300 ಕ್ಕೂ ಹೆಚ್ಚು ಬ್ಯಾಂಕ್ ಖಾತೆ ಹಾಗೂ 250 ಕ್ಕೂ ಹೆಚ್ಚು ಸಿಮ್ : ಸೈಬರ್ ವಂಚನೆ ಮಾಡುತ್ತಿದ್ದ ಆರೋಪಿ ಅಂದರ್!

300+ ಬ್ಯಾಂಕ್ ಖಾತೆ, 250+ ಸಿಮ್: ಸೈಬರ್ ವಂಚಕ ಬಂಧನ

300 ಕ್ಕೂ ಹೆಚ್ಚು ಬ್ಯಾಂಕ್ ಖಾತೆ ಹಾಗೂ 250 ಕ್ಕೂ ಹೆಚ್ಚು ಸಿಮ್ : ಸೈಬರ್ ವಂಚನೆ ಮಾಡುತ್ತಿದ್ದ ಆರೋಪಿ ಅಂದರ್!

ಮಂಗಳೂರು: ಪ್ರಕರಣದ ಸಂಕ್ಷಿಪ್ತ ವರದಿ

ಮಂಗಳೂರು: 300 ಕ್ಕೂ ಹೆಚ್ಚು ಬ್ಯಾಂಕ್ ಖಾತೆ ಹಾಗೂ 250 ಕ್ಕೂ ಹೆಚ್ಚು ಸಿಮ್ ಬಳಸಿ ಸೈಬರ್ ವಂಚನೆ ಪ್ರಕರಣದಲ್ಲಿ ಭಾಗಿಯಾಗಿದ್ದ ಆರೋಪಿಯನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ.
Hmngte Reail kom ಯಾನೆ Mangte amosh ಬಂಧಿತ ವಂಚಕ. ಈತನು 300 ಕ್ಕೂ ಹೆಚ್ಚು ಬ್ಯಾಂಕ್ ಖಾತೆಗಳನ್ನು ಹಾಗೂ 250 ಕ್ಕೂ ಹೆಚ್ಚು ಸಿಮ್ ಕಾರ್ಡಗಳನ್ನು ಸೈಬರ್ ವಂಚನೆಗೆ ಬಳಕೆ ಮಾಡಿದ್ದನು. ಈತನಿಂದ 8 ಮೊಬೈಲ್ ಫೋನ್, 20 ವಿವಿಧ ಬ್ಯಾಂಕ್‌ಗಳ ಡೆಬಿಟ್ ಕಾರ್ಡ್‌ಗಳು, 18 ವಿವಿಧ ಬ್ಯಾಂಕ್‌ಗಳ ಪಾಸ್‌ಬುಕ್‌ಗಳು, 11 ವಿವಿಧ ಬ್ಯಾಂಕ್‌ಗಳ ಚೆಕ್‌ಬುಕ್ ಹಾಗೂ 7 ಸಿಮ್ ಕಾರ್ಡ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.
ವ್ಯಕ್ತಿಯೊಬ್ಬರಿಗೆ ಕಸ್ಟಮ್ ಹೆಸರಿನಲ್ಲಿ ಹಂತ ಹಂತವಾಗಿ ಒಟ್ಟು 7.27,000/- ಹಣವನ್ನು ಪಡೆದು ವಂಚನೆ ಮಾಡಿದ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ ಪೊಲೀಸರು ಈ ಪ್ರಕರಣದಲ್ಲಿ ತ್ರಿಪುರ ರಾಜ್ಯದ Damenjoy Reang (27) Hmngte Reail kom ಯಾನೆ Mangte amosh (33) ಎಂಬವರನ್ನು ಬಂಧಿಸಲಾಗಿತ್ತು.
ಈ ಪ್ರಕರಣದಲ್ಲಿ ಹಣ ವರ್ಗಾವಣೆಯಾಗಿರುವ ಬ್ಯಾಂಕ್ ಖಾತೆಗಳ ವಿವರಗಳನ್ನು ಪಡೆದುಕೊಂಡು ವಿವರ ಪರಿಶೀಲಿಸಿ ಬ್ಯಾಂಕ್ ಖಾತೆದಾರನಾದ Damenjoy Reang ಎಂಬಾತನನ್ನು ಬೆಂಗಳೂರಿನಲ್ಲಿ ಬಂಧಿಸಲಾಗಿದೆ.
ಈ ಪ್ರಕರಣದಲ್ಲಿ ತನಿಖೆ ಮುಂದುವರೆಸಿ ಬ್ಯಾಂಕ್ ಖಾತೆಗಳನ್ನು ಪಡೆದುಕೊಂಡು ಸೈಬರ್ ವಂಚಕರಿಗೆ ನೀಡಿದ ಸುಳಿವಿನ ಆಧಾರದಲ್ಲಿ Hmngte Reail kom @ Mangte amosh ಎಂಬಾತನನ್ನು ಬೆಂಗಳೂರಿನಲ್ಲಿ ಬಂಧಿಸಲಾಗಿದೆ.

ಪ್ರಕರಣದ ಮುಖ್ಯ ಅಂಶಗಳು

300+ ಬ್ಯಾಂಕ್ ಖಾತೆಗಳು ಮತ್ತು 250+ ಸಿಮ್‌ಗಳ ಬಳಕೆ ಮೂಲಕ ವಂಚನೆ.
ಮೊಬೈಲ್‌, ಡೆಬಿಟ್ ಕಾರ್ಡ್‌, ಪಾಸ್‌ಬುಕ್‌, ಚೆಕ್‌ಬುಕ್‌ ಸೇರಿದಂತೆ ಸಾಕಷ್ಟು ವಸ್ತುಗಳ ವಶಪಡಿಕೆ.
ತ್ರಿಪುರ ಮೂಲದ ಸಹಆರೋಪಿ ಮತ್ತು ಇನ್ನೊಬ್ಬನನ್ನು ಬೆಂಗಳೂರಿನಲ್ಲಿ ಬಂಧನೆ.

ತನಿಖೆ ಪ್ರಗತಿ

ಬ್ಯಾಂಕ್ ಖಾತೆ ವಿವರಗಳ ಪರಿಶೀಲನೆ ಮೂಲಕ ಹಣ ವರ್ಗಾವಣೆ ಹಾದಿ ಪತ್ತೆ.
ಸುಳಿವು ಆಧಾರಿತ ಶೋಧದಿಂದ ಎರಡೂ ಆರೋಪಿಗಳಿಗೂ ಬಂಧನ ಕ್ರಮ.