-->
ಕಾಸರಗೋಡು: ಮನೆ ಮೇಲ್ಛಾವಣಿಯಿಂದ ಬಿದ್ದು ಕಾರ್ಮಿಕ ಸಾವು

ಕಾಸರಗೋಡು: ಮನೆ ಮೇಲ್ಛಾವಣಿಯಿಂದ ಬಿದ್ದು ಕಾರ್ಮಿಕ ಸಾವು


ಕಾಸರಗೋಡು: ಮನೆ ನಿರ್ಮಾಣದ ಕಾಮಗಾರಿ ವೇಳೆ ಮೇಲ್ಛಾವಣಿಯಿಂದ ಬಿದ್ದು ಯುವ ಕಾರ್ಮಿಕನೋರ್ವ ಮೃತಪಟ್ಟ ದಾರುಣ ಘಟನೆ ಬಂದ್ಯೋಡು ಸಮೀಪದ ಚಿನ್ನಮೊಗರು ಎಂಬಲ್ಲಿ ನಡೆದಿದೆ.

ಜೋಡುಕಲ್ ನವೋದಯ ನಗರ ನಿವಾಸಿ ಜೆ.ಶಶಿಧರ (32) ಮೃತಪಟ್ಟ ದುರ್ದೈವಿ. 

ಚಿನ್ನಮೊಗರುವಿನಲ್ಲಿ ಮನೆ ನಿರ್ಮಾಣದ ಕೆಲಸ ನಡೆಯುತ್ತಿತ್ತು. ಈ ವೇಳೆ ಶಶಿಧರ ಅವರು ಆಕಸ್ಮಿಕವಾಗಿ ಮೇಲ್ಛಾವಣಿಯಿಂದ ಕೆಳಗೆ ಜಾರಿ ಬಿದ್ದಿದ್ದಾರೆ.

ಪರಿಣಾಮ ಗಂಭೀರವಾಗಿ ಗಾಯಗೊಂಡ ಶಶಿಧರ್‌ರನ್ನು ತಕ್ಷಣ ಆಸ್ಪತ್ರೆಗೆ ರವಾನಿಸಿದರೂ, ಅವರ ಜೀವ ಉಳಿಸಲಾಗಿಲ್ಲ. ಈ ಬಗ್ಗೆ ಕುಂಬಳೆ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Ads on article

Advertise in articles 1

advertising articles 2

Advertise under the article