-->
1000938341
ನಗ್ನವಾಗಿ ಕಾಣಿಸಿಕೊಂಡ ನಟ ವಿಜಯ್ ದೇವರಕೊಂಡ: ಸದ್ದು ಮಾಡುತ್ತಿದೆ ಲೈಗರ್ ಪೋಸ್ಟರ್

ನಗ್ನವಾಗಿ ಕಾಣಿಸಿಕೊಂಡ ನಟ ವಿಜಯ್ ದೇವರಕೊಂಡ: ಸದ್ದು ಮಾಡುತ್ತಿದೆ ಲೈಗರ್ ಪೋಸ್ಟರ್

ಹೈದರಾಬಾದ್ (ತೆಲಂಗಾಣ): ಸ್ಟಾರ್ ನಟ ವಿಜಯ್ ದೇವರಕೊಂಡ ಮುಂಬರುವ ಸಿನಿಮಾ 'ಲೈಗರ್‌' ಈಗಾಗಲೇ ಭಾರೀ ಸದ್ದು ಮಾಡುತ್ತಿದೆ. ಇದೀಗ ಈ ಸಿನಿಮಾದ ಹೊಸ ಪೋಸ್ಟರ್‌ ರಿಲೀಸ್ ಆಗಿದ್ದು, ಅಭಿಮಾನಿಗಳನ್ನು ಕುತೂಹಲಕ್ಕೀಡು ಮಾಡಿದೆ. ಚಿತ್ರ ತಯಾರಕರು ಸಿನಿಮಾದ ಪೋಸ್ಟರ್​ ಅನ್ನು ಶನಿವಾರ ಬಿಡುಗಡೆ ಮಾಡಿದ್ದಾರೆ‌. ಪೋಟೊದಲ್ಲಿ ನಟ ವಿಜಯ್​ ದೇವರಕೊಂಡ ನಗ್ನವಾಗಿ ಕಾಣಿಸಿಕೊಂಡಿದ್ದಾರೆ.

ನಟ ವಿಜಯ್​ ದೇವರಕೊಂಡ ಕಟ್ಟುಮಸ್ತಾಗಿ ಹುರಿಗಟ್ಟಿದ ದೇಹದಲ್ಲಿ ನಗ್ನವಾಗಿ ನಿಂತಿದ್ದಾರೆ‌. ಅಲ್ಲದೆ ತಮ್ಮ ಪ್ರೈವೇಟ್ ಪಾರ್ಟ್ ಅನ್ನು ಮರೆಮಾಡಲು ಹೂವಿನ ಗೊಂಚಲು ಹಿಡಿದಿದ್ದಾರೆ. 'ಇದು ಹತ್ತು ಪಟ್ಟು ಬಿಸಿಯಾಗಿಸುತ್ತದೆ. ಆಗಸ್ಟ್​ 25 ರಂದು ತೆರೆಗೆ ಬರಲಿದೆ' ಎಂದು ಬರೆದಿರುವ ಪೋಸ್ಟ್​ ಅನ್ನು ಧರ್ಮ ಪ್ರೊಡಕ್ಷನ್ಸ್‌ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿದೆ.

ಪೂರಿ ಜಗನ್ನಾಥ್ ನಿರ್ದೇಶನದ ಲೈಗರ್ ಸಿನಿಮಾದಲ್ಲಿ ರಮ್ಯಾ ಕೃಷ್ಣ, ರೋನಿತ್ ರಾಯ್, ವಿಶು ರೆಡ್ಡಿ ಮುಂತಾದವರು ನಟಿಸಲಿದ್ದಾರೆ. ಇದನ್ನು ಪುರಿ ಕನೆಕ್ಟ್ಸ್ ಸಂಸ್ಥೆ ಜೊತೆಗೆ ಚಾರ್ಮಿ ಕೌರ್ ಸಹ ನಿರ್ಮಾಪಕರಾಗಿದ್ದಾರೆ. ಈ ಚಿತ್ರ ಹಿಂದಿ, ತೆಲುಗು, ತಮಿಳು, ಕನ್ನಡ ಮತ್ತು ಮಲಯಾಳಂನಲ್ಲಿ ವಿಶ್ವದಾದ್ಯಂತ ತೆರೆ ಕಾಣಲಿದೆ.

Ads on article

Advertise in articles 1

advertising articles 2

Advertise under the article