ಕಾರ್ಕಳ ಪರ್ಪಲೆ ಗಿರಿಯ ಹಸಿರು ಹೊರೆ ಕಾಣಿಕೆಯಲ್ಲಿ ಸಾಗಲಿದೆ ಕಲ್ಲುರ್ಟಿ, ತೂಕತ್ತೇರಿ ದೈವಗಳ ಪಂಚ ಲೋಹದ ವಿಗ್ರಹ
Saturday, May 17, 2025
ಕಾರ್ಕಳ ಪರ್ಪಲೆ ಗಿರಿಯ ಹಸಿರು ಹೊರೆ ಕಾಣಿಕೆ ಮೆರವಣಿಗೆ ಇಂದು ನಡೆಯಲಿದ್ದು, ಈ ವೇಳೆ ಕಲ್ಕುಡ, ಕಲ್ಲುರ್ಟಿ, ತೂಕತ್ತೇರಿ ದೈವಗಳ ಪಂಚ ಲೋಹದ ವಿಗ್ರಹಗಳು ಕೂಡಾ ಸಾಗಲಿದ್ದು ಕಾರ್ಕಳದ ವಿವಿಧ ಮಾರ್ಗಗಳಲ್ಲಿ ಸಂಚರಿಸಿ ಪರ್ಪಲೆ ಗಿರಿಯತ್ತ ಕೊಂಡೊಯ್ಯಲಾಗುವುದು ಎಂದು ಸಮಿತಿ ತಿಳಿಸಿದೆ.
ಸುಮಾರು 2 ಅಡಿ ಎತ್ತರದ ಪಂಚ ಲೋಹದ ಮೂರ್ತಿಗಳ ನಿರ್ಮಾಣ ಕಾರ್ಯ ಪೂರ್ಣಗೊಂಡಿದೆ.
ಮೇ 17 ಶನಿವಾರ ಮಧ್ಯಾಹ್ನ 3 ಗಂಟೆಗೆ ನಡೆಯುವ ಹಸಿರು ಹೊರೆ ಕಾಣಿಕೆ ಮೆರವಣಿಗೆಯಲ್ಲಿ ಬಹಳಷ್ಟು ಸಂಖ್ಯೆಯಲ್ಲಿ ಹಸಿರು ಹೊರೆ ತುಂಬಿದ ವಾಹನಗಳು ಪ್ರತಿ ಗ್ರಾಮದಿಂದ ಭಾಗವಹಿಸಲಿವೆ. ಮಾತ್ರವಲ್ಲದೆ ಬೃಹತ್ ವಾಹನ ಜಾಥಾ ದೊಂದಿಗೆ ಈ ಮೆರವಣಿಗೆ ಸಾಗಲಿರುವುದರಿಂದ ಬೈಕು, ರಿಕ್ಷಾ ಕಾರುಗಳೊಂದಿಗೆ ಜನತೆ ಹೆಚ್ಚಿನ ಸಂಖ್ಯೆಯಲ್ಲಿ ವಾಹನ ಜಾಥಾದಲ್ಲಿ ಪಾಲ್ಗೊಳ್ಳಬೇಕಾಗಿ ಸಮಿತಿ ಕೋರಿದೆ