-->

ಓದುಗರ ಗಮನಕ್ಕೆ

ಓದುಗರ ಗಮನಕ್ಕೆ ಇಮುಂಗಾರು ವೆಬ್ಸೈಟ್‌ನಲ್ಲಿ ಪ್ರಕಟವಾಗುವ ಸುದ್ದಿಗಳಲ್ಲಿ ಯಾವುದೇ ಸಲಹೆಗಳಿದ್ದರೆ, ಅವುಗಳನ್ನು ಪಾಲಿಸುವ ಮುಂಚೆ ತಜ್ಞರ ಸಲಹೆಯಿಂದ ಕರಾರುವಕ್ಕಾಗಿ ಪರಿಶೀಲಿಸಿ. ಇಮುಂಗಾರು ಸಂಸ್ಥೆಯು ಯಾವುದೇ ಹಣಕಾಸಿನ ವ್ಯವಹಾರಗಳಲ್ಲಿ ತೊಡಗಿಸಿಕೊಳ್ಳುವುದಿಲ್ಲ. ಯಾವುದೇ ಹಣಕಾಸಿನ ವ್ಯವಹಾರಗಳಿಗೆ ಸಂಬಂಧಿಸಿದಂತೆ ನಮ್ಮ ಸಂಸ್ಥೆಯು ಯಾವುದೇ ಜವಾಬ್ದಾರಿಯನ್ನು ಹೊಂದಿರುವುದಿಲ್ಲ. ನಾವು ಸುದ್ದಿಗಳನ್ನು ವಾಟ್ಸಾಪ್‌ನಲ್ಲಿ ಶೇರ್ ಮಾಡುವಾಗ ಜಾಹೀರಾತು ರೂಪದಲ್ಲಿ ಮೂರನೇ ವಾಟ್ಸಾಪ್ ಗ್ರೂಪ್ ಇನ್ವೈಟ್ ಲಿಂಕ್‌ಗಳನ್ನು ಸೇರಿಸಬಹುದು, ಆದರೆ ಇದಕ್ಕೆ ನಮ್ಮ ಸಂಸ್ಥೆಗೆ ಯಾವುದೇ ಸಂಬಂಧವಿಲ್ಲ.
ವಿವಾಹಕ್ಕೂ ಮುನ್ನ ಉದ್ಯೋಗ, ಕುಟುಂಬ, ಆದಾಯ ಮಾತ್ರವಲ್ಲ ಇದನ್ನೂ ಪರಿಶೀಲಿಸಿ: ಯುವತಿಯ ಪೋಸ್ಟ್ ವೈರಲ್

ವಿವಾಹಕ್ಕೂ ಮುನ್ನ ಉದ್ಯೋಗ, ಕುಟುಂಬ, ಆದಾಯ ಮಾತ್ರವಲ್ಲ ಇದನ್ನೂ ಪರಿಶೀಲಿಸಿ: ಯುವತಿಯ ಪೋಸ್ಟ್ ವೈರಲ್


ಯುವತಿಯೊಬ್ಬಳು ಬಹಳ ಚಾಣಾಕ್ಷತನದಿಂದ ತನಗೆ ಗೊತ್ತುಪಡಿಸಿರುವ ಅಪಾಯಕಾರಿ ಮದುವೆಯಿಂದ ಸ್ವಲದರಲ್ಲೇ ಪಾರಾಗಿರುವ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಪೋಸ್ಟ್ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.

ವಿವಾಹಕ್ಕೂ ಮುನ್ನ ಯುವತಿಯರು ವರನ ಡಿಜಿಟಲ್ ಹಿನ್ನೆಲೆಯನ್ನು ಪರಿಶೀಲಿಸಬೇಕೆಂದು ಯುವತಿ ತನ್ನ ಪೋಸ್ಟ್‌ನಲ್ಲಿ ಒತ್ತಿ ಒತ್ತಿ ಹೇಳಿದ್ದಾಳೆ. ಬಲವಂತದ ಮದುವೆಗಳ ಬಗ್ಗೆ ತಾನು ಹಂಚಿಕೊಂಡ ರೆಡ್ಡಿಟ್ ಪೋಸ್ಟ್ ಸಾಮಾಜಿಕ ಜಾಲತಾಣ ಬಳಕೆದಾರರ ಗಮನಕ್ಕೆ ಬಂದಿದೆ ಎಂದಿರುವ 22 ವರ್ಷದ ಯುವತಿ, ಡಿಜಿಟಲ್ ಹಿನ್ನೆಲೆಯ ಬಗ್ಗೆ ಜಾಗೃತಿ ಮೂಡಿಸಿದ್ದಾರೆ.

'2025ರಲ್ಲಿ ಅರೇಂಜ್ ಮ್ಯಾರೇಜ್: ಹುಡುಗಿಯರು ಡಿಜಿಟಲ್ ಹಿನ್ನೆಲೆ ಪರಿಶೀಲನೆ ಮಾಡಬೇಕಾದ ಅಗತ್ಯ' ( Arranged Marriage in 2025: The need for girls to do digital background checks) ಎಂಬ ಶೀರ್ಷಿಕೆಯೊಂದಿಗೆ ಆಕೆ ಈ ಪೋಸ್ಟ್ ಅನ್ನು ಹಂಚಿಕೊಂಡಿದ್ದಾರೆ.

ನಾನು ಎಲ್ಲವನ್ನೂ ಪರಿಶೀಲಿಸಿದೆ. ಕೆಲವು ಉತ್ತಮ ಸ್ಥಾನದಲ್ಲಿರುವ ಪುರುಷರು ಎಷ್ಟು ಅಪಾಯಕಾರಿ ಎಂಬುದು ಇದರಿಂದ ನನಗೆ ಅರಿವಾಯಿತು ಎಂದಿರುವ ಯುವತಿ, ಹೆಚ್ಚಿನ ಹುಡುಗಿಯರು ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಕಲಿಯುವುದಕ್ಕಾಗಿ ನಾನಿದನ್ನು ಇಲ್ಲಿ ಹಂಚಿಕೊಳ್ಳುತ್ತಿದ್ದೇನೆ ಎಂದು ಹೇಳಿದ್ದಾಳೆ.

ಆತನಿಗೆ ವೃತ್ತಿಪರ ಕೆಲಸವಿತ್ತು. ಒಳ್ಳೆಯ ಸಂಪಾದನೆಯೂ ಇತ್ತು. ಹೊರಗೆ ಗೌರವಾನ್ವಿತ ವ್ಯಕ್ತಿಯಂತೆ ಕಾಣುತ್ತಿದ್ದ. ಆದರೆ, ವೈಯಕ್ತಿವಾಗಿ ಆತ ಬೇರೆ ರೀತಿ ಇದ್ದ. ಹೇಗೆಂದರೆ, ಭಾವನಾತ್ಮಕವಾಗಿ ಆತ ಅಸ್ಥಿರನಾಗಿದ್ದ, ಹೇಳದೇ ಕೇಳದೆ ಅಶ್ಲೀಲ ಫೋಟೋಗಳನ್ನು ಕಳುಹಿಸುತ್ತಿದ್ದ, ಸ್ವಯಂ-ಹಾನಿಯನ್ನು ವೈಭವೀಕರಿಸುತ್ತಿದ್ದ, ಒಪ್ಪಿಗೆಯನ್ನು ನಿರಾಕರಿಸುತ್ತಿದ್ದ ಮತ್ತು ಸಂಭಾಷಣೆಗಳನ್ನು ನಿಯಂತ್ರಿಸುವ ಗೀಳನ್ನು ಹೊಂದಿದ್ದ ಎಂದು ಯುವತಿ ಹೇಳಿಕೊಂಡಿದ್ದಾಳೆ.

ಅವನು ಗ್ರಾಫಿಕ್ ಫೋಟೋಗಳನ್ನು ಕಳುಹಿಸುವ ಮತ್ತು ಅಶ್ಲೀಲ ವಿಡಿಯೋಗಳನ್ನು ನೋಡುವ ಅತಿಯಾದ ಗೀಳು ಹೊಂದಿದ್ದ. ಅಚ್ಚರಿ ಏನೆಂದರೆ, ಈ ಬಗ್ಗೆ ಹೆಮ್ಮೆಯಿಂದ ಹೇಳುತ್ತಿದ್ದ. ಅದೊಂದು ದೊಡ್ಡ ವಿಷಯವೇ ಅಲ್ಲ ಎನ್ನುತ್ತಿದ್ದ ಎಂದು ಯುವತಿ ಪೋಸ್ಟ್‌ನಲ್ಲಿ ಹಂಚಿ ಕೊಂಡಿದಾಳೆ.

ಇತ್ತೀಚಿನ ದಿನಗಳಲ್ಲಿ ಕೇವಲ ಒಂದು ಕೆಲಸ, ಸ್ಟೇಟಸ್‌ ಅಥವಾ ಕುಟುಂಬದ ಹಿನ್ನೆಲೆಯನ್ನು ಯಾವುದೇ ಕಾರಣಕ್ಕೂ ನಂಬಬೇಡಿ. ಲಿಂಕ್ಸ್‌ಇನ್ ಹಾಗೂ ಇನ್‌ಸ್ಟಾಗ್ರಾಂ ಸೇರಿದಂತೆ ಸಾಮಾಜಿಕ ಜಾಲತಾಣ ಖಾತೆಗಳ ಕಾಮೆಂಟ್‌ಗಳನ್ನು ಒಮ್ಮೆ ಪರಿಶೀಲಿಸಿ. ನೀವೆಲ್ಲ ಬುದ್ದಿವಂತರಾಗಿರಿ, ವಿಷಯಗಳನ್ನು ಸಂಶೋಧಿಸಿ ಮತ್ತು ಏನಾದರೂ ತಪ್ಪಾಗಿದೆ ಎಂದು ನಿಮಗೆ ತಿಳಿದಾಗ ಅದನ್ನು ನಂಬಿರಿ ಎಂದು ಯುವತಿ ಮದುವೆ ಆಗುವವರಿಗೆ ಸಲಹೆಯನ್ನು ನೀಡಿದ್ದಾಳೆ. 

Ads on article

🎁 Amazon Prime ಸದಸ್ಯರಾಗಿರಿ

Amazon Prime Offer
👉 ಉಚಿತ shipping, Prime Video, shopping deals—all in one!

Disclosure: ಈ ಲಿಂಕ್ Amazon Affiliate Program ನ ಭಾಗವಾಗಿದೆ. ನೀವು ಈ ಲಿಂಕ್ ಮೂಲಕ Prime ಸದಸ್ಯರಾಗಿದರೆ, ನಮಗೆ commission ಸಿಗಬಹುದು.

Advertise in articles 1

advertising articles 2

Advertise under the article