(ಬೆಂಗಳೂರು):
ರಾಜ್ಯಾದ್ಯಂತ ತೀವ್ರ ಸಂಚಲನ ಮೂಡಿಸಿರುವ ರೇಣುಕಾಸ್ವಾಮಿ ಬರ್ಬರ ಕೊಲೆ ಪ್ರಕರಣದಲ್ಲಿ ಬಂಧಿತರಾಗಿರುವ ನಟ ದರ್ಶನ್ ತೂಗುದೀಪ ಹಾಗೂ ಅವರ ಗ್ಯಾಂಗ್‌ಗೆ ಕಾನೂನಿನ ಉಕ್ಕು ಕುಣಿಕೆ ಮತ್ತಷ್ಟು ಬಿಗಿಯಾಗುತ್ತಿದೆ. ಪ್ರಕರಣದ ಎ14 ಆರೋಪಿ ಪ್ರದೋಷ್ ಮಾಫಿ ಸಾಕ್ಷಿಯಾಗಲು (Approver) ಅರ್ಜಿ ಸಲ್ಲಿಸಿದ ಬೆನ್ನಲ್ಲೇ, ಸದ್ಯ ಜಾಮೀನಿನ ಮೇಲೆ ಹೊರಗಿರುವ ಎ8 ಆರೋಪಿ ರವಿಶಂಕರ್ ಹಾಗೂ ಎ10 ಆರೋಪಿ ವಿನಯ್ ಕೂಡ ಮಾಫಿ ಸಾಕ್ಷಿಯಾಗಲು ಮುಂದಾಗಿದ್ದಾರೆ.
ಬೆಂಗಳೂರಿನ 59ನೇ ಹೆಚ್ಚುವರಿ ಸಿಟಿ ಸಿವಿಲ್ ಮತ್ತು ಸೆಷನ್ಸ್ (CCH) ನ್ಯಾಯಾಲಯದಲ್ಲಿ ಪ್ರದೋಷ್ ಅರ್ಜಿ ವಿಚಾರಣೆ ನಡೆಯುವ ವೇಳೆಯೇ, ಈ ಮತ್ತಿಬ್ಬರು ಆರೋಪಿಗಳ ಪರ ವಕೀಲರು ತಮ್ಮ ಕಕ್ಷಿದಾರರನ್ನೂ ಮಾಫಿ ಸಾಕ್ಷಿಯನ್ನಾಗಿ ಪರಿಗಣಿಸಬೇಕೆಂದು ಪೀಠಕ್ಕೆ ಪ್ರತ್ಯೇಕ ಮನವಿ ಸಲ್ಲಿಸಿರುವುದು ದರ್ಶನ್ ಪಡೆಗೆ ಭಾರೀ ಆಘಾತ ತಂದಿತ್ತಿದೆ .ಪ್ರಕರಣದ ಎ14 ಆರೋಪಿ ಪ್ರದೋಷ್ ಮಾಫಿ ಸಾಕ್ಷಿಯಾಗಲು ಕೋರಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ಬೆಂಗಳೂರಿನ 59ನೇ ಸೆಷನ್ಸ್ ನ್ಯಾಯಾಲಯದಲ್ಲಿ ನಡೆದಿದೆ, ಪ್ರಕರಣದ ಎ8 ಆರೋಪಿ ರವಿಶಂಕರ್ ಹಾಗೂ ಎ10 ಆರೋಪಿ ವಿನಯ್ ಪರ ವಕೀಲರು ನ್ಯಾಯಾಲಯಕ್ಕೆ ಮನವಿ ಸಲ್ಲಿಸಿದ್ದಾರೆ, ಪ್ರದೋಷ್ ಈಗಾಗಲೇ ಮಾಫಿ ಸಾಕ್ಷಿಯಾಗಲು ಒಪ್ಪಿಕೊಂಡಿದ್ದು, ಈಗ ಮತ್ತಿಬ್ಬರು ಆರೋಪಿಗಳು ಅದೇ ಹಾದಿ ತುಳಿಯಲು ಮುಂದಾಗಿರುವುದು ದರ್ಶನ್ ಪಡೆಗೆ ನುಂಗಲಾರದ ತೂತಾಗಿ ಪರಿಣಮಿಸಿದೆ.
ಕೋರ್ಟ್‌ನಲ್ಲಿ ವಕೀಲರ ವಾದ-ಪ್ರತಿವಾದ:
ವಿಚಾರಣೆ ವೇಳೆ ಪ್ರದೋಷ್ ಪರ ವಕೀಲ ದಿವಾಕರ್ ಅವರು ನ್ಯಾಯಪೀಠದ ಗಮನ ಸೆಳೆದು, "ಮತ್ತಿಬ್ಬರು ಆರೋಪಿಗಳು ಸಲ್ಲಿಸುತ್ತಿರುವ ಅರ್ಜಿಗಳನ್ನು ಪ್ರದೋಷ್ ಅರ್ಜಿಯೊಂದಿಗೆ ಬೆರೆಸಬಾರದು. ಮೊದಲು ಪ್ರದೋಷ್ ಅವರ ಹೇಳಿಕೆಯನ್ನು (Statement) ನ್ಯಾಯಾಲಯ ದಾಖಲಿಸಿಕೊಳ್ಳಲಿ, ತದನಂತರ ಪ್ರಾಸಿಕ್ಯೂಷನ್ ಈ ಬಗ್ಗೆ ನಿರ್ಧಾರ ಕೈಗೊಳ್ಳಲಿ" ಎಂದು ಪ್ರತಿಪಾದಿಸಿದರು ಮತ್ತಿಬ್ಬರು ಆರೋಪಿಗಳ ಮನವಿಯನ್ನು ತಮ್ಮ ಅರ್ಜಿಯೊಂದಿಗೆ ಸೇರಿಸಬಾರದು ಎಂದು ಎ14 ಪ್ರದೋಷ್ ಪರ ವಕೀಲ ದಿವಾಕರ್ ಸೆಷನ್ಸ್ ಕೋರ್ಟ್‌ಗೆ ಮನವಿ ಮಾಡಿದರು, ಮೊದಲು ತಮ್ಮ ಕಕ್ಷಿದಾರ ಪ್ರದೋಷ್ ಅವರ ಹೇಳಿಕೆಯನ್ನು ನ್ಯಾಯಾಲಯ ದಾಖಲಿಸಿಕೊಳ್ಳಲಿ, ಆ ನಂತರ ಪ್ರಾಸಿಕ್ಯೂಷನ್ ಈ ಬಗ್ಗೆ ಮುಂದಿನ ನಿರ್ಧಾರ ಕೈಗೊಳ್ಳಲಿ ಎಂದು ಅವರು ಪ್ರತಿಪಾದಿಸಿದರು. ವಾದ-ಪ್ರತಿವಾದಗಳನ್ನು ಆಲಿಸಿದ ನ್ಯಾಯಾಧೀಶರು ಅರ್ಜಿಯ ವಿಚಾರಣೆಯನ್ನು ಕೆಲಕಾಲ ಮುಂದೂಡಿದರು.ವಕೀಲರ ವಾದ-ಪ್ರತಿವಾದಗಳನ್ನು ಆಲಿಸಿದ 59ನೇ ಸೆಷನ್ಸ್ ನ್ಯಾಯಾಲಯವು ಅರ್ಜಿಯ ವಿಚಾರಣೆಯನ್ನು ಕೆಲಕಾಲ ಮುಂದೂಡಿದೆ.
ದರ್ಶನ್‌ರಿಂದ ಬೆದರಿಕೆ ಭೀತಿ - ಪ್ರತ್ಯೇಕ ಕೊಠಡಿಗೆ ಮನವಿ:
ಇನ್ನೊಂದೆಡೆ, ಮಾಫಿ ಸಾಕ್ಷಿಯಾಗಲು ಒಪ್ಪಿಕೊಂಡಿರುವ ಪ್ರದೋಷ್ ಅವರು ತಮಗೆ ದರ್ಶನ್ ಕಡೆಯಿಂದ ಬೆದರಿಕೆ ಅಥವಾ ಪ್ರಭಾವ ಬೀರುವ ಬೆದರಿಕೆ ಇದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ. ಹೀಗಾಗಿ, ವಿಚಾರಣೆ ವೇಳೆ ದರ್ಶನ್ ಇರುವ ಕೊಠಡಿಯಲ್ಲಿ ತಮ್ಮನ್ನು ಹಾಜರುಪಡಿಸದೆ, ಪ್ರತ್ಯೇಕ ಕೊಠಡಿಯಿಂದ ಹಾಜರುಪಡಿಸುವಂತೆ ನ್ಯಾಯಾಲಯಕ್ಕೆ ಕೋರಿದ್ದಾರೆ.
ಒಂದೇ ಪ್ರಕರಣದಲ್ಲಿ ಸಾಲು ಸಾಲಾಗಿ ಮೂವರು ಆರೋಪಿಗಳು ಸರ್ಕಾರದ ಪರ ಮಾಫಿ ಸಾಕ್ಷಿಯಾಗಲು ಮುಂದಾಗಿರುವುದು, ವಿಚಾರಣೆ ವೇಳೆ ದರ್ಶನ್ ಗ್ಯಾಂಗ್‌ಗೆ ನುಂಗಲಾರದ ತೂತಾಗಿ ಪರಿಣಮಿಸಿದೆ .ಪ್ರದೋಷ್ ಈಗಾಗಲೇ ಮಾಫಿ ಸಾಕ್ಷಿಯಾಗಲು ಒಪ್ಪಿಕೊಂಡಿದ್ದು, ಈಗ ಮತ್ತಿಬ್ಬರು ಆರೋಪಿಗಳು ಅದೇ ಹಾದಿ ತುಳಿಯಲು ಮುಂದಾಗಿರುವುದು ದರ್ಶನ್ ಪಡೆಗೆ ನುಂಗಲಾರದ ತೂತಾಗಿ ಪರಿಣಮಿಸಿದೆ.
