ್ಯರ್ಥಿಗಳು ಅಪ್ರೆಂಟಿಸ್​ ಟ್ರೈನಿ ಹುದ್ದೆಗೆ ಅರ್ಜಿ ಸಲ್ಲಿಸಲು ಅರ್ಹರು.




ಅಭ್ಯರ್ಥಿಗಳು ಕೇಂದ್ರ ಸರ್ಕಾರದ ಎನ್​ಎಟಿಎಸ್​​ ಜಾಲತಾಣ nats.education.gov.in ಇಲ್ಲಿ ಮೊದಲು ಕಡ್ಡಾಯವಾಗಿ ನೋಂದಣಿ ಮಾಡಿಸಿರಬೇಕು. ಈ ನೋಂದಣಿ ದಾಖಲಾತಿ ಅರ್ಜಿ ಜೊತೆಗೆ ಅಗತ್ಯ ವಿದ್ಯಾರ್ಹತೆ ಮತ್ತು ಇತರೆ ಅಗತ್ಯ ದಾಖಲೆ ಮತ್ತು ಆಧಾರ್​​, ಫೋಟೋಕಾಪಿಗಳನ್ನು ಹೊಂದಿಸಿರಬೇತು. ಈ ಸಂಸ್ಥೆಯಲ್ಲಿ ಟ್ರೈನಿ ಕೋರ್ಸ್​ ನಡೆಸುವ ಇಚ್ಛಿಸುವ ಅಭ್ಯರ್ಥಿಗಳು ಕೆಳಗಿನ ಸ್ಥಳದಲ್ಲಿ ನಡೆಯುವ ಅಪ್ರೆಂಟಿಸ್​ ಮೇಳದಲ್ಲಿ ನೇರವಾಗಿ ಭಾಗಿಯಾಗಬಹುದು.

ಬಾಪೂಜಿ ಪಾಲಿಟೆಕ್ನಿಕ್​, ಬಿಐಇಟಿ ರೋಡ್​, ಶಬನೂರ್​, ದಾವಣಗೆರೆ, ಕರ್ನಾಟಕ - 577004.‌ ಇಲ್ಲಿಗೆ ಅರ್ಜಿ ಸಲ್ಲಿಸಬೇಕು. ಸೆಪ್ಟೆಂಬರ್‌ 12ರಂದು ವಾಕ್​ ಇನ್​ ನಡೆಯಲಿದೆ. ಈ ಕುರಿತು ಹೆಚ್ಚಿನ ಮಾಹಿತಿಗೆ mrpl.co.in ಇಲ್ಲಿಗೆ ಭೇಟಿ ನೀಡಬೇಕು.




Ads on article

Advertise in articles 1

advertising articles 2

Advertise under the article

ಸುರ