
Nelyadi: EVM ಮತ್ತು ಬ್ಯಾಲೆಟ್ ಪೇಪರ್ ಮೂಲಕ ಮತದಾನದ ಅರಿವು: ಶಾಲಾ ಮಂತ್ರಿಮಂಡಲ ರಚನೆ
Thursday, June 16, 2022

Nelyadi: EVM ಮತ್ತು ಬ್ಯಾಲೆಟ್ ಪೇಪರ್ ಮೂಲಕ ಮತದಾನದ ಅರಿವು: ಶಾಲಾ ಮಂತ್ರಿಮಂಡಲ ರಚನೆ
ನೆಲ್ಯಾಡಿ: ಮಕ್ಕಳಲ್ಲಿ ಮತದಾನದ ಅರಿವು ಮೂಡಿಸುವ ಸಲುವಾಗಿ ನೆಲ್ಯಾಡಿ ಬೆಥನಿ ಜ್ಞಾನೋದಯ ಪದವಿ ಪೂರ್ವ ಕಾಲೇಜಿನಲ್ಲಿ ಶಾಲಾ ಮಂತ್ರಿ ಮಂಡಲದ ಚುನಾವಣೆ ನಡೆಯಿತು.
2022-23ನೇ ಸಾಲಿನ ಈ ಶಾಲಾ ಮಂತ್ರಿ ಮಂಡಲ ಚುನಾವಣೆ ಕೇಂದ್ರ ಮತ್ತು ರಾಜ್ಯ ಸರಕಾರದ ಮಂತ್ರಿ ಮಂಡಲ ರಚನೆಯ ಪರಿಕಲ್ಪನೆ ಮೂಡಿಸುವ ರೀತಿಯಲ್ಲಿ ಹಾಗೂ ವಿದ್ಯಾರ್ಥಿಗಳಿಗೆ ಮತದಾನದ ಮತ್ತು ಪ್ರಜಾಪ್ರಭುತ್ವದ ಮಹತ್ವವನ್ನು ತಿಳಿಸುವ ಸಲುವಾಗಿ ಬ್ಯಾಲೆಟ್ ಪೇಪರ್ ಮತ್ತು Electronic Voting Machine (EVM) ಮೂಲಕ ಈ ಮತದಾನ ನಡೆಯಿತು.
ಮತದಾನ ಪ್ರತಿಯೊಬ್ಬ ಪ್ರಜೆಯ ಕರ್ತವ್ಯ ಹಾಗೂ ಮತ ಹಾಕುವ ರೀತಿ, ಮತ ಎಣಿಕೆಯ ಪ್ರಕ್ರಿಯೆ, ಎಲೆಕ್ಷನ್ ಕಮ್ಮೀಷನ್ ಬಗ್ಗೆ ಶಾಲಾ ಪ್ರಿನ್ಸಿಪಾಲ್ ರೆ.ಫಾ. ತೋಮಸ್ ಬಿಜಿಲಿ ಹಾಗೂ ಶಾಲಾ ಶಿಕ್ಷಕರು ಮಕ್ಕಳಿಗೆ ಅರಿವು ಮೂಡಿಸಿ, ಮತದಾನ ಪ್ರಕ್ರಿಯೆಗೆ ಸಹಕರಿಸಿದರು.