ನಗ್ನರನ್ನಾಗಿಸುವ ಮ್ಯಾಜಿಕ್ ಮಿರರ್ ಮಾರಾಟದಲ್ಲಿ 9 ಲಕ್ಷ ವಂಚನೆ: ಮೂವರು ಖತರ್ನಾಕ್ ಖದೀಮರು ಅರೆಸ್ಟ್


ಪಶ್ಚಿಮಬಂಗಾಳ: ಉತ್ತರಪ್ರದೇಶದ 72ರ ವೃದ್ಧರೊಬ್ಬರಿಗೆ ಜನರನ್ನು ನಗ್ನರನ್ನಾಗಿಸುವ ಮಾಂತ್ರಿಕ ಕನ್ನಡಿ ಮಾರಾಟ ಮಾಡುವುದಾಗಿ ಭರವಸೆ ನೀಡಿ 9 ಲಕ್ಷ ರೂ. ಹಣ ವಂಚಿಸಿರುವ ಆರೋಪದ ಮೇಲೆ ಪಶ್ಚಿಮ ಬಂಗಾಳದ ಮೂವರು ಖತರ್ನಾಕ್ ಖದೀಮರನ್ನು ಪೊಲೀಸರು ಬಂಧಿಸಿದ್ದಾರೆ.

ಸಂತಾರಗಾಚಿಯ ಪಾರ್ಥ ಸಿಂಗ್‌ರೇ (46), ಬಾಗುಹಟಿಯ ಮೊಲಯ ಸರ್ಕಾರ್ (32), ಪಶ್ಚಿಮ ಬಂಗಾಳದ ದಕ್ಷಿಣ ಕೋಲ್ಕತ್ತಾದ ಸುದೀಪ್ತ ಸಿನ್ಹಾ ರೇ (38) ಎಂಬ ಮೂವರನ್ನು ನಾಯಪಲ್ಲಿ ಪೊಲೀಸರು ಬಂಧಿಸಿದ್ದಾರೆ.

ವಂಚಕರು ಕಾನ್ಪುರದ ಅವನೀಶ್ ಕುಮಾರ್ ಶುಕ್ಲಾ ಎಂಬಾತನನ್ನು ಬಲೆಗೆ ಕೆಡವಿದ್ದಾರೆ. ಆತನಿಗೆ ಕನ್ನಡಿಯು ಕೆಲವು ಮಾಂತ್ರಿಕ ಮತ್ತು ವಿಶೇಷ ಗುಣಗಳನ್ನು ಹೊಂದಿದೆ.‌ ಅಲ್ಲದೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕೋಟ್ಯಂತರ ರೂ. ಮೌಲ್ಯವುಳ್ಳದ್ದಾಗಿದೆ. ಕನ್ನಡಿ ಮುಂದೆ ನಿಂತಾಗ ವ್ಯಕ್ತಿ ಬೆತ್ತಲೆಯಾಗಿ ಕಾಣಿಸಿಕೊಳ್ಳುತ್ತಾನೆ ಮತ್ತು ಮುಂದೆ ಹೋದರೆ ಅಸ್ಥಿಪಂಜರವನ್ನು ನೋಡಬಹುದು. ಅದೇ ರೀತಿಯಾರಾದರೂ ಕನ್ನಡಿಯ ಹತ್ತಿರ ಹೋದರೆ ಆ ವ್ಯಕ್ತಿಯ ಚಿತ್ರ ಮಾಯವಾಗುತ್ತದೆ. ಮ್ಯಾಜಿಕ್ ಮಿರರ್ ಕೆಲವು ವಿಕಿರಣಶೀಲ ವಸ್ತುಗಳನ್ನು ಹೊಂದಿದ್ದು, ಸಂಪರ್ಕಗೊಂಡ ಬಳಿಕ ಬಲ್ಬ್‌ಗಳನ್ನು ಸಹ ಬೆಳಗಿಸಬಹುದು ಎಂದು ವಂಚಕರು ಹೇಳಿ ಮೋಸದ ಬಲೆ ಬೀಸಿದ್ದಾರೆ.

ಮ್ಯಾಜಿಕ್ ಕನ್ನಡಿಯನ್ನು ಹೆಚ್ಚಿನ ಬೆಲೆಗೆ ಮಾರಾಟ ಮಾಡುವ ಯೋಜನೆಯೊಂದಿಗೆ, ಶುಕ್ಲಾ ಅವರನ್ನು ಭೇಟಿ ಮಾಡಲು ಮತ್ತು ಹೇಳಿದ್ದಾರೆ. ಮ್ಯಾಜಿಕ್ ಕನ್ನಡಿಯನ್ನು ಖರೀದಿಸಲು ಶುಕ್ಲಾ ಭುವನೇಶ್ವರಕ್ಕೆ ಬಂದರು. ಖದೀಮರು ಮೊದಲು ಮುಂಗಡವಾಗಿ ಸಂಸ್ಕರಣಾ ಶುಲ್ಕವಾಗಿ ಶುಕ್ಲಾನಿಂದ 9 ಲಕ್ಷಗಳು ರೂ ಪಡೆದುಕೊಂಡಿದ್ದಾರೆ. ಬಳಿಕ ಇದೊಂದು ಮೋಸದ ಸಂಘಟನೆ ಎಂದು ತಿಳಿದ ಶುಕ್ಲಾ ನಯಾಪಲ್ಲಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ದೂರು ಸ್ವೀಕರಿಸಿದ ಪೊಲೀಸರು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಆರೋಪಿಯನ್ನು ಬಂಧಿಸಿದ್ದಾರೆ.

ಮಾರುತಿ ಸುಜುಕಿ ಸ್ವಿಫ್ಟ್ ಕಾರು, 28,000 ರೂ. ನಗದು, ಮ್ಯಾಜಿಕ್ ಮಿರರ್‌ನ ಮ್ಯಾಜಿಕ್ ವಿಡಿಯೋ ಹೊಂದಿರುವ ಐದು ಮೊಬೈಲ್ ಫೋನ್‌ಗಳು, 50,000 ಕೋಟಿಯ ಮ್ಯಾಜಿಕ್ ಮಿರರ್‌ನ ಡೀಲ್‌ಗೆ ಸಂಬಂಧಿಸಿದ ಖಾಲಿ ಒಪ್ಪಂದದ ಕಾಗದ, ಬ್ಯಾಂಕ್ ಖಾತೆಗಳನ್ನು ಸಹ ಸ್ಥಗಿತಗೊಳಿಸಿ ಪೊಲೀಸರು ಹಲವು ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ.