ಬಿಜೆಪಿ 3 ನೇ ಪಟ್ಟಿ ಬಿಡುಗಡೆ- ಶೆಟ್ಟರ್ ಕ್ಷೇತ್ರದಲ್ಲಿ ಟೆಂಗಿನಕಾಯಿಗೆ - ಕೊನೆಗೂ ರಾಮ್ ದಾಸ್ ಗೆ ಇಲ್ಲ ಟಿಕೆಟ್!


ಬೆಂಗಳೂರು: ವಿಧಾನಸಭೆ ಚುನಾವಣೆಗೆ ಬಿಜೆಪಿಯು ಅಭ್ಯರ್ಥಿಗಳ 3ನೇ ಪಟ್ಟಿ ಬಿಡುಗಡೆ ಮಾಡಿದೆ.

 ಹುಬ್ಬಳ್ಳಿ- ಧಾರವಾಡ ಕೇಂದ್ರ ಕ್ಷೇತ್ರದಲ್ಲಿ ಶಾಸಕರಾಗಿದ್ದ ಜಗದೀಶ್ ಶೆಟ್ಟರ್ ಕ್ಷೇತ್ರದಲ್ಲಿ
ಮಹೇಶ್ ಟೆಂಗಿನಕಾಯಿ ಹೆಸರು ಘೋಷಿಸಲಾಗಿದೆ. ಇನ್ನೂ ಮೈಸೂರಿನ ಕೃಷ್ಣರಾಜ ಕ್ಷೇತ್ರದ ಶಾಸಕ ರಾಮದಾಸ್ ಗೆ ಟಿಕೆಟ್ ನಿರಾಕರಿಸಲಾಗಿದೆ. ಇನ್ನೂ ಟಿಕೆಟ್ ಆಕಾಂಕ್ಷಿಗಳಾಗಿದ್ದ ಗೋವಿಂದ ಕಾರಜೋಳ ಪುತ್ರ ಗೋಪಾಲ್, ಸಚಿವ ಸೋಮಣ್ಣ ಪುತ್ರ ನಿಗೆ ಟಿಕೆಟ್ ನಿರಾಕರಿಸಲಾಗಿದೆ.

ಅಭ್ಯರ್ಥಿಗಳ ಪಟ್ಟಿ:

ಹುಬ್ಬಳ್ಳಿ- ಧಾರವಾಡ- ಮಹೇಶ್ ಟೆಂಗಿನಕಾಯಿ

ಕೊಪ್ಪಳ- ಮಂಜುಳಾ ಅಮರೇಶ್

ರೋಣ- ಕಳಕಪ್ಪ ಬಂಡಿ

ಸೇಡಂ- ರಾಜಕುಮಾರ್ ಪಾಟೀಲ್

ನಾಗಠಾಣ- ಸಂಜೀವ್ ಈಹೊಳೆ

ಗೋವಿಂದ ರಾಜ ನಗರ- ಉಮೇಶ್ ಶೆಟ್ಟಿ

ಹೆಬ್ಬಾಳ- ಕಟ್ಟಾ ಜಗದೀಶ್

ಮಹದೇವ ಪುರ (SC)- ಮಂಜುಳಾ ಅರವಿಂದ ಲಿಂಬಾವಳಿ

ಕೃಷ್ಣರಾಜ - ಶ್ರೀ ವತ್ಸ