
"ಜಗನ್ಮೋಹನ", "ಶೋಭಾಯಮಾನ": ಆಳ್ವಾಸ್‌ನಲ್ಲಿ ಮತ್ತೆರಡು ಕಟ್ಟಡಗಳ ಲೋಕಾರ್ಪಣೆ
"ಜಗನ್ಮೋಹನ", "ಶೋಭಾಯಮಾನ": ಆಳ್ವಾಸ್‌ನಲ್ಲಿ ಮತ್ತೆರಡು ಕಟ್ಟಡಗಳ ಲೋಕಾರ್ಪಣೆ
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದಿಂದ ಎರಡು ಕಟ್ಟಡಗಳ ಲೋಕಾರ್ಪಣೆ ನಡೆದಿದ್ದು, "ಜಗನ್ಮೋಹನ", "ಶೋಭಾಯಮಾನ" ಕಟ್ಟಡಗಳ ಉದ್ಘಾಟನಾ ಕಾರ್ಯಕ್ರಮ ಯಶಸ್ವಿಯಾಗಿ ನಡೆದಿದೆ.
ಜಗಜ್ಯೋತಿ ಬಸವೇಶ್ವರ ವೃತ್ತದ ಜ್ಞಾನಯೋಗಿ ಸರ್ವಜ್ಞ ಆವರಣದಲ್ಲಿ ನೂತನವಾಗಿ ಕಾಲೇಜು ಸಂಕೀರ್ಣ ಮತ್ತು ವಿದ್ಯಾರ್ಥಿನಿ ವಸತಿ ನಿಲಯ ಲೋಕಾರ್ಪಣೆ ಗೊಂಡಿತು.
ನೂತನ ಕಾಲೇಜು ಸಂಕೀರ್ಣ "ಜಗನ್ಮೋಹನ"ದ ಉದ್ಘಾಟನೆಯನ್ನು ಕರ್ನಾಟಕ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ರಾಜ್ಯ ಮುಖ್ಯ ಆಯುಕ್ತ ಪಿ.ಜಿ.ಆರ್. ಸಿಂಧ್ಯಾ ಮತ್ತು ಉದ್ಯಮಿ ಕೆ. ಶ್ರೀಪತಿ ಭಟ್ ನೆರವೇರಿಸಿದರು.
ಡಾ. ಎಂ. ಮೋಹನ ಆಳ್ವ ಅವರ ಧರ್ಮಪತ್ನಿ ದಿ. ಶೋಭಾ ಆಳ್ವ ಅವರ ನೆನಪಿಗಾಗಿ ನೂತನ ವಿದ್ಯಾರ್ಥಿನಿಯರ ವಸತಿ ನಿಲಯಕ್ಕೆ "ಶೋಭಾಯಮಾನ" ಎಂಬ ಹೆಸರಿಡಲಾಗಿದ್ದು, ಇದರ ಉದ್ಘಾಟನೆಯನ್ನು ಲಲಿತ ರಾಮಣ್ಣ ಶೆಟ್ಟಿ ಮತ್ತು ಜಯಶ್ರೀ ಅಮರನಾಥ ಶೆಟ್ಟಿ ಅವರು ನೆರವೇರಿಸಿದರು...