-->

ತಿಂಗಳಿಗೆ 27ಲಕ್ಷ ವೇತನ, ವರ್ಷಕ್ಕೆ 50ದಿನಗಳ ರಜೆ: ಇದು ಕ್ರಿಸ್ಟಿಯಾನೊ ರೊನಾಲ್ಡೊ ಹೊಟೇಲ್‌ನ ವಿವಿಧ ಹುದ್ದೆಗಳ ಅರ್ಜಿ ಆಹ್ವಾನಕ್ಕೆ ಮಾನದಂಡ

ತಿಂಗಳಿಗೆ 27ಲಕ್ಷ ವೇತನ, ವರ್ಷಕ್ಕೆ 50ದಿನಗಳ ರಜೆ: ಇದು ಕ್ರಿಸ್ಟಿಯಾನೊ ರೊನಾಲ್ಡೊ ಹೊಟೇಲ್‌ನ ವಿವಿಧ ಹುದ್ದೆಗಳ ಅರ್ಜಿ ಆಹ್ವಾನಕ್ಕೆ ಮಾನದಂಡ



ಮುಂಬೈ: ಪೋರ್ಚುಗೀಸ್ ಫುಟ್ಬಾಲ್ ಆಟಗಾರ ಕ್ರಿಸ್ಟಿಯಾನೊ ರೊನಾಲ್ಡೊ ಪ್ರಪಂಚದ ಅತ್ಯಂತ ಶ್ರೀಮಂತ ಕ್ರೀಡಾಪಟು. 39 ವರ್ಷದ ಕ್ರಿಸ್ಟಿಯಾನೊ ರೊನಾಲ್ಡೊ ಫುಟ್‌ಬಾಲ್ ಹೊರತುಪಡಿಸಿಯೂ ವಿವಿಧ ಉದ್ಯಮಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಅವುಗಳಲ್ಲಿ ಹೋಟೆಲ್ ಉದ್ಯಮವೂ ಒಂದು. ರೊನಾಲ್ಡೊ 2015ರಿಂದ ಸ್ಟಾರ್ ಹೋಟೆಲ್‌ಗಳನ್ನು ನಡೆಸುತ್ತಿದ್ದಾರೆ. ಪೆಸ್ತಾನಾ ಹೋಟೆಲ್ ಗ್ರೂಪ್‌ನೊಂದಿಗೆ ವ್ಯವಹಾರದಲ್ಲಿ ತೊಡಗಿಸಿಕೊಂಡಿರುವ ರೊನಾಲ್ಡೊ £30 ಮಿಲಿಯನ್ (275 ಕೋಟಿ ರೂ) ಹೂಡಿಕೆ ಮಾಡಿದ್ದಾರೆ ಎಂದು ವರದಿಯಾಗಿದೆ.


ರೊನಾಲ್ಡೊ ತಮ್ಮ ಮೊದಲ ಹೋಟೆಲ್ ಅನ್ನು ಫಂಚಲ್, ಮಾಟ್ರಿಯಾ, ಪೋರ್ಚುಗಲ್‌ನ ಪೆಸ್ತಾನಾದಲ್ಲಿ CR7 ಹೆಸರಿನಲ್ಲಿ ಆರಂಭಿಸಿದ್ದಾರೆ. ರೊನಾಲ್ಡೊ ಅವರ ಹೋಟೆಲ್‌ಗಳು ಪ್ರಸ್ತುತ ಮ್ಯಾಡ್ರಿಡ್, ಫಂಚಲ್, ಲಿಸ್ಬನ್, ಮರ್ಕೆಚ್ ಮತ್ತು ನ್ಯೂಯಾರ್ಕ್‌ನಲ್ಲಿ ಕಾರ್ಯನಿರ್ವಹಿಸುತ್ತಿವೆ. ಅವರ Pestana CR7 Gran Via ಹೋಟೆಲ್ ವಿಶ್ವದ ಐದು ಪ್ರಮುಖ ನಗರಗಳಲ್ಲಿ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿದೆ. ಇದೀಗ ಮ್ಯಾಡ್ರಿಡ್‌ನ ಸ್ಟಾರ್ ಹೋಟೆಲ್​ನಲ್ಲಿ ವಿವಿಧ ಹುದ್ದೆಗಳಿಗಾಗಿ ಅರ್ಜಿ ಆಹ್ವಾನಿಸಲಾಗಿದೆ.

ಖಾಲಿಯಿರುವ ಹುದ್ದೆಗಳು: ಜೂನಿಯರ್​ ವೇಟರ್​, ಸೂಪರ್‌ವೈಸರ್, ರಿಸೆಪ್ಷನಿಸ್ಟ್, ಬಾರ್ ಅಸಿಸ್ಟೆಂಟ್, ಜೂನಿಯರ್ ವೇಟರ್ ಹುದ್ದೆಗಳಿಗಾಗಿ ಅರ್ಜಿ ಆಹ್ವಾನಿಸಲಾಗಿದೆ.

ವಿದ್ಯಾರ್ಹತೆ ಏನು? ಈ ಹೋಟೆಲ್​ನಲ್ಲಿ ಕೆಲಸ ಮಾಡಲು ಯಾವುದೇ ವಿದ್ಯಾರ್ಹತೆಯ ಬಗ್ಗೆ ತಿಳಿಸಲಾಗಿಲ್ಲ. ಆದರೆ ಕೆಲಸ ಮಾಡಲು ಬಯಸುವವರು ಇಂಗ್ಲಿಷ್ ಜ್ಞಾನವನ್ನು ಹೊಂದಿರಬೇಕು. ಅವರು ಇಂಗ್ಲಿಷ್​ನಲ್ಲಿ ಉತ್ತಮವಾಗಿ ಮಾತನಾಡಬೇಕು ಜೊತೆಗೆ ಬರೆಯಲು ಗೊತ್ತಿರಬೇಕು. ಇದಲ್ಲದೇ ಗ್ರಾಹಕರೊಂದಿಗೆ ಹೇಗೆ ನಡೆದುಕೊಳ್ಳಬೇಕೆಂಬ ಜ್ಞಾನವನ್ನು ಹೊಂದಿರಬೇಕು. ಖಾಯಂ ಮತ್ತು ಗುತ್ತಿಗೆ ಆಧಾರದ ಮೇಲೆ ಹೋಟೆಲ್‌ಗೆ ಸೇರಲು ಇಚ್ಛಿಸುವವರು ಅರ್ಜಿ ಸಲ್ಲಿಸಲು ಸೂಚಿಸಲಾಗಿದೆ.

ಸಂಬಳ ಎಷ್ಟು: ರೊನಾಲ್ಡೊ ಅವರ ಹೋಟೆಲ್‌ಗೆ ಸೇರುವವರಿಗೆ ಕೈತುಂಬ ಸಂಬಳ ನೀಡಲಾಗುತ್ತಿದೆ. ವಿವಿಧ ಹುದ್ದೆಗಳಿಗೆ ಅನುಗುಣವಾಗಿ ಭಾರತೀಯ ರೂಪಾಯಿಯಲ್ಲಿ 27 ಲಕ್ಷದ 50 ಸಾವಿರ ರೂ. ಸಂಬಳ, ವಾರ್ಷಿಕ 50 ದಿನಗಳ ರಜೆ ಸಿಗಲಿದೆ. ಜೊತೆಗೆ ಹುಟ್ಟುಹಬ್ಬದ ಬೋನಸ್, ಎಲ್ಲಾ ಹೋಟೆಲ್ ಬಾರ್ ಮತ್ತು ರೆಸ್ಟೋರೆಂಟ್‌ಗಳಲ್ಲಿ ಶೇಕಡಾ 25 ರಷ್ಟು ರಿಯಾಯಿತಿ ನಿಡಲಾಗುತ್ತದೆ. ಇದರೊಂದಿಗೆ ಉಚಿತ ವಿಮೆಯನ್ನು ನೀಡಲಾಗುವುದು ಎಂದು ಘೋಷಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ Pestana CR7 ಅಧಿಕೃತ್​ ವೆಬ್​ಸೈಟ್​ಗೆ ಭೇಟಿ ನೀಡಿ.


ಇತ್ತೀಚೆಗೆ ಯೂಟ್ಯೂಬ್ ಪ್ಲಾಟ್‌ಫಾರ್ಮ್‌ಗೆ ಸೇರ್ಪಡೆಗೊಂಡ ಕ್ರಿಸ್ಟಿಯಾನೋ ರೊನಾಲ್ಡೊ ಒಂದೇ ದಿನದಲ್ಲಿ ಹಲವಾರು ದಾಖಲೆಗಳನ್ನು ನಿರ್ಮಿಸಿದ್ದರು. ಯೂಟ್ಯೂಬ್ ಪ್ಲಾಟ್‌ಫಾರ್ಮ್‌ನಲ್ಲಿ ಅತೀ ಹೆಚ್ಚು ಫಾಲೋವರ್ಸ್​ ಪಡೆದಿದ್ದಾರೆ. 39 ವರ್ಷ ವಯಸ್ಸಿನ ರೊನಾಲ್ಡೊ ಪ್ರಸ್ತುತ UEFA ಲೀಗ್​ಗಾಗಿ ತಯಾರಿ ನಡೆಸಿದ್ದಾರೆ. ಅಲ್ಲದೇ ರೊನಾಲ್ಡೊ ಅವರಿಗೆ ಇದು ಕೊನೆಯ ಲೀಗ್​ ಆಗಿದೆ.

Ads on article

🎁 Amazon Prime ಸದಸ್ಯರಾಗಿರಿ

Amazon Prime Offer
👉 ಉಚಿತ shipping, Prime Video, shopping deals—all in one!

Disclosure: ಈ ಲಿಂಕ್ Amazon Affiliate Program ನ ಭಾಗವಾಗಿದೆ. ನೀವು ಈ ಲಿಂಕ್ ಮೂಲಕ Prime ಸದಸ್ಯರಾಗಿದರೆ, ನಮಗೆ commission ಸಿಗಬಹುದು.

Advertise in articles 1

advertising articles 2

Advertise under the article