ತನ್ನ ಸ್ನೇಹಿತೆಯೊಂದಿಗೂ ಸೇರು: ಪತ್ನಿಯ ವಿಕೃತ ಲೈಂಗಿಕ ಬೇಡಿಕೆಗೆ ಬೇಸತ್ತು ಪೊಲೀಸ್ ಠಾಣೆ ಮೆಟ್ಟಿಲೇರಿದ ಪತಿ



ಬೆಂಗಳೂರು: ಪತಿಯ ವಿರುದ್ಧ ಪತ್ನಿಯರು ಲೈಂಗಿಕ ದೌರ್ಜನ್ಯದ ದೂರು ನೀಡುವುದು ಸಾಮಾನ್ಯ. ಆದರೆ ಇಲ್ಲೊಬ್ಬ ಪತಿರಾಯನೇ ಪತ್ನಿಯ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಮಾಡಿರುವ ವಿರಳವಾದ ಘಟನೆ ರಾಜಧಾನಿ ಬೆಂಗಳೂರಿನಲ್ಲಿ ಬೆಳಕಿಗೆ ಬಂದಿದೆ. ಪತ್ನಿಯ ಲೈಂಗಿಕ ವಿಕೃತಿ ಮತ್ತು ನಿರಂತರ ಕಿರುಕುಳ ತಾಳಲಾರದೆ ಪತಿ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾನೆ.

ಪತ್ನಿಯ ಮಾನಸಿಕ ಹಿಂಸೆ, ಲೈಂಗಿಕ ದೌರ್ಜನ್ಯ ತಾಳಲಾರದೆ ಪತಿ ಬೆಂಗಳೂರಿನ ಅಮೃತಹಳ್ಳಿ ಠಾಣೆಗೆ ದೂರು ನೀಡಿದ್ದಾರೆ. ಪತ್ನಿಯ ವಿಪರೀತ ವಿಕೃತ ಲೈಂಗಿಕ ಬೇಡಿಕೆಗೆ  ಬೇಸತ್ತಿರುವ ಪತಿ,  ಆಕೆಯ ವಿಕೃತ ಕಾಮದ ಬಗ್ಗೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ತನಗೆ ಮಾತ್ರವಲ್ಲದೆ, ತನ್ನ ಸ್ನೇಹಿತೆಯೊಂದಿಗೂ ದೈಹಿಕ ಸಂಬಂಧ ಹೊಂದುವಂತೆ ಪತ್ನಿ ಒತ್ತಾಯಿಸುತ್ತಿದ್ದಾಳೆಂದು ದೂರಿನಲ್ಲಿ ವಿವರಿಸಿದ್ದಾರೆ.

ತನ್ನ ಪತ್ನಿ ಅಶ್ಲೀಲ ವೀಡಿಯೋಗಳನ್ನು ಕಳುಹಿಸಿ ವಿಕೃತವಾಗಿ ವರ್ತಿಸುತ್ತಾಳೆ. ಲೈಂಗಿಕ ಸಂಪರ್ಕ ಮಾಡುವಾಗ ಕಚ್ಚಿ ಪತ್ನಿ ದೌರ್ಜನ್ಯ ಎಸಗುತ್ತಾಳೆ. ಸ್ನೇಹಿತೆಯರೊಂದಿಗೂ ಲೈಂಗಿಕ ಸಂಪರ್ಕ ಬೆಳೆಸುವಂತೆ ಒತ್ತಾಯಿಸುತ್ತಾಳೆ. ಅಲ್ಲದೆ ಮದುವೆಗೂ ಮೊದಲಿನ ಆಕೆಯ ಸಂಬಂಧಗಳ ಬಗ್ಗೆ ಹೇಳಿ ಕಿರಿಕಿರಿ ಉಂಟುಮಾಡುತ್ತಾಳೆ.  ಅಲ್ಲದೆ ಮದ್ಯ ಸೇವಿಸಿ ಬರುವುದು, ಸ್ನೇಹಿತರೊಂದಿಗೆ ಅಲೆದಾಡುವುದು ಇಂದಿನ ಕಾಲದಲ್ಲಿ ಕಾಮನ್ ಎಂದು ಹೇಳಿ ವಿಕೃತವಾಗಿ ವರ್ತಿಸುತ್ತಾಳೆ. ವಿಕೃತ ದೈಹಿಕ ಸಂಪರ್ಕಕ್ಕೆ ಒಪ್ಪದೇ ಇದ್ದಾಗ ಕಿರುಕುಳ ನೀಡುತ್ತಾಳೆ ಎಂದು ಪತಿ ದೂರಿನಲ್ಲಿ ಆರೋಪಿಸಿದ್ದಾನೆ.

ಇನ್ನು ಪತ್ನಿಯ ಈ ಅಸಲಿ ಮುಖ ತಿಳಿಯುವ ಮುನ್ನ ಆಕೆಗೆ ಒಡವೆಗಳನ್ನು ಕೊಟ್ಟಿದ್ದೇನೆ. ಆ ಒಡವೆಗಳನ್ನೂ ವಾಪಸ್ ನೀಡದೆ ಸತಾಯಿಸುತ್ತಿದ್ದಾಳೆ ಎಂದು ನೊಂದ ಪತಿ ತನ್ನ ಅಳಲನ್ನು ತೋಡಿಕೊಂಡಿದ್ದಾನೆ. ಈ ಸಂಬಂಧ ಅಮೃತಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಈ ಬಗ್ಗೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

BREAKING NEWS
Loading latest news...
Join our WhatsApp Channel Powered By : Online Pudu