ಬಟ್ಟೆ ಬಿಚ್ಚಿಸಿ ವಿದ್ಯಾರ್ಥಿನಿಯರನ್ನು ಪರಿಶೀಲಿಸಿದ ವಾರ್ಡನ್ : ಹಣ ಮಿಸ್ ಆದದ್ದೇ ಕಾರಣ
Thursday, May 4, 2023
ನವದೆಹಲಿ: ನಗರದ ಸರ್ಕಾರಿ ನರ್ಸಿಂಗ್ ಕಾಲೇಜಿನ ವಾರ್ಡನ್ ಇಬ್ಬರು ವಿದ್ಯಾರ್ಥಿಗಳನ್ನು ಪರಿಶೀಲಿಸುವ ನೆಪದಲ್ಲಿ ವಿವಸ್ತ್ರಗೊಳಿಸಿ ಕಿರುಕುಳ ನೀಡಿದ್ದಾರೆ ಎಂದು ಆರೋಪ ಕೇಳಿ ಬಂದಿದೆ. ಪ್ರಕರಣದಲ್ಲಿ ಈವರೆಗೂ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಡಿಸಿಪಿ (ಕೇಂದ್ರ) ಸಂಜಯ್ ಕುಮಾರ್ ಸೈನ್ ಮಾತನಾಡಿ, ನರ್ಸಿಂಗ್ ವಿದ್ಯಾರ್ಥಿನಿಯರಿಗೆ ಬಟ್ಟೆ ಬಿಚ್ಚಿಸಿರುವ ಆರೋಪದಲ್ಲಿ ವಾರ್ಡನ್ ಕಿರುಕುಳ ನೀಡಿದ್ದಾರೆ ಎಂಬ ಪಿಸಿಆರ್ ಸ್ವೀಕರಿಸಲಾಗಿದೆ. ವಾರ್ಡನ್ ನೊಂದಿಗೆ ವಿದ್ಯಾರ್ಥಿಗಳು ಸಮುದಾಯ ಕಾರ್ಯಕ್ರಮಕ್ಕಾಗಿ ಮಂಡಿ ಹೌಸ್ ಎಂಬ ಸ್ಥಳಕ್ಕೆ ಹೋಗಿದ್ದರು. ವಾರ್ಡನ್ ಕೈಚೀಲದಿಂದ 8,000 ರೂ. ಕಾಣೆಯಾಗಿತ್ತು. ಈ ಹಿನ್ನೆಲೆಯಲ್ಲಿ ವಾರ್ಡನ್ ತನ್ನೊಂದಿಗಿದ್ದ ವಿದ್ಯಾರ್ಥಿನಿಯರೇ ಕದ್ದಿದ್ದಾರೆ ಎಂದು ಶಂಕಿಸಿದ್ದಾರೆ. ಅದಕ್ಕಾಗಿ ವಿದ್ಯಾರ್ಥಿಗಳನ್ನು ವಿವಸ್ತ್ರಗೊಳಿಸಿ ಅವರನ್ನು ಪರೀಕ್ಷಿಸಲು ಪ್ರಯತ್ನಿಸಿದರು. ಆದರೆ ಅವರಿಗೆ ವಿದ್ಯಾರ್ಥಿನಿಯರ ಹತ್ತಿರ ವಾರ್ಡನ್ ಗೆ ಬೇಕಾದ್ದು ಸಿಗಲಿಲ್ಲ” ಎಂದು ಡಿಸಿಪಿ ಹೇಳಿದ್ದಾರೆ.
ಈ ಬಗ್ಗೆ ಪೊಲೀಸ್ ಇಲಾಖೆ ವಿಚಾರಣೆ ನಡೆಸಲಾಗುತ್ತಿದೆ ಎಂದು ಕಾಲೇಜು ಪ್ರಾಂಶುಪಾಲರು ತಿಳಿಸಿದ್ದಾರೆ.