ಮಂಗಳೂರು: 9ರ ಬಾಲಕನಿಗೆ ಅಶ್ಲೀಲ ವೀಡಿಯೋ ತೋರಿಸಿ ಲೈಂಗಿಕ ದೌರ್ಜನ್ಯ- ಪೊಕ್ಸೊ ಕೇಸ್‌ನಲ್ಲಿ ಆರೋಪಿ ಅರೆಸ್ಟ್



ಮಂಗಳೂರು: ಹಣ ಕೊಡುವ, ತಿಂಡಿ ಕೊಡಿಸುವ ಆಮಿಷವೊಡ್ಡಿ ಅಶ್ಲೀಲ ವೀಡಿಯೋ ತೋರಿಸಿ 9ವರ್ಷದ ಬಾಲಕನಿಗೆ ಲೈಂಗಿಕ ದೌರ್ಜನ್ಯ ಎಸಗಿರುವ ಆರೋಪಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ.

ಕೋಟೆಕಾರು, ಮಡ್ಯಾರ್ ನಿವಾಸಿ ಆಶೀಶ್ ಪೂಜಾರಿ (33) ಬಂಧಿತ ಕಾಮುಕ.

ಆಶಿಶ್ ಪೂಜಾರಿ 9ವರ್ಷದ ಬಾಲಕನನ್ನು ಹಣ ಹಾಗೂ ತಿಂಡಿ ನೀಡುವ ಆಮಿಷವೊಡ್ಡಿ ಕರೆದೊಯ್ದಿದ್ದಾನೆ. ಬಳಿಕ ಅಶ್ಲೀಲ ವಿಡಿಯೋ ತೋರಿಸಿ ಅಸಭ್ಯ ಕ್ರಿಯೆಗೆ ಪ್ರೇರೇಪಿಸಿ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂದು ದೂರು ನೀಡಲಾಗಿದೆ.
ಈ ಹಿನ್ನೆಲೆಯಲ್ಲಿ ಕೊಣಾಜೆ ಪೊಲೀಸ್ ಠಾಣೆಯಲ್ಲಿ POCSO ಕಾಯ್ದೆಯ ಸೆಕ್ಷನ್ 4, 6, 12 ಹಾಗೂ BNS ಕಾಯ್ದೆಯ ಸೆಕ್ಷನ್ 75 ಅಡಿಯಲ್ಲಿ ಪ್ರಕರಣ ದಾಖಲಿಸಿ ಆರೋಪಿಯನ್ನು ಬಂಧಿಸಲಾಗಿದೆ. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.