-->

ಓದುಗರ ಗಮನಕ್ಕೆ

ಓದುಗರ ಗಮನಕ್ಕೆ ಇಮುಂಗಾರು ವೆಬ್ಸೈಟ್‌ನಲ್ಲಿ ಪ್ರಕಟವಾಗುವ ಸುದ್ದಿಗಳಲ್ಲಿ ಯಾವುದೇ ಸಲಹೆಗಳಿದ್ದರೆ, ಅವುಗಳನ್ನು ಪಾಲಿಸುವ ಮುಂಚೆ ತಜ್ಞರ ಸಲಹೆಯಿಂದ ಕರಾರುವಕ್ಕಾಗಿ ಪರಿಶೀಲಿಸಿ. ಇಮುಂಗಾರು ಸಂಸ್ಥೆಯು ಯಾವುದೇ ಹಣಕಾಸಿನ ವ್ಯವಹಾರಗಳಲ್ಲಿ ತೊಡಗಿಸಿಕೊಳ್ಳುವುದಿಲ್ಲ. ಯಾವುದೇ ಹಣಕಾಸಿನ ವ್ಯವಹಾರಗಳಿಗೆ ಸಂಬಂಧಿಸಿದಂತೆ ನಮ್ಮ ಸಂಸ್ಥೆಯು ಯಾವುದೇ ಜವಾಬ್ದಾರಿಯನ್ನು ಹೊಂದಿರುವುದಿಲ್ಲ. ನಾವು ಸುದ್ದಿಗಳನ್ನು ವಾಟ್ಸಾಪ್‌ನಲ್ಲಿ ಶೇರ್ ಮಾಡುವಾಗ ಜಾಹೀರಾತು ರೂಪದಲ್ಲಿ ಮೂರನೇ ವಾಟ್ಸಾಪ್ ಗ್ರೂಪ್ ಇನ್ವೈಟ್ ಲಿಂಕ್‌ಗಳನ್ನು ಸೇರಿಸಬಹುದು, ಆದರೆ ಇದಕ್ಕೆ ನಮ್ಮ ಸಂಸ್ಥೆಗೆ ಯಾವುದೇ ಸಂಬಂಧವಿಲ್ಲ.
ತುಳು ಸಿನಿಮಾದಲ್ಲಿ ಹೊಸತನ ಶ್ರೀಮಂತಿಕೆ ಬಯಸುವವರು ಯಾನ್ ಸೂಪರ್ ಸ್ಟಾರ್ ನೋಡಲೇಬೇಕು!

ತುಳು ಸಿನಿಮಾದಲ್ಲಿ ಹೊಸತನ ಶ್ರೀಮಂತಿಕೆ ಬಯಸುವವರು ಯಾನ್ ಸೂಪರ್ ಸ್ಟಾರ್ ನೋಡಲೇಬೇಕು!



ತುಳು ಚಿತ್ರರಂಗ ನಿಂತ ನೀರಾಗಿದೆ. ತುಳು ಚಿತ್ರರಂಗವು ಕಳೆದ ಒಂದು ದಶಕಗಳಿಂದ ಹೊಸ ಹೊಸ ಸಿನಿಮಾಗಳನ್ನು ನೀಡುತ್ತಲೇ ಬಂದಿದೆ. ರಂಗ ಸಿನಿಮಾದ ಬಳಿಕ ತುಳು ಚಿತ್ರರಂಗದಲ್ಲಿ ಹಲವು ಸಿನಿಮಾಗಳು ಕೊಡುಗೆ ನೀಡಿದೆ. ನೂರಾರು ಸಿನಿಮಾಗಳು ಬಂದು ಹೋಗಿವೆ. ಹಲವು ಸಿನಿಮಾಗಳು ಹಿಟ್ ಆಗಿವೆ. ಆದರೆ ಈ ಸಿನಿಮಾಗಳೆಲ್ಲವೂ ಕಾಮಿಡಿಯನ್ನು ಬಿಟ್ಟು ಹೊರಬರಲೆ ಇಲ್ಲ.


ತುಳು ಚಿತ್ರರಂಗದಲ್ಲಿ ಕಾಮಿಡಿಯನ್ನು ಬಿಟ್ಟು ಹೊಸ ಪ್ರಯೋಗಗಳನ್ನು ಮಾಡಿದ ಪಡ್ಡಾಯಿ, ಕೊರಮ್ಮ ಸಿನಿಮಾಗಳು ನಿರ್ಮಾಪಕರ ಜೇಬನ್ನು ಖಾಲಿ ಮಾಡಿದಷ್ಟೇ. ಈ ಸಿನಿಮಾಗಳತ್ತ ಪ್ರೇಕ್ಷಕರು ಬರಲೇ ಇಲ್ಲ. ಕೊರಮ್ಮ ಪಡ್ಡಾಯಿಯಂತಹ ಅದ್ಭುತ ಸಿನಿಮಾಗಳು ಬಂದರೂ ಕಾಮಿಡಿಯನ್ನೇ ಇಷ್ಟ ಪಟ್ಟ ಪ್ರೇಕ್ಷಕರು ಈ ಸಿನಿಮಾಗಳನ್ನು ಬೆಳೆಸಲಿಲ್ಲ.

ತುಳು ಚಿತ್ರರಂಗ ಎಂದರೆ ಕಾಮಿಡಿ ಎಂದೆ ಆಗಿದೆ. ಇಲ್ಲಿರುವ ನಾಲ್ಕೈದು ಹಿರಿಯ ಹಾಸ್ಯ ಕಲಾವಿದರನ್ನು ಹಾಕಿಕೊಂಡು ಸಿನಿಮಾಗಳನ್ನು ಮಾಡಿ ಮುಗಿಸುವುದು ತುಳು ಚಿತ್ರರಂಗದ ಮಾಮೂಲಿ ಕಥೆ. ಇಂಥದನ್ನೆಲ್ಲ ನೋಡಿಕೊಂಡು ಬಂದ ಪ್ರೇಕ್ಷಕರು ತುಳು ಚಿತ್ರರಂಗದಲ್ಲಿ ಹೊಸತನವನ್ನು ಬಯಸುತ್ತಿದ್ದಾರೆ. ಆದರೆ ಯಾರು ಕೂಡ ಸಿನಿಮಾ ದಲ್ಲಿ ಹೊಸತನ ಕೊಡಲು ಮುಂದೆ ಬಂದಿಲ್ಲ.

ಆದರೆ ಇದೀಗ ಮುಂಬೈಯ ತಂಡ ಒಂದು ತುಳು ಚಿತ್ರರಂಗದಲ್ಲಿ ಕ್ರಾಂತಿಯನ್ನು ಮಾಡಲು ಹೊರಟಿದೆ. ಹಿಂದಿಯ ಸಿಐಡಿ ಧಾರವಾಹಿಯ ತಂಡ ತುಳುವಿನಲ್ಲಿ ಯಾನ್ ಸೂಪರ್ ಸ್ಟಾರ್ ಎಂಬ ಸಿನಿಮಾವನ್ನು ಮಾಡಿದ್ದು ಈ ಸಿನಿಮಾ  ಬಿಡುಗಡೆ ಕಂಡಿದೆ.

ಈ ಸಿನಿಮಾ ಈವರೆಗಿನ ತುಳು ಚಿತ್ರರಂಗದ ಹಳಿಯನ್ನು ಬದಲಿಸಿದೆ. ಮಾಮೂಲಿ ಕಾಮಿಡಿ ಬಿಟ್ಟು ಹೊಸ ಕಥೆಯನ್ನು ಇಟ್ಟುಕೊಂಡು ಸಿನಿಮಾ ಮಾಡಿದೆ. ಕಾಮಿಡಿಗೆ ಕೊಡಬೇಕಾದ ಸ್ಥಾನಮಾನವನ್ನು ಮಾತ್ರ ಕೊಟ್ಟು ಅದ್ಭುತ ಸಿನಿಮಾ ಬಂದಿದೆ. ಹಿಂದಿಯ ಸಿಐಡಿ ತಂಡದ ದಯಾನಂದ ಶೆಟ್ಟಿ ಅವರು ನಾಯಕರಾಗಿ ನಟಿಸಿದ ಈ ಸಿನಿಮಾ ತುಳು ಚಿತ್ರರಂಗದಲ್ಲಿ ಅದ್ಭುತ ಪ್ರಯೋಗವೇ ಎನ್ನಬಹುದು.

ಕರಾವಳಿಯಲ್ಲಿ ಶೂಟಿಂಗ್ ಆದ ಈ ಸಿನಿಮಾ ಚಿತ್ರೀಕರಣವನ್ನು ಸಿಐಡಿ ಧಾರವಾಹಿಯ ಕ್ಯಾಮರ ಮೆನ್ ಅವರೇ ಮಾಡಿದ್ದು ಅದ್ಭುತವಾಗಿ ಚಿತ್ರೀಕರಣ ಮಾಡಿದ್ದಾರೆ. ಸಿನಿಮಾದಲ್ಲಿ ಪ್ರತಿಯೊಬ್ಬರ ನಟನೆಯು ಅತ್ಯುತ್ತಮವಾಗಿದ್ದು ಎಲ್ಲಿಯೂ ಬೋರ್ ಹಿಡಿಸದಂತೆ ಎಡಿಟಿಂಗ್ ಮಾಡಲಾಗಿದೆ. ಇಲ್ಲಿ ಬರುವ ಪ್ರತಿ ದೃಶ್ಯವೂ ಅನಗತ್ಯ ಎಂದು ಕಂಡು ಬರಲೇ ಇಲ್ಲ. ಕ್ಯಾಮರ ವರ್ಕ್ ,ಕಥೆ ,ಸಂಭಾಷಣೆ ,ಎಡಿಟಿಂಗ್ ಅಭಿನಯ ಎಲ್ಲವೂ ಶ್ರೀಮಂತವಾಗಿ ಇತ್ತು. ಈ ತುಳು ಸಿನಿಮಾ ನೋಡಿದಾಗ ಕನ್ನಡದಲ್ಲಿ ಬರುವ ಸಿನಿಮಾದ ಶ್ರೀಮಂತಿಕೆಯನ್ನು ಹೊಂದಿತ್ತು ಎಂದರೆ ತಪ್ಪಾಗಲಾರದು.

ಮೊದಲ ಬಾರಿಗೆ ತುಳುವಿನಲ್ಲಿ ಇಂತಹ ಅದ್ಭುತ ಸಿನಿಮಾ ಬಂದಿದೆ. ಈ ಸಿನಿಮಾವನ್ನು ತುಳುವಿನಲ್ಲಿ ಶ್ರೀಮಂತಿಕೆ ಮತ್ತು ಹೊಸತನ ಬಯಸುವ ಪ್ರತಿಯೊಬ್ಬರು ನೋಡಲೇಬೇಕಾಗಿದೆ. ಅದರಲ್ಲಿಯೂ ಕಾಮಿಡಿಯನ್ನು ಕೊಟ್ಟು ಸಿನಿಮಾ ಮಾಡುವ ತುಳು ಚಿತ್ರರಂಗದ ಎಲ್ಲರೂ ಕಡ್ಡಾಯ ನೋಡಲೇಬೇಕಾದ ಸಿನಿಮ ಇದು.


 ಸಿಐಡಿ ದಯಾ ಖ್ಯಾತಿಯ ದಯಾನಂದ ಶೆಟ್ಟಿ ಅವರು, "ಹಿಂದಿ ಸಿನಿಮಾ ಮತ್ತು ಧಾರವಾಹಿ ಕ್ಷೇತ್ರದಲ್ಲಿ ನಾನು ಕಳೆದ 25 ವರ್ಷಗಳಿಂದ ದುಡಿಯುತ್ತಿದ್ದೇನೆ. ನಾನೆಲ್ಲಿ ಹೋದರೂ ತುಳು ಸಿನಿಮಾ ಯಾವಾಗ ಮಾಡುತ್ತೀರಿ ಎಂದು ಪ್ರಶ್ನಿಸುತ್ತಿದ್ದರು. ಈಗ ನಾನು ನಟಿಸಿರುವ ಯಾನ್ ಸೂಪರ್ ಸ್ಟಾರ್ ತುಳು ಸಿನಿಮಾ ಬಿಡುಗಡೆಗೆ ತಯಾರಾಗಿದ್ದು ಶುಕ್ರವಾರ ಬಿಡುಗಡೆಯಾಗಿದೆ. ಮೇಕಿಂಗ್, ನಿರ್ದೇಶನ ಎಲ್ಲದರಲ್ಲೂ ಗ್ರ್ಯಾಂಡ್ ಆಗಿರುವ ಸಿನಿಮಾವನ್ನು ಖಂಡಿತಾ ತುಳುವರು ಇಷ್ಟಪಡುತ್ತಾರೆ ಎಂಬ ವಿಶ್ವಾಸವಿದೆ" ಎಂದು ಹೇಳುತ್ತಾರೆ.
 
 ಯಾನ್ ಸೂಪರ್ ಸ್ಟಾರ್ ಸಿನಿಮಾ ಮಂಗಳೂರಿನ ರೂಪವಾಣಿ, ಭಾರತ್ ಸಿನಿಮಾಸ್, ಪಿವಿಆರ್, ಸಿನಿಪೊಲಿಸ್, ಉಡುಪಿಯಲ್ಲಿ ಕಲ್ಪನ, ಮಣಿಪಾಲದಲ್ಲಿ ಐನಾಕ್ಸ್, ಭಾರತ್ ಸಿನಿಮಾಸ್, ಪಡುಬಿದ್ರೆಯಲ್ಲಿ ಭಾರತ್ ಸಿನಿಮಾಸ್, ಕಾರ್ಕಳದಲ್ಲಿ ರಾಧಿಕಾ, ಪ್ಲಾನೆಟ್, ಬೆಳ್ತಂಗಡಿಯಲ್ಲಿ ಭಾರತ್,  ಸುರತ್ಕಲ್ ನಲ್ಲಿ ನಟರಾಜ್, ಸಿನಿಗ್ಯಾಲಕ್ಸಿ, ಪುತ್ತೂರಿನಲ್ಲಿ ಭಾರತ್ ಸಿನಿಮಾಸ್, ಸುಳ್ಯದಲ್ಲಿ ಸಂತೋಷ್  ಚಿತ್ರಮಂದಿರದಲ್ಲಿ ಸಿನಿಮಾ ತೆರೆ ಕಾಣುತ್ತಿದೆ.
  
 ಸೆನ್ಸಾರ್ ನಲ್ಲಿ ಯು ಎ ಸರ್ಟಿಫಿಕೇಟ್ ಪಡೆದುಕೊಂಡಿರುವ ಸಿನಿಮಾ ಸೆನ್ಸಾರ್ ಮಂಡಳಿಯಿಂದ  ಮೆಚ್ಚುಗೆ ಪಡೆದಿದೆ.
ತುಳು ಸಿನಿಮಾರಂಗಕ್ಕೆ ಯಾನ್ ಸೂಪರ್ ಸ್ಟಾರ್ ಮೂಲಕ ಒಂದು ಸದಭಿರುಚಿಯ ಚಿತ್ರ ಲಭಿಸಿದೆ. ಕುಟುಂಬ ಸಮೇತ ಸಿನಿಮಾ ವೀಕ್ಷಿಸಬಹುದಾಗಿದೆ


ಚಿತ್ರಕ್ಕೆ ಉಡುಪಿ ಸುತ್ತಮುತ್ತ ಒಂದೇ ಹಂತದಲ್ಲಿ 25 ದಿನಗಳ ಕಾಲ ಯಾನ್ ಸೂಪರ್ ಸ್ಟಾರ್ ಸಿನಿಮಾಕ್ಕೆ ಚಿತ್ರೀಕರಣ ನಡೆದಿತ್ತು. ಮುಖ್ಯವಾಗಿ  ಇಲ್ಲಿ  ಜನಮನ್ನಣೆ ಪಡೆದಿರುವ ಸಿಐಡಿ ಧಾರಾವಾಹಿಯ ಮುಂಬಯಿ  ಕಲಾವಿದರು ಈ ಸಿನಿಮಾದಲ್ಲಿ ಮುಖ್ಯ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ದಯಾನಂದ ಶೆಟ್ಟಿ, ಹರೀಶ್ ವಾಸು ಶೆಟ್ಟಿ, ಸಾಯಿ ಬಲ್ಲಾಲ್ ರೊಂದಿಗೆ ತುಳುನಾಡಿನ ಖ್ಯಾತ ಕಲಾವಿದರಾದ ಕುಸೇಲ್ದರಸೆ ನವೀನ್ ಡಿ  ಪಡೀಲ್, ನವರಸ ರಾಜೆ ಭೋಜರಾಜ ವಾಮಂಜೂರು, ಮಾನಸಿ ಸುಧೀರ್, ಅನ್ ಷಾ, ಅಶೋಕ್ ಪಕ್ಕಳ, ಮಾಸ್ಟರ್ ಅತಿಶ್ ಶೆಟ್ಟಿ, ಮಾಸ್ಟರ್ ಅರುಷ್ ಯು ಪೂಜಾರಿ, ಕುಮಾರಿ ಶ್ರೀಯಾ ಹೆಗ್ಡೆ ಮೊದಲಾದವರು ತಾರಾಗಣದಲ್ಲಿದ್ದಾರೆ. 
ಸಂತೋಷ್ ಶೆಟ್ಟಿಯವರ ಕತೆಗೆ  ಸಚಿನ್ ಶೆಟ್ಟಿ ಕುಂಬಳೆ ಸಂಭಾಷಣೆ ಬರೆದಿದ್ದಾರೆ. ಚಿತ್ರಕತೆ : ಅಂಕಣ ಜೋಷಿ, ಸಂತೋಷ್ ಶೆಟ್ಟಿ,  ಸಾಹಿತ್ಯ ಹಾಡು, ಸಂಗೀತ: ವಿ ಮನೋಹರ್, ಗುರುಕಿರಣ್ ಈ ಸಿನಿಮಾಕ್ಕೆ ಹಾಡು ಹಾಡಿದ್ದಾರೆ. ಹಿನ್ನಲೆ ಸಂಗೀತ: ಸಂಜಯ್ ವಾಂದ್ರೇಕರ್,   ಕ್ಯಾಮರಾ :ಕೃಷ್ಣರಾಜ್ ಕೋಟ್ಯಾನ್,  ಸಾಹಸ: ಆನಂದ ಶೆಟ್ಟಿ, ಸಹ ನಿರ್ದೇಶನ ರಾಮ್ ದಾಸ್ ಸಸಿಹಿತ್ಲು, ಪ್ರೈಡ್ ಸುಬ್ರಹ್ಮಣ್ಯ,  ಎಕ್ಸಿಕ್ಯೂಟಿವ್ ಪ್ರೊಡ್ಯುಸರ್ ಸತೀಶ್ ದುಬೆ, ಕ್ರಿಯೇಟಿವ್ ಡೈರಕ್ಟರ್ : ಕ್ರಿಸ್ತಬೆಲ್ಲೆ ಡಿ ಸೋಜ, ಪ್ರೊಡಕ್ಷನ್ ಹೆಡ್ಡ್ : ಚಂದ್ರಕಾಂತ್ ಭಂಡಾರಿ, ನಿರ್ದೇಶನ : ಸಂತೋಷ್ ಶೆಟ್ಟಿ


ಸಂಪೂರ್ಣ ಮನರಂಜನೆಯ ಸಿನಿಮಾ!

ಯಾನ್ ಸೂಪರ್ ಸ್ಟಾರ್ ಹೆಸರು ಸೂಚಿಸಿರುವಂತೆ ಇದು ತುಳುವಿನಲ್ಲಿ ಹೊಸ ಬಗೆಯ ಸಿನಿಮಾ. ಪ್ರೇಕ್ಷಕರ ನಾಡಿ ಮಿಡಿತವನ್ನು ಅರಿತು ನಿರ್ದೇಶಕರು ಇಲ್ಲಿ ಸಿನಿಮಾದ ಕತೆಯನ್ನು ಹೆಣೆದಿದ್ದಾರೆ. ಸಿನಿಮಾದಲ್ಲಿ ಹಾಸ್ಯವೂ ಇದೆ, ಸಂದೇಶವೂ ಇದೆ. ಪ್ರೇಕ್ಷಕರಿಗೆ ಸಿನಿಮಾದ ಕುರಿತು ಅತೀವ ಕುತೂಹಲ ಇದೆ. 

Ads on article

Advertise in articles 1

advertising articles 2

Advertise under the article

ಸುರ