Job Opportunity in 'Koo'- ಟ್ವಿಟ್ಟರ್ ಪ್ರತಿಸ್ಪರ್ಧಿ 'ಕೂ'ನಲ್ಲಿ ಉದ್ಯೋಗಾವಕಾಶ: ನಿರುದ್ಯೋಗಿಗಳಿಗೆ ಸಿಹಿ ಸುದ್ದಿ!

ಟ್ವಿಟ್ಟರ್ ಪ್ರತಿಸ್ಪರ್ಧಿ 'ಕೂ'ನಲ್ಲಿ ಉದ್ಯೋಗಾವಕಾಶ: ನಿರುದ್ಯೋಗಿಗಳಿಗೆ ಸಿಹಿ ಸುದ್ದಿ!



ಟ್ವಿಟ್ಟರ್‌ನ ಪ್ರತಿಸ್ಪರ್ಧಿ ಎನಿಸಿದ ಹಾಗೂ ದೇಶದಲ್ಲಿ ಒಂದು ಕೋಟಿ ಬಳಕೆದಾರರ ಗುರಿಯನ್ನು ತಲುಪಿದ ಕೂ ಎಂಬ ದೇಶೀಯ ಮೈಕ್ರೋ-ಬ್ಲಾಗಿಂಗ್ ಕಂಪನಿ ನಿರುದ್ಯೋಗಿ ಯುವಕರಿಗೆ ಒಂದು ಸಿಹಿ ಸುದ್ದಿಯನ್ನು ನೀಡಿದೆ.



ಈ ಆರ್ಥಿಕ ವರ್ಷದಲ್ಲಿ ಎಂಜಿನಿಯರಿಂಗ್, ಉತ್ಪನ್ನ ಮತ್ತು ಸಮುದಾಯ ನಿರ್ವಹಣೆ ತಂಡಗಳಿಗೆ ಉದ್ಯೋಗಿಗಳನ್ನು ನೇಮಕ ಮಾಡಿಕೊಳ್ಳಲು ನಿರ್ಧರಿಸಿರುವುದಾಗಿ ಕೂ ಹೇಳಿಕೊಂಡಿದೆ.



ಕೂ ಸಹ ಸಂಸ್ಥಾಪಕ ಅಪ್ರಮೇಯ ರಾಧಾಕೃಷ್ಣ ಸುದ್ದಿ ಸಂಸ್ಥೆಗೆ ಈ ವಿಷಯ ತಿಳಿಸಿದ್ದಾರೆ.


ಸರ್ಕಾರಿ ಸಂಬಂಧಗಳು, ಮಾರ್ಕೆಟಿಂಗ್, ಬ್ರ್ಯಾಂಡ್ ಮಾರ್ಕೆಟಿಂಗ್ ವಿಭಾಗದಲ್ಲೂ ಉದ್ಯೋಗ ನೇಮಕಾತಿ ಪ್ರಕ್ರಿಯೆ ನಡೆಯಲಿದೆ ಎಂದು ರಾಧಾಕೃಷ್ಣ ತಿಳಿಸಿದ್ದಾರೆ.



ಈಗ ಕಂಪೆನಿಯಲ್ಲಿ 200 ಉದ್ಯೋಗಿಗಳು ಇದ್ದು, ಈ ವರ್ಷದಲ್ಲಿ ಉದ್ಯೋಗಿಗಳ ಸಂಖ್ಯೆಯನ್ನು 500ಕ್ಕೇರಿಸಲು ಕಂಪೆನಿ ನಿರ್ಧರಿಸಿದೆ.



ಭಾರತೀಯ ತಂತ್ರಜ್ಞಾನವನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ಯೂವ ಸಾಮರ್ಥ್ಯ ಇರುವ ಪ್ರತಿಭಾವಂತ ವ್ಯಕ್ತಿಗಳೊಂದಿಗೆ ಕಂಪೆನಿ ಸಹಭಾಗಿತ್ವ ಹೊಂದಲು ಇಷ್ಟಪಡುತ್ತದೆ ಎಂದು ಸಂಸ್ಥೆ ಹೇಳಿಕೊಂಡಿದೆ.

BREAKING NEWS
Loading latest news...
Join our WhatsApp Channel Powered By : Online Pudu