ಡಿಜಿಟಲ್ ಅರೆಸ್ಟ್: ಮಂಗಳೂರಿನ 58 ವರ್ಷದ ಮಹಿಳೆಗೆ 1.81 ಕೋಟಿ ರೂ ವಂಚನೆ
11/14/2025 01:41:00 PM
AI ಚಿತ್ರ
ಡಿಜಿಟಲ್ ಅರೆಸ್ಟ್: ಮಂಗಳೂರಿನ 58 ವರ್ಷದ ಮಹಿಳೆಗೆ 1.81 ಕೋಟಿ ರೂ ವಂಚನೆ
ಡಿಜಿಟಲ್ ಅರೆಸ್ಟ್: ಮಂಗಳೂರಿನ 58 ವರ್ಷದ ಮಹಿಳೆಗೆ 1.81 ಕೋಟಿ ರೂ ವಂಚನೆ
ಮಂಗಳೂರು: ನಗರದ ಮಹಿಳೆಯೊಬ್ಬರನ್ನು ಡಿಜಿಟಲ್ ಅರೆಸ್ಟ ಮಾಡಿದ್ದೇವೆ ಎಂದು ನಂಬಿಸಿದ ಖದೀಮರು ಆಕೆಯ ಬಳಿಯಿದ್ದ 1.81 ಕೋಟಿ ರೂ ಹಣವನ್ನು ತಮ್ಮ ಖಾತೆಗೆ ವರ್ಗಾವಣೆ ಮಾಡಿಸಿ ವಂಚನೆ ಎಸಗಿದ ಬಗ್ಗೆ ಮಂಗಳೂರಿನ ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪರಿಚಿತ ಕರೆ ಮತ್ತು ಭಯಹುಟ್ಟಿಸುವಿಕೆ
58 ವರ್ಷದ ಮಹಿಳೆಗೆ ಅಕ್ಟೋಬರ್ 24 ರಂದು ಮದ್ಯಾಹ್ನ ಅಪರಿಚಿತ ವ್ಯಕ್ತಿ ಮೊಬೈಲ್ ಕರೆ ಮಾಡಿ ಮುಂಬಯಿಯ ಕೊಲಾಬ ಪೊಲೀಸ್ ಠಾಣೆಯಿಂದ ಕರೆ ಮಾಡುತ್ತಿರುವುದಾಗಿ ತಿಳಿಸಿದ್ದಾನೆ. ಮಹಿಳೆಯು ಮನಿ ಲಾಂಡರಿಂಗ್ ಕೇಸ್ ಹಾಗೂ ಹ್ಯುಮನ್ ಟ್ರಾಫಿಕಿಂಗ್ ಕೇಸ್ ನಲ್ಲಿ ಕಮೀಷನ್ ತೆಗೆದುಕೊಂಡಿರುವುದಾಗಿ ತಿಳಿಸಿ ನೀವು ಸಸ್ಪೆಕ್ಟ್ ಇದ್ದೀರಿ. ತನಿಖೆಯ ಬಗ್ಗೆ ನೀವು ವಿಡಿಯೋ ಕಾಲ್ ನಲ್ಲಿ ಸಹಕರಿಸಬೇಕು ಎಂದು ತಿಳಿಸಿದ್ದಾನೆ.
ವಿಡಿಯೋ ಕಾಲ್ ಮತ್ತು ಲೆಟರ್ ಕಳುಹಿಸುವಿಕೆ
ಇದರಿಂದ ಮಹಿಳೆ ಭಯಭೀತಳಾದ ಅವರು ಮಾಡಿದ ವಿಡಿಯೋ ಕಾಲ್ ನಲ್ಲಿ ಸಂಪರ್ಕದಲ್ಲಿದ್ದರು. ನಂತರ ಮಹಿಳೆಯ ಬಳಿ ಲೆಟರ್ ಬರೆಯಿಸಿಕೊಂಡು ಅದನ್ನು ಅವರ ವಾಟ್ಸ್ ಆಪ್ ನಂಬ್ರಕ್ಕೆ ಕಳುಹಿಸಿದ್ದಾರೆ.
ಪೊಲೀಸ್ ಅಧಿಕಾರಿಗಳೆಂದು ನಟಿಸಿ ಮಾಹಿತಿ ಪಡೆಯುವಿಕೆ
ನಂತರ ಮತ್ತೊಂದು ನಂಬರ್ ನಿಂದ ವಿನೋದ್ ರಾಥೋಡ್ ಹಾಗೂ ರಾಜೇಶ್ ಮಿಶ್ರಾ ಎಂಬ ಅಪರಿಚಿತ ವ್ಯಕ್ತಿಗಳು ತಾವುಗಳು ಪೊಲೀಸ್ ಅಧಿಕಾರಿಗಳೆಂದು ವಾಟ್ಸ್ ಆಪ್ ವಿಡಿಯೋ ಕರೆ ಮಾಡಿದ್ದಾರೆ. ಅವರು ಮಹಿಳೆಯ ವೈಯಕ್ತಿಕ ವಿವರಗಳನ್ನು ಹಾಗೂ ಬ್ಯಾಂಕ್ನ ವಿವರಗಳು ಹಾಗೂ ಬಾಕಿ ಮೊತ್ತವನ್ನೆಲ್ಲಾ ವಿಚಾರಿಸಿದ್ದಾರೆ.
ಬೆದರಿಕೆ ಮತ್ತು ಹಣ ವರ್ಗಾವಣೆ ಒತ್ತಾಯ
ಮರು ದಿನ ಮಹಿಳೆಗೆ ಕರೆ ಮಾಡಿ ಬ್ಯಾಂಕ್ ಖಾತೆಗಳ ಪರಿಶೀಲನೆ ಮಾಡಬೇಕು ಎಂದು ತಿಳಿಸಿ ಹಣ ಪಾವತಿಸುವಂತೆ ತಿಳಿಸಿದ್ದಾರೆ. ಈ ವಿಷಯಯನ್ನು ಯಾರಿಗೂ ತಿಳಿಸಬಾರದೆಂದು ಭಯ ಹುಟ್ಟಿಸಿ ಬೆದರಿಕೆ ಹಾಕಿರುತ್ತಾರೆ.
ಹಂತ ಹಂತವಾಗಿ 1.81 ಕೋಟಿ ವರ್ಗಾವಣೆ
ಇದರಿಂದ ಪಿರ್ಯಾದಿದಾರರು ಸಂಪೂರ್ಣವಾಗಿ ಭಯ ಭೀತಳಾಗಿ ಅಪರಿಚಿತ ವ್ಯಕ್ತಿಗಳು ನೀಡಿದ ಬೇರೆ ಬೇರೆ ಬ್ಯಾಂಕ್ ಖಾತೆಗಳಿಗೆ ಹಣ ವರ್ಗಾಯಿಸಿದ್ದಾರೆ. ದಿನಾಂಕ: 28-10-2025 ರಿಂದ 11-11-2025 ರವರೆಗೆ ಹಂತ ಹಂತವಾಗಿ ಒಟ್ಟು 1 ಕೋಟಿ 81 ಲಕ್ಷ ದ 50 ಸಾವಿರ ರೂ ಗಳನ್ನು RTGS ಮೂಲಕ ವರ್ಗಾವಣೆ ಮಾಡಿದ್ದಾರೆ. ಈ ರೀತಿಯಾಗಿ ಯಾರೋ ಅಪರಿಚಿತ ವ್ಯಕ್ತಿಗಳು ಡಿಜಿಟಲ್ ಅರೆಸ್ಟ್ ಹೆಸರಿನಲ್ಲಿ ಮಹಿಳೆಗೆ ಆನ್ ಲೈನ್ ಮೋಸ ವಂಚನೆ ಮಾಡಿರುವುದಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ ಎಂದು ಮಂಗಳೂರು ನಗರ ಪೊಲೀಸರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.