ಆಫ್ರಿಕಾದಲ್ಲಿ ಕೆಲಸಕ್ಕೆಂದು ಹೋಗಿದ್ದ ಯುವಕ ಮೃತ್ಯು: ಮುಗಿಲುಮಟ್ಟಿದ ಪಾಲಕರ ಆಕ್ರಂದನ


ಮೈಸೂರು: ದೂರದ ಆಫ್ರಿಕಾ ದೇಶಕ್ಕೆ ತೆರಳಿ ಅಲ್ಲಿ ಕೆಲಸ ಮಾಡಿ ಕುಟುಂಬಕ್ಕೆ ಆಧಾರಸ್ತಂಭನಾಗಿದ್ದ ಯುವಕನೊಬ್ಬ ಜ್ವರಪೀಡಿತನಾಗಿ ಮೃತಪಟ್ಟಿದ್ದು, ಪಾಲಕರ ಆಕ್ರಂದನ ಮುಗಿಲು ಮುಟ್ಟಿದೆ.

ಎಚ್‌ಡಿ ಕೋಟೆ ತಾಲೂಕಿನ ಟೈಗರ್ ಬ್ಲಾಕ್‌ನ ಮೂಲದ ಎಫ್ರಾಹಿಂ (20) ಮೃತ ದುರ್ದೈವಿ. ಹಕ್ಕಿಪಿಕ್ಕಿ ಸಮುದಾಯದ ಎಫ್ರಾಹಿಂ, ಅಮಿತ್ ಮತ್ತು ಮಂಜುಳ ದಂಪತಿಯ ಪುತ್ರ. 

ಕುಟುಂಬಕ್ಕೆ ಪ್ರಮುಖ ಆಧಾರಸ್ತಂಭವಾಗಿದ್ದ ಎಫ್ರಾಹಿಂ ಎರಡು ದಿನಗಳಿಂದ ಜ್ವರದಿಂದ ಬಳಲುತ್ತಿದ್ದನು. ಈ ಬಗ್ಗೆ ಹೆತ್ತವರೊಂದಿಗೆ ದೂರವಾಣಿಯಲ್ಲಿ ತಿಳಿಸಿದ್ದ. ಆತನನ್ನು ಜೊತೆಯಲ್ಲಿದ್ದವರು ಆಸ್ಪತ್ರೆಗೆ ದಾಖಲಿಸಿದ್ದರು. ಆದೆ ಚಿಕಿತ್ಸೆ ಫಲಕಾರಿಯಾಗದೆ ಎಫ್ರಾಹಿಂ ಮೃತಪಟ್ಟಿದ್ದಾನೆ.

ಪುತ್ರನ ಸಾವಿನ ಸುದ್ದಿ ಕೇಳಿದ ಕುಟುಂಬದಲ್ಲಿ ಆಕ್ರಂದನ ಮುಗಿಲು ಮುಟ್ಟಿದೆ. ಅಂತಿಮ ದರ್ಶನ ಪಡೆಯಲು ಸಾಧ್ಯವಾಗುತ್ತದೆಯೇ ಎಂಬ ಆತಂಕದಲ್ಲಿದ್ದಾರೆ. ಮೃತದೇಹವನ್ನು ಸ್ವಗ್ರಾಮಕ್ಕೆ ತರಿಸುವಂತೆ ಪಾಲಕರು ಸರ್ಕಾರವನ್ನು ಮನವಿ ಮಾಡಿಕೊಳ್ಳುತ್ತಿದ್ದಾರೆ. 
BREAKING NEWS
Loading latest news...
Join our WhatsApp Channel Powered By : Online Pudu