ಹಾಸನದಲ್ಲಿ ಯುವಕನ ಬರ್ಬರ ಹತ್ಯೆ: ಶವದೊಂದಿಗೆ ವಿಡಿಯೋ ಮಾಡಿ ವಿಕೃತಿ ಮೆರೆದ ಹಂತಕರು


ಹಾಸನ: ಇಲ್ಲಿನ ಹೊರವಲಯದ ಬಿಟ್ಟಗೌಡನಹಳ್ಳಿ ಬಳಿ ಯುವಕನೋರ್ವನನ್ನು ಕಲ್ಲು ಎತ್ತಿಹಾಕಿ ಬರ್ಬರವಾಗಿ ಹತ್ಯೆಗೈಯಲಾಗಿದೆ. 

ಹಾಸನ ತಾಲೂಕಿನ ಹೂವಿನಹಳ್ಳಿ ಕಾವಲು ಗ್ರಾಮದ ನಿವಾಸಿ ಮೆಕ್ಯಾನಿಕ್ ಕೀರ್ತಿ(22) ತಲೆ ಮೇಲೆ ಕಲ್ಲು ಎತ್ತಿಹಾಕಿ ಕೊಲೆ ಮಾಡಲಾಗಿದೆ. ಬಳಿಕ ಹಂತಕರು ಆತನ ಮೃತದೇಹದ ಮುಂದೆ ಸೆಲ್ಫಿ ವೀಡಿಯೋ ಮಾಡಿ ವಿಕೃತಿ ಮೆರೆದಿದ್ದಾರೆ. ನಾವೇ ಇವನನ್ನು ಹೊಡೆದು ಕೊಂದಿದ್ದೇವೆಂದು ಮೃತದೇಹದೊಂದಿಗೆ ಸೆಲ್ಫಿ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ. ಸದ್ಯ ಈ ವಿಡಿಯೋವನ್ನು ಆಧರಿಸಿ ಸ್ಥಳಕ್ಕೆ ಶ್ವಾನದಳ, ಎ‌ಎಸ್‌ಪಿ ಭೇಟಿ ಪರಿಶೀಲನೆ ನಡೆಸಿದ್ದು, ಹಂತಕರ ಬಂಧನಕ್ಕೆ ಬಲೆ ಬೀಸಿದ್ದಾರೆ.

ವೃತ್ತಿಯಲ್ಲಿ ಮೆಕ್ಯಾನಿಕ್ ಆಗಿದ್ದ ಕೀರ್ತಿ ಕೆಲಸ ಮಾಡುತ್ತಾ ತನ್ನ ಪಾಡಿಗೆ ತಾನಿದ್ದವನು. ರೀಲ್ಸ್ ಮಾಡುತ್ತಾ ಸ್ನೇಹಿತರೊಂದಿಗೆ ಸುತ್ತಾಡುತ್ತಿದ್ದ. ಆದರೆ ಡಿಸೆಂಬರ್ 08ರಂದು ಎಷ್ಟು ಹೊತ್ತಾದರೂ ಮೆಕ್ಯಾನಿಕ್ ಮನೆಗೆ ಬಂದಿಲ್ಲ. ಏನಾಯ್ತು ಎಂದು ಎಲ್ಲರೂ ಆತಂಕದಲ್ಲಿರುವಾಗ ಬೆಳಗ್ಗೆ ವೀಡಿಯೋ ವೊಂದು ವೈರಲ್ ಆಗಿದೆ. ಕ್ರೂರಿಯೊಬ್ಬ ಮೃತದೇಹದ ಮುಂದೆ ಸೆಲ್ಫೀ ವೀಡಿಯೋ ಮಾಡಿ ನಾವು ಕೊಲೆ ಮಾಡಿದಿವಿ ಸಾಯಿಸಿದ್ದೇವೆ ಎಂದು ಹೇಳುತ್ತ ಕ್ರೌರ್ಯ ಮೆರೆದಿದ್ದಾನೆ.

ಈ ವೀಡಿಯೋ ಜಾಡು ಹಿಡಿದು ತನಿಖೆಗಿಳಿದ ಪೊಲೀಸರಿಗೆ ಕೊಲೆಯಾಗಿದ್ದು ಓರ್ವ ಮೆಕ್ಯಾನಿಕ್. ಕೊಲೆ ಮಾಡಿದ್ದು ಆಟೋ ಚಾಲಕ ಎನ್ನುವುದು ಗೊತ್ತಾಗಿದೆ. ಒಟ್ಟಿಗೆ ಹೋಗಿ ಪಾರ್ಟಿ ಮಾಡಿ ಹಲ್ಲೆ ಮಾಡಿ ಹತ್ಯೆಗೈದಿದ್ದಾರೆ.

ಕೊಲೆ ಮಾಡಿದ ಬಳಿಕ  ಮನುಷ್ಯತ್ವ ಮರೆತ ಕ್ರೂರಿಯೊಬ್ಬ ನಾವು ಹೊಡೆದಿದ್ದೇವೆ. ನಾವು ಇವನನ್ನು ಸಾಯಿಸಿದ್ದೇವೆ ಎಂದು ವಿಕೃತ ಆನಂದಪಟ್ಟಿದ್ದಾರೆ. ಮತ್ತೊಂದು ವೀಡಿಯೋದಲ್ಲಿ ಹೇಯ್ ನಿಂತ್ಕೊಳ್ರೋ ನಾವು ದೊಡ್ಡದಾಗಿ ಬೆಳೆದು, ನಾವೂ ದೊಡ್ಡವರಾದ್ವಿ ಎಂದು ಹೇಳುತ್ತಾ ಕೊಲೆಯನ್ನು ಸಂಭ್ರಮಿಸಿದ್ದಾರೆ. ಕೊಲೆ ಮಾಡಿ ನಾವು ದೊಡ್ಡವರಾದ್ವಿ ನಾವೂ ಬೆಳೆದ್ವಿ ಎಂದು ಹೇಳುತ್ತಾ ಅಟ್ಟಹಾಸ ಮೆರೆದಿದ್ದಾರೆ. ಗಾಂಜಾ ಅಮಲಿನಲ್ಲಿ ಪುಂಡರು ರಾಕ್ಷಸೀ ಕೃತ್ಯ ಎಸಗಿದ್ದಾರೆ. ಹೀಗಾಗಿ ಈ ಹತ್ಯೆ ವಿಡಿಯೋ ಹಾಸನದಾದ್ಯಂತ ವೈರಲ್ ಆಗಿದ್ದು, ಜನರನ್ನು ಬೆಚ್ಚಿ ಬೀಳಿಸಿದೆ.

ಅಷ್ಟಕ್ಕೂ ವೀಡಿಯೋ ಮಾಡಿರುವುದು ಉಲ್ಲಾಸ್ ಎಂದು ತಿಳಿದುಬಂದಿದೆ. ಆಟೋ ಚಾಲಕನಾಗಿರುವ ಈತ ಹಾಸನ ಜಿಲ್ಲೆ ಆಲೂರು ಮೂಲದವನು. ಉಲ್ಲಾಸ್ ಹಾಗೂ ಕೀರ್ತಿ ಪರಿಚಿತರಾಗಿದ್ದರು.  ಡಿಸೆಂಬರ್ 8ರಂದು ಕೂಡ ಒಟ್ಟಿಗೆ ಇದ್ದವರು ಒಟ್ಟಿಗೆ ಪಾರ್ಟಿ ಮಾಡಿದ್ದಾರೆ. ಬಳಿಕ ಏನಾಯ್ತೋ ಏನೋ ಗೊತ್ತಿಲ್ಲ. ಜೊತೆಗಿದ್ದವನನ್ನೇ ಬಡಿದು ಕೊಂದು ಮೃತದೇಹದ ಮುಂಭಾಗ ವೀಡಿಯೋ ಮಾಡಿದ್ದಾರೆ. ಕೊಲೆ ಮಾಡಿ ವೀಡಿಯೋ ಮಾಡಿರುವ ಪಾತಕಿ  ಒಂದು ವೀಡಿಯೋದಲ್ಲಿ ಉಲ್ಲಾಸ್ ತಾನೊಬ್ಬನೇ ಇದ್ದರೆ, ಇನ್ನೊಂದು ವೀಡಿಯೋದಲ್ಲಿ ಮತ್ತಿಬ್ಬರು ಇರುವುದನ್ನು ತೋರಿಸಿದ್ದಾನೆ. ಜೊತೆಗೇ ತೆರಳಿದ್ದ ಯುವಕರ ಗುಂಪಿನ ನಡುವೆ ಗಲಾಟೆ ನಡೆದು ಕೊಲೆ ಆಗಿರುವ ಶಂಕೆ ವ್ಯಕ್ತವಾಗಿದ್ದು, ಹಾಸನ ನಗರ ಠಾಣೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಕೊಲೆಯ ಸೆಲ್ಫಿ ವೀಡಿಯೋ ವೈರಲ್ ಆಗುತ್ತಿದ್ದಂತೆ ಅಲರ್ಟ್ ಆದ ಪೊಲೀಸರು ವೀಡಿಯೋ ಜಾಡು ಹಿಡಿದು ಪರಿಶೀಲನೆ ನಡಸಿದಾಗ ಶವ ಬಿಟ್ಟಗೌಡನಹಳ್ಳಿ ಬಳಿ ಇರುವುದು ಗೊತ್ತಾಗಿದೆ. ಕೂಡಲೇ ಸ್ಥಳಕ್ಕೆ ಭೇಟಿ ನೀಡಿದ ಹಿರಿಯ ಪೊಲೀಸ್ ಅದಿಕಾರಿಗಳು, ಸ್ಥಳಕ್ಕೆ ಸೂಕೊ ಟೀಂ, ಶ್ವಾನದಳ, ಬೆರಳಚ್ಚು ತಜ್ಞರನ್ನ ಕರೆಸಿ ಪರಿಶೀಲನೆ ನಡೆಸಿದ್ದಾರೆ. ಇನ್ನೊಂದೆಡೆ ಹಾಸನ ನಗರ ಠಾಣೆ ಪೊಲೀಸರು ಉಲ್ಲಾಸ್​​ ಬಂಧನಕ್ಕೆ ಬಲೆ ಬೀಸಿದ್ದಾರೆ

BREAKING NEWS
Loading latest news...
Join our WhatsApp Channel Powered By : Online Pudu