-->

ಓದುಗರ ಗಮನಕ್ಕೆ

ಓದುಗರ ಗಮನಕ್ಕೆ ಇಮುಂಗಾರು ವೆಬ್ಸೈಟ್‌ನಲ್ಲಿ ಪ್ರಕಟವಾಗುವ ಸುದ್ದಿಗಳಲ್ಲಿ ಯಾವುದೇ ಸಲಹೆಗಳಿದ್ದರೆ, ಅವುಗಳನ್ನು ಪಾಲಿಸುವ ಮುಂಚೆ ತಜ್ಞರ ಸಲಹೆಯಿಂದ ಕರಾರುವಕ್ಕಾಗಿ ಪರಿಶೀಲಿಸಿ. ಇಮುಂಗಾರು ಸಂಸ್ಥೆಯು ಯಾವುದೇ ಹಣಕಾಸಿನ ವ್ಯವಹಾರಗಳಲ್ಲಿ ತೊಡಗಿಸಿಕೊಳ್ಳುವುದಿಲ್ಲ. ಯಾವುದೇ ಹಣಕಾಸಿನ ವ್ಯವಹಾರಗಳಿಗೆ ಸಂಬಂಧಿಸಿದಂತೆ ನಮ್ಮ ಸಂಸ್ಥೆಯು ಯಾವುದೇ ಜವಾಬ್ದಾರಿಯನ್ನು ಹೊಂದಿರುವುದಿಲ್ಲ. ನಾವು ಸುದ್ದಿಗಳನ್ನು ವಾಟ್ಸಾಪ್‌ನಲ್ಲಿ ಶೇರ್ ಮಾಡುವಾಗ ಜಾಹೀರಾತು ರೂಪದಲ್ಲಿ ಮೂರನೇ ವಾಟ್ಸಾಪ್ ಗ್ರೂಪ್ ಇನ್ವೈಟ್ ಲಿಂಕ್‌ಗಳನ್ನು ಸೇರಿಸಬಹುದು, ಆದರೆ ಇದಕ್ಕೆ ನಮ್ಮ ಸಂಸ್ಥೆಗೆ ಯಾವುದೇ ಸಂಬಂಧವಿಲ್ಲ.
ಅಡುಗೆ ಮನೆಯಲ್ಲಿ ಯಾವ ವಸ್ತುಗಳನ್ನು ಇಡುವುದು ವಾಸ್ತುಪ್ರಕಾರ ಸೂಕ್ತವಲ್ಲ

ಅಡುಗೆ ಮನೆಯಲ್ಲಿ ಯಾವ ವಸ್ತುಗಳನ್ನು ಇಡುವುದು ವಾಸ್ತುಪ್ರಕಾರ ಸೂಕ್ತವಲ್ಲ


ಅಡುಗೆ ಮನೆಯು ವಸ್ತು ಪ್ರಕಾರ ಅತಿ ಮುಖ್ಯ ಭಾಗವಾಗಿದೆ . ಕೆಲವರು ತಮ್ಮ ಅಡುಗೆಮನೆಯನ್ನು ಚೆನ್ನಾಗಿ ಅಲಂಕರಿಸಲು ಮತ್ತು ಅಚ್ಚುಕಟ್ಟಾಗಿ ಇಡಲು ಇಷ್ಟಪಡುತ್ತಾರೆ. ಅವರು ಎಲ್ಲವನ್ನೂ ವ್ಯವಸ್ಥಿತವಾಗಿ ಇರಿಸುತ್ತಾರೆ ಮತ್ತು ತಮ್ಮ ಪಾತ್ರೆಗಳನ್ನು ಚೆನ್ನಾಗಿ ಜೋಡಿಸುತ್ತಾರ. 
ಅದೇ ಸಮಯದಲ್ಲಿ ಕೆಲವು ಪಾತ್ರೆಗಳನ್ನು ಸ್ವಚ್ಛಗೊಳಿಸಿದ ನಂತರ ಅಥವಾ ಬಳಸಿದ ನಂತರ ತಲೆಕೆಳಗಾಗಿ ಇಡಬಾರದು, ಹಾಗೆ ಮಾಡುವುದರಿಂದ ಅಶುಭವೆಂದು ಪರಿಗಣಿಸಲಾಗುತ್ತದೆ ಹೀಗೆ ಅಡುಗೆ ಮನೆಯ ವಿಚಾರದಲ್ಲಿ ಅನೇಕ ನಿಯಮಗಳಿದೆ.
ಹಳೆಯದಾದ ಅಥವಾ ಮುರಿದ ಅಡಿಗೆ ಉಪಕರಣಗಳು ಸಂಪತ್ತಿನ ತಡೆಗೋಡೆಯಾಗಿ ನನಿಲ್ಲುತ್ತದೆ ಎನ್ನಲಾಗುತ್ತದೆ. ಅಲ್ಲದೇ, ಇದು ಅಡುಗೆ ಮನೆಯಲ್ಲಿ ಹೆಚ್ಚಿನ ಜಾಗವನ್ನ ಸಹ ತೆಗೆದುಕೊಳ್ಳುತ್ತದೆ. ನೀವು ಸರಿಪಡಿಸಲು ಸಾಧ್ಯವಾಗದ ಅಥವಾ ಇನ್ನು ಮುಂದೆ ಬಳಸದ ಆ ಉಪಕರಣಗಳನ್ನ ನೀವು ಹೊರಗೆ ಹಾಕುವುದು ಬಹಳ ಮುಖ್ಯ ಎನ್ನಲಾಗುತ್ತದೆ. ಇದರ ಪರಿಣಾಮವಾಗಿ ತಾಜಾ ಶಕ್ತಿ ಮತ್ತು ಅವಕಾಶಗಳನ್ನು ಪಡೆಯಲು ನಿಮಗೆ ಸಹಾಯವಾಗುತ್ತದೆ. ಅಲ್ಲದೇ, ಇದರಿಂದ ನಿಮಗೆ ಆರ್ಥಿಕವಾಗಿ ಸಹ ಬಹಳ ಲಾಭಗಳಾಗುತ್ತದೆ
ರೊಟ್ಟಿ ಮಾಡಿದ ನಂತರ ನೀವು ಪ್ಯಾನ್ ಅನ್ನು ತಲೆಕೆಳಗಾಗಿ ಇಟ್ಟರೆ ಅದನ್ನು ಅಶುಭವೆಂದು ಪರಿಗಣಿಸಲಾಗುತ್ತದೆ. ರೊಟ್ಟಿ ಮಾಡಿ ನಂತರ ಬಾಣಲೆ ತೆಗೆದು ತಲೆಕೆಳಗಾಗಿ ಇಡುವ ಅಭ್ಯಾಸ ಅನೇಕರಿಗೆ ಇದೆ. ಇದನ್ನು ಅಶುಭವೆಂದು ಪರಿಗಣಿಸಲಾಗುತ್ತದೆ ಮತ್ತು ಮನೆಯಲ್ಲಿ ಹಣದ ಕೊರತೆಯನ್ನು ಉಂಟುಮಾಡಬಹುದು ಮತ್ತು ಸಾಲದ ಹೊರೆಗೆ ಕಾರಣವಾಗಬಹುದು ಎನ್ನಲಾಗುತ್ತದೆ. ಇದು ಮನೆಯಲ್ಲಿ ಋಣಾತ್ಮಕ ಶಕ್ತಿಯನ್ನು ಹೆಚ್ಚಿಸುವುದರಿಂದ ಕಡಾಯಿಯನ್ನು ತಲೆಕೆಳಗಾಗಿ ಇಡಬಾರದು ಎನ್ನುವ ನಿಯಮವಿದೆ. ಇದು ರಾಹುವಿನ ಪ್ರಭಾವವನ್ನೂ ಹೆಚ್ಚಿಸಬಹುದು. ಮನೆಯಲ್ಲಿ ಅಶಾಂತಿಯನ್ನು ತಪ್ಪಿಸಲು ಕಡಾಯಿಯನ್ನ ತಲೆ ಕೆಳಗೆ ಮಾಡಿ ಇಡಬೇಡಿ.
ಚಾಕುಗಳು, ಕತ್ತರಿಗಳು ಮತ್ತು ಇತರ ಚೂಪಾದ ವಸ್ತುಗಳನ್ನು ಸರಿಯಾದ ಸ್ಥಳಗಳಲ್ಲಿ ಮಾತ್ರ ಇಡಬೇಕು ಎನ್ನುವ ನಿಯಮವಿದೆ. ನೀವು ಅವುಗಳನ್ನ ಎಲ್ಲರಿಗೂ ಕಾಣುವಂತೆ ಯಾವುದೇ ಕಾರಣಕ್ಕೂ ಇಡಬಾರದು. ಅವುಗಳನ್ನು ಇಟ್ಟ ಸ್ಥಳದಿಂದ ಹೊರಗಿಡುವುದು ಹಣಕಾಸಿನ ಅಸ್ಥಿರತೆಗೆ ಕಾರಣವಾಗಬಹುದು. ಹಣಕಾಸಿನ ಸಮಸ್ಯೆಗಳನ್ನ ಕಡಿಮೆ ಮಾಡಿಕೊಳ್ಳಲು ನೀವು ಈ ಚೂಪದ ವಸ್ತುಗಳನ್ನ ಸರಿಯಾದ ಜಾಗದಲ್ಲಿ ಇಡುವುದು ಬಹಳ ಮುಖ್ಯ.
ಹಿತ್ತಾಳೆ, ತಾಮ್ರ, ಉಕ್ಕು ಮತ್ತು ಕಂಚಿನ ಪಾತ್ರೆಗಳನ್ನು ಪಶ್ಚಿಮ ದಿಕ್ಕಿನಲ್ಲಿ ಇಡುವುದು ಉತ್ತಮ. ಬಿಸಿಯಾದ ಬಾಣಲೆಯಲ್ಲಿ ಯಾವಾಗಲೂ ನೀರನ್ನು ಸುರಿಯಬೇಡಿ. ಇದರಿಂದ ತೊಂದರೆಗಳು ಬರುತ್ತದೆ. ಏಕೆಂದರೆ ಅದರಿಂದ ಹೊರಬರುವ ಉಗಿ ಮನೆಗೆ ನಕಾರಾತ್ಮಕ ಶಕ್ತಿಯನ್ನು ತರಬಹುದು.

Ads on article

🎁 Amazon Prime ಸದಸ್ಯರಾಗಿರಿ

Amazon Prime Offer
👉 ಉಚಿತ shipping, Prime Video, shopping deals—all in one!

Disclosure: ಈ ಲಿಂಕ್ Amazon Affiliate Program ನ ಭಾಗವಾಗಿದೆ. ನೀವು ಈ ಲಿಂಕ್ ಮೂಲಕ Prime ಸದಸ್ಯರಾಗಿದರೆ, ನಮಗೆ commission ಸಿಗಬಹುದು.

Advertise in articles 1

advertising articles 2

Advertise under the article