ಮಂಗಳೂರು: ರಾಂಗ್ ಸೈಡ್‌ನಲ್ಲಿ ಹೆದ್ದಾರಿಗೆ ನುಗ್ಗಿದ ಬೈಕ್- ಕಾರು ಡಿಕ್ಕಿ, ಚೆಂಡಿನಂತೆ ಹಾರಿ ಬಿದ್ದ ತ್ರಿಬಲ್ ರೈಡಿಂಗ್‌ನಲ್ಲಿದ್ದ ಸವಾರರು


ಮಂಗಳೂರು: ತ್ರಿಬಲ್ ರೈಡ್‌ನಲ್ಲಿದ್ದ ಬೈಕೊಂದು ರಾಂಗ್ ಸೈಡ್‌ನಲ್ಲಿ ಏಕಾಏಕಿ ರಾಷ್ಟ್ರೀಯ ಹೆದ್ದಾರಿಗೆ ನುಗ್ಗಿದ ಪರಿಣಾಮ ಕಾರು ಡಿಕ್ಕಿಯಾಗಿ ಬೈಕ್ ಸವಾರರು ಚೆಂಡಿನಂತೆ ಹಾರಿಬಿದ್ದ ಘಟನೆ ಮಂಗಳೂರು ಹೊರವಲಯದ ಸುರತ್ಕಲ್ ಬಳಿಯ ಸೂರಜ್ ಹೊಟೇಲ್ ಬಳಿ ನಡೆದಿದೆ.

ಸುರತ್ಕಲ್ ರಾಷ್ಟೀಯ ಹೆದ್ದಾರಿಯಲ್ಲಿ ಬೈಕ್ ಅನ್ನು ಏಕಾಏಕಿ ನುಗ್ಗಿಸಲಾಗಿದೆ. ತ್ರಿಬಲ್ ರೈಡಿಂಗ್‌ನಲ್ಲಿದ್ದ ಬೈಕ್ ಸವಾರರು ಯಾರೂ ಹೆಲ್ಮೆಟ್ ಧರಿಸಿಲ್ಲ. ಬೈಕ್ ಹೆದ್ದಾರಿಗೆ ನುಗ್ಗುತ್ತಿದ್ದಂತೆ ವೇಗವಾಗಿ ಸಾಗುತ್ತಿದ್ದ ಕಾರು ಡಿಕ್ಕಿಯಾಗಿ ಭಾರೀ ಅವಘಡ ನಡೆದಿದೆ.






ಸಿಸಿ ಟಿವಿಯಲ್ಲಿ ಭೀಕರ ಅಪಘಾತದ ಭಯಾನಕ ದೃಶ್ಯ ಸೆರೆಯಾಗಿದೆ. ಕಾರು ಡಿಕ್ಕಿಯ ರಭಸಕ್ಕೆ ಇಬ್ಬರ ಸ್ಥಿತಿ ಗಂಭೀರವಾಗಿದೆ. ಅಪಘಾತವಾಗುತ್ತಿದ್ದಂತೆ ಓರ್ವ ಹಾರಿ ಪ್ರಾಣ ರಕ್ಷಿಸಿಕೊಂಡಿದ್ದಾನೆ. ಈ ಬಗ್ಗೆ ಸುರತ್ಕಲ್ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.