ಶಿಕ್ಷಕಿ ಹತ್ಯೆ ಪ್ರಕರಣ: ಪುತ್ರಿಯನ್ನು ಹತ್ಯೆಗೈದ ಆರೋಪಿ ತಂದೆಯನ್ನು ಕೊಂದು ಪ್ರತೀಕಾರ
ಮಂಡ್ಯ: ಶಿಕ್ಷಕಿ ದೀಪಿಕಾ ಎಂಬಾಕೆಯನ್ನು ಮೇಲುಕೋಟೆ ಬೆಟ್ಟದಲ್ಲಿ ಬರ್ಬರವಾಗಿ ಹತ್ಯೆ ಮಾಡಿರುವವನ ತಂದೆಯನ್ನು ಯುವತಿಯ ತಂದೆ ಹತ್ಯೆ ಮಾಡಿದ್ದಾನೆ.
ಪುತ್ರಿಯನ್ನು ಕಳೆದುಕೊಂಡ ತಂದೆ ಆಕ್ರೋಶದಿಂದ ಒಂದು ವರ್ಷದ ಬಳಿಕ ದೀಪಿಕಾ ಕೊಲೆ ಆರೋಪಿ ನಿತೀಶ್ ಎಂಬಾತನ ತಂದೆಯನ್ನು ಪ್ರತೀಕಾರ ತೀರಿಸಿಕೊಳ್ಳಲು ಹತ್ಯೆ ಮಾಡಿದ್ದಾನೆ.
2024ರ ಜನವರಿ 22ರಂದು ದೀಪಿಕಾ ಮೇಲುಕೋಟೆ ಬೆಟ್ಟದಲ್ಲಿ ಮೃತದೇಹವಾಗಿ ಪತ್ತೆಯಾಗಿದ್ದಳು. ತೀವ್ರ ವಿಚಾರಣೆ ನಡೆಸಿದ್ದ ಪೊಲೀಸರು ನಿತೀಶ್ ಎಂಬಾತನನ್ನು ಬಂಧಿಸಿದ್ದರು. ಪುತ್ರಿಯನ್ನು ಕಳೆದುಕೊಂಡ ನೋವಿನಲ್ಲಿದ್ದ ದೀಪಿಕಾ ತಂದೆ ವೆಂಕಟೇಶ್ ಇದೀಗ ಆರೋಪಿ ನಿತೀಶ್‌ನ ತಂದೆ ನರಸಿಂಹೇಗೌಡನನ್ನು ಬರ್ಬರವಾಗಿ ಕೊಲೆ ಮಾಡಿದ್ದಾರೆ. ಸದ್ಯ ವೆಂಕಟೇಶ್ ಕೊಲೆ ಮಾಡಿ ಎಸ್ಕೆಪ್ ಆಗಿದ್ದಾನೆ. ಈ ಸಂಬಂಧ ಮೇಲುಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ವೆಂಕಟೇಶ್‌ಗಾಗಿ ಹುಡುಕಾಟ ನಡೆಸಿದ್ದಾರೆ.
ಎರಡು ವರ್ಷಗಳಿಂದ ಶಿಕ್ಷಿಕ ದೀಪಿಕಾ ಮತ್ತು ನಿತೀಶ್ ನಡುವೆ ಸಂಬಂಧವಿತ್ತು. ವಿವಾರ ತಿಳಿದು ನಿತೀಶ್‌ಗೆ ದೀಪಿಕಾ ಪತಿ ಹಾಗೂ ಕುಟುಂಬಸ್ಥರು ವಾರ್ನಿಂಗ್ ಕೂಡ ಕೊಟ್ಟಿದ್ದರು. ಕುಟುಂಬಸ್ಥರ ವಾರ್ನಿಂಗ್ ಬಳಿಕ ಇಬ್ಬರು ದೂರವಾಗಿದ್ದರು. ಇದರಿಂದ ನಿತೀಶ್ ಮನನೊಂದಿದ್ದನು. ಬಳಿಕ 2024 ಜನವರಿ 19ರಂದು ತನ್ನ ಹುಟ್ಟುಹಬ್ಬದ ನೆಪದಲ್ಲಿ ಮೇಲುಕೋಟೆ ಬೆಟ್ಟಕ್ಕೆ ದೀಪಿಕಾಳನ್ನು ನಿತೀಶ್ ಕರೆಸಿಕೊಂಡಿದ್ದನು. ಅಲ್ಲಿ ಇಬ್ಬರ ನಡುವೆ ಜಗಳ ಆರಂಭವಾಗಿತ್ತು. ಇದರಿಂದ ಕೋಪಗೊಂಡ ನಿತೀಶ್ ದೀಪಿಕಾಳನ್ನು ಹತ್ಯೆ ಮಾಡಿದ್ದಾನೆ.
ದೀಪಿಕಾ ರೀಲ್ಸ್‌ಗಳನ್ನು ಮಾಡುತ್ತಿದ್ದರು. ಇದರಿಂದ ಅವರು ತಮ್ಮ ಏರಿಯಾದಲ್ಲಿ ಚಿರಪರಿಚಿತರಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.