-->

ಓದುಗರ ಗಮನಕ್ಕೆ

ಓದುಗರ ಗಮನಕ್ಕೆ ಇಮುಂಗಾರು ವೆಬ್ಸೈಟ್‌ನಲ್ಲಿ ಪ್ರಕಟವಾಗುವ ಸುದ್ದಿಗಳಲ್ಲಿ ಯಾವುದೇ ಸಲಹೆಗಳಿದ್ದರೆ, ಅವುಗಳನ್ನು ಪಾಲಿಸುವ ಮುಂಚೆ ತಜ್ಞರ ಸಲಹೆಯಿಂದ ಕರಾರುವಕ್ಕಾಗಿ ಪರಿಶೀಲಿಸಿ. ಇಮುಂಗಾರು ಸಂಸ್ಥೆಯು ಯಾವುದೇ ಹಣಕಾಸಿನ ವ್ಯವಹಾರಗಳಲ್ಲಿ ತೊಡಗಿಸಿಕೊಳ್ಳುವುದಿಲ್ಲ. ಯಾವುದೇ ಹಣಕಾಸಿನ ವ್ಯವಹಾರಗಳಿಗೆ ಸಂಬಂಧಿಸಿದಂತೆ ನಮ್ಮ ಸಂಸ್ಥೆಯು ಯಾವುದೇ ಜವಾಬ್ದಾರಿಯನ್ನು ಹೊಂದಿರುವುದಿಲ್ಲ. ನಾವು ಸುದ್ದಿಗಳನ್ನು ವಾಟ್ಸಾಪ್‌ನಲ್ಲಿ ಶೇರ್ ಮಾಡುವಾಗ ಜಾಹೀರಾತು ರೂಪದಲ್ಲಿ ಮೂರನೇ ವಾಟ್ಸಾಪ್ ಗ್ರೂಪ್ ಇನ್ವೈಟ್ ಲಿಂಕ್‌ಗಳನ್ನು ಸೇರಿಸಬಹುದು, ಆದರೆ ಇದಕ್ಕೆ ನಮ್ಮ ಸಂಸ್ಥೆಗೆ ಯಾವುದೇ ಸಂಬಂಧವಿಲ್ಲ.
ಕೇರಳದ 25ಕೋಟಿ ರೂ. ಬಂಪರ್ ಲಾಟರಿ ಜಾಕ್‌ಪಾಟ್ ಹೊಡೆದ ಮಂಡ್ಯದ ಮೆಕಾನಿಕ್ - ಅಲ್ತಾಫ್ ಕೈಗೆ ಸಿಗುವ ಹಣವೆಷ್ಟು ಗೊತ್ತೇ?

ಕೇರಳದ 25ಕೋಟಿ ರೂ. ಬಂಪರ್ ಲಾಟರಿ ಜಾಕ್‌ಪಾಟ್ ಹೊಡೆದ ಮಂಡ್ಯದ ಮೆಕಾನಿಕ್ - ಅಲ್ತಾಫ್ ಕೈಗೆ ಸಿಗುವ ಹಣವೆಷ್ಟು ಗೊತ್ತೇ?


ಮಂಡ್ಯ: ಇಲ್ಲಿನ ಪಾಂಡವಪುರದ ಬೈಕ್‌ ಮೆಕ್ಯಾನಿಕ್ ಅಲ್ತಾಫ್‌ ಕೇರಳದ ತಿರುವೋಣಂನ 25 ಕೋಟಿ ರೂ. ಮೌಲ್ಯದ ಬಂಪರ್ ಲಾಟರಿ ಗೆದ್ದಿದ್ದಾರೆ. ತಮ್ಮ ಪರಿಚಿತರ ಮೂಲಕ ಖರೀದಿಸಿದ್ದ ಲಾಟರಿ ಟಿಕೆಟ್ ಇವರ ಬದುಕನ್ನೇ ಬದಲಿಸಿದೆ. ತೆರಿಗೆ ಮೊತ್ತ ಕಡಿತವಾಗಿ 12 ಕೋಟಿ ರೂ. ಲಾಟರಿ ಹಣವನ್ನು ಅಲ್ತಾಫ್ ಪಡೆಯಲಿದ್ದಾರೆ.

ಲಾಟರಿ ಗೆದ್ದ ವಿಚಾರ ತಿಳಿಯುತ್ತಿದ್ದಂತೆ ಅಲ್ತಾಫ್ ಕೇರಳದ ತಿರುವೋಣಂ ಕಚೇರಿಗೆ ತೆರಳಿ ಬಂಪರ್ ಲಾಟರಿ ಮೊತ್ತ ಪಡೆಯುವ ಪ್ರಕ್ರಿಯೆ ಪೂರೈಸಿ ಹಣ ಪಡೆದುಕೊಳ್ಳಲಿದ್ದಾರೆ.

ಈ ಕುರಿತು ಕೇರಳದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, "ನನ್ನ ಸ್ನೇಹಿತನ ಮನೆಗೆ ಚಿಕ್ಕವಯಸ್ಸಿನಿಂದಲೂ ಬರುತ್ತಿದ್ದೆ. ಹೀಗೆ ಬಂದಾಗಲೆಲ್ಲ ಲಾಟರಿ ಟಿಕೆಟ್​ ತೆಗೆದುಕೊಳ್ಳುತ್ತಿದ್ದೆ. ನಾನು 10 ವರ್ಷದಿಂದ ಬಂಪರ್ ಟಿಕೆಟ್ ಖರೀದಿಸುತ್ತಿದ್ದೇನೆ. ಲಾಟರಿ ಗೆಲ್ಲುವುದರ ಬಗ್ಗೆ ಯಾವುದೇ ನಿರೀಕ್ಷೆ ಇರಲಿಲ್ಲ. ಅಲ್ಲಾಹುವಿನ ಕೃಪೆಯಿಂದ ಅದೃಷ್ಟ ಕುಲಾಯಿಸಿದೆ" ಎಂದರು.​


ಬುಧವಾರ ತಿರುವೋಣಂ ಬಂಪರ್ ಲಾಟರಿ ಡ್ರಾ ನಡೆಯಿತು. 71 ಲಕ್ಷ ಟಿಕೆಟ್‌ಗಳು ಮಾರಾಟವಾದ ಓಣಂ ಬಂಪರ್‌ನಲ್ಲಿ 25 ಕೋಟಿ ರೂ ಮೊದಲ ಬಹುಮಾನವಾಗಿತ್ತು. ಅಂತಿಮವಾಗಿ, ಅದು ಕರ್ನಾಟಕದ ಪಾಂಡವಪುರದ ಮೂಲದ ಅಲ್ತಾಫ್ ಪಾಲಾಗಿದೆ.

25 ಕೋಟಿ ರೂ ಲಾಟರಿ ಹೊಡೆದವರಿಗೆ ಆ ಮೊತ್ತ ಪೂರ್ತಿ ಕೈಗೆ ಸಿಗುವುದಿಲ್ಲ. ತೆರಿಗೆ ಕಡಿತಗೊಳಿಸಿ ಉಳಿದ ಮೊತ್ತವನ್ನು ವಿಜೇತರಿಗೆ ನೀಡಲಾಗುತ್ತದೆ. ಹಾಗಾಗಿ, 12.88 ಕೋಟಿ ರೂ. ಮಾತ್ರ ಅದೃಷ್ಟವಂತರಿಗೆ ಸಿಗುತ್ತದೆ.


ಲಾಟರಿ ಬಹುಮಾನದ ಮೊತ್ತ 25 ಕೋಟಿ ರೂ.

ಏಜೆಂಟ್ ಕಮಿಷನ್(ಶೇ. 10)- 2.5 ಕೋಟಿ ರೂ.

ಟಿಡಿಎಸ್(ಶೇ. 30)- 6.75 ಕೋಟಿ ರೂ.

ಸರ್ಚಾರ್ಜ್(ಶೇ. 37)- 2.49 ಕೋಟಿ ರೂ.

ಆರೋಗ್ಯ ಮತ್ತು ಶಿಕ್ಷಣ ಸೆಸ್(ಶೇ. 4)- 36,99,000 ರೂ.

ಒಟ್ಟು ತೆರಿಗೆ9.61 ಕೋಟಿ ರೂ.



Ads on article

Advertise in articles 1

advertising articles 2

Advertise under the article

ಸುರ