ಆಂಬ್ಯುಲೆನ್ಸ್‌ನಲ್ಲೇ ಮಹಿಳೆಗೆ ಲೈಂಗಿಕ ಕಿರುಕುಳ ನೀಡಿದ ಸಿಬ್ಬಂದಿ!






ಗೋರಖ್‌ಪುರ: ಆಂಬ್ಯುಲೆನ್ಸ್‌ನಲ್ಲೇ ಮಹಿಳೆಗೆ ಲೈಂಗಿಕ ಕಿರುಕುಳ ನೀಡಿ, ಆಕೆಯ ಅನಾರೋಗ್ಯ ಪೀಡಿತ ಪತಿಯನ್ನು ವಾಹನದಿಂದ ಹೊರ ಎಸೆದ ಅಮಾನವೀಯ ಘಟನೆ ಉತ್ತರ ಪ್ರದೇಶದ ಸಿದ್ದಾರ್ಥನಗರದಲ್ಲಿ ಆಗಸ್ಟ್ 30ರಂದು ನಡೆದಿದ್ದು, ತಡವಾಗಿ ಗುರುವಾರ ಬೆಳಕಿಗೆ ಬಂದಿದೆ. 


ಸಂತ್ರಸ್ತ ಮಹಿಳೆಯು, ಅನಾರೋಗ್ಯದಿಂದ ಬಳಲುತ್ತಿದ್ದ ತಮ್ಮ ಪತಿ ಹರೀಶ್ ಅವರನ್ನು ಸಿದ್ದಾರ್ಥನಗರದಲ್ಲಿರುವ ಬಸ್ತಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಿದ್ದರು. ಇದು ಖಾಸಗಿ ಆಸ್ಪತ್ರೆಯಾಗಿದೆ. ಚಿಕಿತ್ಸಾ ಇವರ ಕೌಟುಂಬಿಕ ಸ್ಥಿತಿಯನ್ನು ಗಮನಿಸಿ ಆಸ್ಪತ್ರೆ ಸಿಬ್ಬಂದಿಯೇ ಬೇರೆ ಆಸ್ಪತ್ರೆಗೆ ದಾಖಲಾಗುವಂತೆ ಸಲಹೆ ನೀಡಿದ್ದರು. ಆಂಬ್ಯುಲೆನ್ಸ್‌ನಲ್ಲಿ ಬೇರೆ ಆಸ್ಪತ್ರೆಗೆ ತೆರಳುತ್ತಿದ್ದ ವೇಳೆ ಚಾಲಕ ಹಾಗೂ ಆತನ ಸಹಾಯಕ ಇಬ್ಬರೂ ಮಹಿಳೆಗೆ ಡ್ರೈವರ್ ಕ್ಯಾಬಿನ್‌ನಲ್ಲಿ ಕುಳಿತುಕೊಳ್ಳುವಂತೆ ಒತ್ತಾಯಿಸಿ ಲೈಂಗಿಕ ಕಿರುಕುಳ ನೀಡಿದ್ದಾರೆ. ಇವರಿಬ್ಬರ ಅಸಭ್ಯ ವರ್ತನೆಗೆ ಮಹಿಳೆಯು ಪ್ರತಿರೋಧ ವ್ಯಕ್ತಪಡಿಸಿದಾಗ, ಸ್ಟೆಚರ್ ಮೇಲೆ ಮಲಗಿದ್ದ ಪತಿ ಹರೀಶ್ ಅವರಿಗೆ ನೀಡಲಾಗುತ್ತಿದ್ದ ಆಮ್ಲಜನಕ ಪೂರೈಕೆಯನ್ನು ಸ್ಥಗಿತಗೊಳಿಸಿ. ಇಬ್ಬರನ್ನೂ ಹೊರಹಾಕಿ ದರ್ಪ ಮೆರೆದಿದ್ದಾರೆ.


 ಅಲ್ಲದೇ ಆಂಬ್ಯುಲೆನ್ಸ್ ಚಾಲಕ ಮಹಿಳೆಯ ಚಿನ್ನಾಭರಣಗಳನ್ನು ದೋಚಿದ್ದಾರೆ. 

ಪತಿ ಸಾವು: ತಮಗಾದ ಕಹಿ ಘಟನೆಯನ್ನು ಮಹಿಳೆಯು ಸಹೋದರನ ಜತೆ ಹಂಚಿಕೊಂಡ ನಂತರ, ಪ್ರಕರಣವು ಬೆಳಕಿಗೆ ಬಂದಿದೆ. ಗಾಯಗೊಂಡಿದ್ದ ಮಹಿಳೆಯ ಪತಿ ಹರೀಶ್ ಅವರನ್ನು ಪೊಲೀಸರು ಗೋರಖ್ ಪುರ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.


ಘಟನೆ ಕುರಿತು ಲಖನೌದ ಗಾಜಿಪುರ ಪೊಲೀಸ್ ಠಾಣೆಯಲ್ಲಿ ದೂರು ಕೊಟ್ಟಿರುವ ಸಂತ್ರಸ್ತ ಮಹಿಳೆಯು, ಆಂಬ್ಯುಲೆನ್ಸ್ ಚಾಲಕ ಮತ್ತು ಆತನ ಸಹಾಯಕನನ್ನು ಬಂಧಿ ಸಲು ಪೊಲೀಸರು ಮೀನಾಮೇಷ ಮಾಡುತ್ತಿದ್ದಾರೆಂದು ಆರೋಪಿಸಿದ್ದಾರೆ.

BREAKING NEWS
Loading latest news...
Join our WhatsApp Channel Powered By : Online Pudu