-->
ಎಂಆರ್‌ಐ ಸ್ಕ್ಯಾನಿಂಗ್ ಗೆ ಬರುತ್ತಿದ್ದ ಮಹಿಳೆಯರಿಗೆ ಈ ಕಾಮುಕ ಎಸಗುತ್ತಿದ್ದನೀಚ ಕೃತ್ಯ ಮಹಿಳೆಯಿಂದಲೇ ಬಯಲು

ಎಂಆರ್‌ಐ ಸ್ಕ್ಯಾನಿಂಗ್ ಗೆ ಬರುತ್ತಿದ್ದ ಮಹಿಳೆಯರಿಗೆ ಈ ಕಾಮುಕ ಎಸಗುತ್ತಿದ್ದನೀಚ ಕೃತ್ಯ ಮಹಿಳೆಯಿಂದಲೇ ಬಯಲು

ಕೊಚ್ಚಿ: ಎಂಆರ್‌ಐ ಸ್ಕ್ಯಾನಿಂಗ್ ಗೆಂದು ಬರುತ್ತಿದ್ದ ಮಹಿಳೆಯರು, ಬಟ್ಟೆ ಬದಲಾಯಿಸುವ ದೃಶ್ಯವನ್ನು ಮೊಬೈಲ್ ಕ್ಯಾಮೆರಾದಲ್ಲಿ ರಹಸ್ಯವಾಗಿ ಸೆರೆ ಹಿಡಿಯುತ್ತಿದ್ದ ರೇಡಿಯಾಲಜಿಸ್ಟ್ ನನ್ನು ಪೊಲೀಸರು ಬಂಧಿಸಿದ್ದಾರೆ. 

ರಂಜಿತ್ ಅಲಿಯಾಸ್ ನಂದು ( 24 ) ಬಂಧಿತ ರೇಡಿಯಾಲಜಿಸ್ಟ್. 

ಆರೋಪಿ ರಂಜಿತ್ ಕೊಚ್ಚಿಯ ಪತ್ತನಂತಿಟ್ಟ ಜಿಲ್ಲೆಯ ಆಡೂರ್ ಪಟ್ಟಣದಲ್ಲಿ ಜನರಲ್ ಆಸ್ಪತ್ರೆ ಬಳಿಯಿರುವ ದೇವಿ ಸ್ಕ್ಯಾನಿಂಗ್ ಸೆಂಟರ್‌ನಲ್ಲಿ ರೇಡಿಯಾಲಜಿಸ್ಟ್ ಆಗಿ ಕಾರ್ಯ ನಿರ್ವಹಿಸುತ್ತಿದ್ದ. ಎಝಂಕುಲಂ ನಿವಾಸಿ ಮಹಿಳೆಯಯೋರ್ವರು ಸ್ಕ್ಯಾನಿಂಗ್ ಮಾಡಲೆಂದು ಬಂದಿದ್ದರು. ಆಗ ಕೇವಲ ಕ್ಯಾಮೆರಾ ಮಾತ್ರ ಕಾಣುವಂತೆ ಮೊಬೈಲ್‌ಗೆ ಬಟ್ಟೆ ಸುತ್ತಿ ಕೋಣೆಯ ಕಬೋರ್ಡ್ ನಲ್ಲಿ ಇಟ್ಟಿರೋದು ಬಟ್ಟೆ ಬದಲಾಯಿಸಲು ಬಂದ ಮಹಿಳೆಯ ಗಮನಕ್ಕೆ ಬಂದಿದೆ. ಅನುಮಾನ ಬಂದು ಪರಿಶೀಲನೆ ನಡೆಸಿದಾಗ ಮೊಬೈಲ್ ಇರುವುದು ಪತ್ತೆಯಾಗಿದೆ. 

ತಕ್ಷಣ ರೆಕಾರ್ಡ್ ಆಗಿರುವ ದೃಶ್ಯಗಳನ್ನು ಡಿಲೀಟ್ ಮಾಡಿರುವ ಅವರು, ಈ ಬಗ್ಗೆ ಲ್ಯಾಬ್‌ನಲ್ಲಿ ಜೋರು ಗಲಾಟೆ ಮಾಡಿದ್ದಾರೆ. ತಕ್ಷಣ ಆರೋಪಿ ರಂಜಿತ್ ಮಹಿಳೆಯಿಂದ ಮೊಬೈಲ್ ಕಿತ್ತುಕೊಂಡಿದ್ದಾನೆ. ಆದರೆ ಈ ಸುದ್ದಿ ಹೊರಬಾರದಂತೆ ತಡೆಯಲು ಲ್ಯಾಬ್ ಆಡಳಿತ ಮಂಡಳಿ ಸಾಕಷ್ಟು ಪ್ರಯತ್ನ ಮಾಡಿದೆ. ಅಲ್ಲದೆ, ಮಹಿಳೆಗೆ ಹಣದ ಆಮಿಷವನ್ನು ಒಡ್ಡಿಲಾಗಿದೆ ಎಂದು ಹೇಳಲಾಗಿದೆ. ಆದರೆ, ಇದಾವುದಕ್ಕೂ ಜಗ್ಗದ ಮಹಿಳೆ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿ, ಆರೋಪಿಯನ್ನು ಕಂಬಿ ಹಿಂದೆ ತಳ್ಳುವಂತೆ ಮಾಡಿದ್ದಾರೆ.

ಪ್ರಕರಣ ದಾಖಲಿಸಿಕೊಂಡ ಪೊಲೀಸರು ಮೊಬೈಲ್ ವಶಕ್ಕೆ ತೆಗೆದುಕೊಂಡು ಪರಿಶೀಲನೆ ನಡೆಸಿದಾಗ 8 ಮಹಿಳೆಯರ ನಗ್ನ ವಿಡಿಯೋಗಳು ಪತ್ತೆಯಾಗಿವೆ. ಈ ಪ್ರಕರಣದ ಬಗ್ಗೆ ಮಾತನಾಡಿರುವ ಡಿವೈಎಸ್‌ಪಿ ಬಿನು, ಮೊಬೈಲ್ ಅನ್ನು ವೈಜ್ಞಾನಿಕ ಪರೀಕ್ಷೆಗೆ ಒಳಪಡಿಸಿ, ಇತರೆ ದೃಶ್ಯಗಳು ಡಿಲೀಟ್ ಆಗಿದೆಯೇ ಎಂಬುದನ್ನು ಪತ್ತೆ ಹಚ್ಚಲಾಗುವುದು ಎಂದು ತಿಳಿಸಿದ್ದಾರೆ. ಡಿವೈಎಫ್‌ಐ, ಯೂತ್ ಕಾಂಗ್ರೆಸ್ ಮತ್ತು ಬಿಜೆಪಿ ಪ್ರತಿಭಟನೆ ಹಿನ್ನೆಲೆಯಲ್ಲಿ ಲ್ಯಾಬ್ ಅನ್ನು ಮುಚ್ಚಲಾಗಿದೆ.

Ads on article

  

Advertise in articles 1

advertising articles 2

ಉಚಿತವಾಗಿ ಸುದ್ದಿ ಕೊಡುತ್ತಿರುವ ನಮಗೆ ಸಹಾಯ ಮಾಡಿ

  

Pay Rs 100

  

Advertise under the article