ವಿದೇಶದಲ್ಲಿದ್ದುಕೊಂಡೇ ಹಿಂದೂ ಧರ್ಮದ ವಿರುದ್ಧ ಪ್ರಚೋದನಕಾರಿ ಪೋಸ್ಟ್- ಭಾರತಕ್ಕೆ ಬರುತ್ತಿದ್ದಂತೆ ಆರೋಪಿ ಅರೆಸ್ಟ್



ಮಂಗಳೂರು: ವಿದೇಶದಲ್ಲಿದ್ದುಕೊಂಡೇ ಹಿಂದೂ ಧರ್ಮದ ಬಗ್ಗೆ ಅವಹೇಳನಕಾರಿ, ಪ್ರಚೋದನಾಕಾರಿ ಪೋಸ್ಟ್ ಮಾಡಿರುವ ಆರೋಪಿಯನ್ನು ಬಜ್ಪೆ ಪೊಲೀಸರು ಬಂಧಿಸಿದ್ದಾರೆ.

ಸೌದಿ ಅರೇಬಿಯಾದಲ್ಲಿರುವ ಮಂಗಳೂರಿನ ಉಳಾಯಿಬೆಟ್ಟು ನಿವಾಸಿ ಅಬ್ದುಲ್ ಖಾದರ್ ನೇಹಾದ್ (27) ಬಂಧಿತ ಯುವಕ.

ಅ.11ರಂದು ಇನ್‌ಸ್ಟಾಗ್ರಾಂನ _sdpi_2025 ID ಖಾತೆಯಲ್ಲಿ ಹಿಂದೂ ಧರ್ಮದ ಬಗ್ಗೆ ಅವಹೇಳನಕಾರಿ ಮತ್ತು ಪ್ರಚೋಧನಕಾರಿ ಪೋಸ್ಟ್ ಹಾಕಿರುವ ಬಗ್ಗೆ ಬಜ್ಪೆ ಪೊಲೀಸ್ ಠಾಣೆಯಲ್ಲಿ ಸ್ವಯಂ ಪ್ರೇರಿತ ಪ್ರಕರಣ ದಾಖಲಾಗಿತ್ತು. ಈ ಪ್ರಕರಣದಲ್ಲಿ ತಾಂತ್ರಿಕ ವಿಧಾನದ ಮೂಲಕ ತನಿಖೆ ನಡೆಸಿದಾಗ ಪ್ರಚೋದನಕಾರಿ ಪೋಸ್ಟ್ ಹಾಕಿರುವವನು ಮಂಗಳೂರು ಮೂಲದ ಸೌದಿ ಅರೇಬಿಯಾದಲ್ಲಿರುವ ಅಬ್ದುಲ್ ಖಾದರ್ ನೇಹಾದ್ ಎಂದು ತಿಳಿದು ಬಂದಿತ್ತು. ಆದ್ದರಿಂದ ಈತನ ವಿರುದ್ಧ LOC ಹೊರಡಿಸಲಾಗಿರುತ್ತದೆ. 

 ಅಬ್ದುಲ್ ಖಾದರ್ ನೇಹಾದ್ ಡಿ.14ರಂದು ಕೇರಳ ರಾಜ್ಯದ ಕ್ಯಾಲಿಕಟ್ ವಿಮಾನ ನಿಲ್ದಾಣಕ್ಕೆ ವಿದೇಶದಿಂದ ಬಂದಿಳಿದಿದ್ದ. ಈ ವೇಳೆ ಪೊಲೀಸರು ಆರೋಪಿ ಅಬ್ದುಲ್ ಖಾದರ್ ನೇಹಾದ್‌ನನ್ನು ವಶಕ್ಕೆ ಪಡೆದು ತನಿಖೆ ಕೈಗೊಂಡಿದ್ದಾರೆ.