ಬೆಳ್ತಂಗಡಿ: ಕ್ಯಾಂಟಿನ್‌ನಲ್ಲೇ ವೇಶ್ಯಾವಾಟಿಕೆ ಅಡ್ಡೆ - ಕ್ಯಾಂಟಿನ್ ಮಾಲಕ ಸೇರಿ ಮೂವರು ಅರೆಸ್ಟ್


ಬೆಳ್ತಂಗಡಿ: ತಾಲೂಕಿನ ಕಸಬಾ ಗ್ರಾಮದ ಕೆಇಬಿ ರಸ್ತೆಯ ಕ್ಯಾಂಟಿನ್‌ನಲ್ಲಿ ನಡೆಯುತ್ತಿದ್ದ  
ವೇಶ್ಯಾವಾಟಿಕೆ ಅಡ್ಡೆಗೆ ಪೊಲೀಸರು ‌ದಾಳಿ ನಡೆಸಿ, ಮೂವರನ್ನು ಬಂಧಿಸಿದ್ದಾರೆ.

ಕ್ಯಾಂಟಿನ್ ಮಾಲಕ ಸುಂದರ್ ಶೆಟ್ಟಿ ಹಾಗೂ ಆತನಿಗೆ ಸಹಕರಿಸುತ್ತಿದ್ದ ಉಸ್ಮಾನ್‌, ಹೈದರ್ ಬಂಧಿತ ಆರೋಪಿಗಳು.

ಪವನ್‌ ಎಂಬ ಹೆಸರಿನ ಕ್ಯಾಂಟಿನ್‌ನಲ್ಲಿ ವೇಶ್ಯಾವಾಟಿಕೆ ನಡೆಯುತ್ತಿದೆ‌ ಎನ್ನುವ ಖಚಿತ ಮಾಹಿತಿ ಮೇರೆಗೆ ಬೆಳ್ತಂಗಡಿ ಪೊಲೀಸರು ದಾಳಿ ನಡೆಸಿದಾಗ ವೇಶ್ಯಾವಾಟಿಕೆ ನಡೆಯುತ್ತಿರುವುದು ಬೆಳಕಿಗೆ ‌ಬಂದಿದೆ.‌ಈ ವೇಳೆ‌ 25 ವರ್ಷದ ಯುವತಿಯನ್ನು ಪೊಲೀಸರು ರಕ್ಷಿಸಿ, 5 ಸಾವಿರ ಹಣವನ್ನು ವಶಕ್ಕೆ ಪಡೆಯಲಾಗಿದೆ. ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.
BREAKING NEWS
Loading latest news...
Join our WhatsApp Channel Powered By : Online Pudu