ಬ್ರೇಕಿಂಗ್ ನ್ಯೂಸ್

[getTicker results="10" label="recent" type="ticker"]

Surathkal: ಸಾವಿನ ದವಡೆಯಿಂದ ಪ್ರಯಾಣಿಕನನ್ನು ರಕ್ಷಿಸಿದ ರಕ್ಷಕ: ಸುರತ್ಕಲ್ ರೈಲು ನಿಲ್ದಾಣದಲ್ಲಿ ಪಾಯಿಂಟ್ಸ್‌ಮ್ಯಾನ್ ರಿಯಲ್ ಹೀರೋ!

 




ಸುರತ್ಕಲ್: ಚಲಿಸುತ್ತಿದ್ದ ರೈಲನ್ನೇರಲು ಹೋಗಿ ಅಸಹಾಯಕವಾಗಿ ಬೋಗಿ ಹಾಗೂ ಪ್ಲಾಟ್‌ಫಾರ್ಮ್‌ ನಡುವಿನ ಗ್ಯಾಪ್‌ಗೆ ಬೀಳುತ್ತಿದ್ದ ಪ್ರಯಾಣಿಕನೊಬ್ಬನನ್ನು ಸಮಯಕ್ಕೆ ಸರಿಯಾಗಿ ಎಳೆದು ಪ್ರಾಣ ಉಳಿಸಿದ ರೋಮಾಂಚನಕಾರಿ ಘಟನೆ ಸುರತ್ಕಲ್ ರೈಲು ನಿಲ್ದಾಣದಲ್ಲಿ ಸೋಮವಾರ (ಆಗಸ್ಟ್ 10, 2026) ಸಂಭವಿಸಿದೆ ಎಂದು ಕೊಂಕಣ ರೈಲ್ವೆಯ ಸಾರ್ವಜನಿಕ ಸಂಪರ್ಕಾಧಿಕಾರಿ (PRO) ಕೆ. ಸುಧಾ ಕೃಷ್ಣಮೂರ್ತಿ ಅವರು ತಿಳಿಸಿದ್ದಾರೆ.


ಸಾಹಸ ಮೆರೆದು ಪ್ರಯಾಣಿಕನ ಜೀವ ಉಳಿಸಿದ ಸುರತ್ಕಲ್ ನಿಲ್ದಾಣದ ಕರ್ತವ್ಯನಿರತ ಪಾಯಿಂಟ್ಸ್‌ಮ್ಯಾನ್ ಶ್ರೀ ಸಂದೀಪ್ ನಾಯಕ್ (ಉದ್ಯೋಗಿ ಸಂಖ್ಯೆ: 6909) ಅವರ ಈ ಜಾಗರೂಕತೆಗೆ ಸಾರ್ವಜನಿಕ ವಲಯದಲ್ಲಿ ಶ್ಲಾಘನೆ ವ್ಯಕ್ತವಾಗಿದೆ.






ರೈಲಿನ ಗ್ಯಾಪ್‌ಗೆ ಜಾರಿದ್ದ ಪ್ರಯಾಣಿಕ:

ಸೋಮವಾರ ಬೆಳಿಗ್ಗೆ 11:11ಕ್ಕೆ ಸುರತ್ಕಲ್ ನಿಲ್ದಾಣಕ್ಕೆ ಆಗಮಿಸಿದ್ದ ಮಡ್ಗಾಂವ್‌ - ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಸ್ (CSMT) ಎಕ್ಸ್‌ಪ್ರೆಸ್ ರೈಲು (ಸಂಖ್ಯೆ: 10107) ಮಧ್ಯಾಹ್ನ 12:12ಕ್ಕೆ ಮುಂದಿನ ಪ್ರಯಾಣಕ್ಕೆ ಸಿದ್ಧವಾಗಿ ಚಲಿಸಲು ತೊಡಗಿತ್ತು. ಈ ಸಂದರ್ಭದಲ್ಲಿ ತಡವಾಗಿ ಬಂದ ಪ್ರಯಾಣಿಕನೊಬ್ಬ ಚಲಿಸುತ್ತಿದ್ದ ರೈಲನ್ನು ಏರಲು ಯತ್ನಿಸಿ ಆಯತಪ್ಪಿದ್ದಾನೆ. ಪ್ಲಾಟ್‌ಫಾರ್ಮ್ ಹಾಗೂ ರೈಲಿನ ಬೋಗಿಯ ಮಧ್ಯದ ಕಂದಕಕ್ಕೆ ಆತ ಬೀಳುತ್ತಿದ್ದಂತೆಯೇ ಭೀಕರ ದುರಂತವೊಂದು ಕಣ್ಣಮುಂದೆಯೇ ಸಂಭವಿಸುವ ಹಂತ ತಲುಪಿತ್ತು.

ಕೂದಲೆಳೆಯ ಅಂತರದಲ್ಲಿ ಜೀವ ರಕ್ಷಣೆ:

ಅದೇ ವೇಳೆ ನಿಲ್ದಾಣದಲ್ಲಿದ್ದ ಪಾಯಿಂಟ್ಸ್‌ಮ್ಯಾನ್ ಸಂದೀಪ್ ನಾಯಕ್ ಅವರು ವಿಚಲಿತರಾಗದೆ ಕ್ಷಣಾರ್ಧದಲ್ಲಿ ಕಾರ್ಯಪ್ರವೃತ್ತರಾಗಿದ್ದಾರೆ. ಜಾರುತ್ತಿದ್ದ ಪ್ರಯಾಣಿಕನನ್ನು ತಕ್ಷಣವೇ ಹಿಡಿದು ಹೊರಕ್ಕೆ ಎಳೆದು ರಕ್ಷಿಸಿದ್ದಾರೆ. ಅವರ ಈ ಸಾಹಸಮಯ ನಡೆಯಿಂದಾಗಿ ಪ್ರಯಾಣಿಕ ರಕ್ತಪಾತದಿಂದ ಪಾರಾಗಿದ್ದಾನೆ. ಬಳಿಕ ಮಧ್ಯಾಹ್ನ 12:16ಕ್ಕೆ ರೈಲನ್ನು ಸುರಕ್ಷಿತವಾಗಿ ಕಳುಹಿಸಿಕೊಡಲಾಯಿತು.

ಸಿಎಂಡಿ ಸಂತೋಷ್ ಕುಮಾರ್ ಝಾ ಅವರಿಂದ ಬಹುಮಾನ ಪ್ರಕಟ:

ಸಂದೀಪ್ ನಾಯಕ್ ಅವರ ಕಟಿಬದ್ಧತೆ ಹಾಗೂ ಧೈರ್ಯವನ್ನು ಶ್ಲಾಘಿಸಿರುವ ಕೊಂಕಣ ರೈಲ್ವೆಯ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕರಾದ (CMD) ಶ್ರೀ ಸಂತೋಷ್ ಕುಮಾರ್ ಝಾ ಅವರು, ಸಂದೀಪ್ ಅವರಿಗೆ 10,000 ರೂಪಾಯಿ ನಗದು ಬಹುಮಾನ ನೀಡಿ ಪುರಸ್ಕರಿಸಿದ್ದಾರೆ.