-->
1000938341
ಮಿಸ್ ಯುನಿವರ್ಸ್‌ ಬ್ಯೂನಸ್‌ಐರಿಸ್‌ ಸ್ಪರ್ಧೆಯಲ್ಲಿ ಕಿರೀಟ ಮುಡಿಗೇರಿಸಿದ 60ವರ್ಷದ ಮಹಿಳೆ - ದಾಖಲೆ ಬರೆದ ಅಲೆಕ್ಸಾಂಡ್ರಾ ಮರೀಸಾ ರಾಡ್ರಿಗಸ್

ಮಿಸ್ ಯುನಿವರ್ಸ್‌ ಬ್ಯೂನಸ್‌ಐರಿಸ್‌ ಸ್ಪರ್ಧೆಯಲ್ಲಿ ಕಿರೀಟ ಮುಡಿಗೇರಿಸಿದ 60ವರ್ಷದ ಮಹಿಳೆ - ದಾಖಲೆ ಬರೆದ ಅಲೆಕ್ಸಾಂಡ್ರಾ ಮರೀಸಾ ರಾಡ್ರಿಗಸ್


ಬ್ಯೂನಸ್‌ಐರಿಸ್‌: ಅರ್ಜೆಂಟೀನಾದಲ್ಲಿ ನಡೆದಿರುವ ಮಿಸ್ ಯುನಿವರ್ಸ್‌ ಬ್ಯೂನಸ್‌ಐರಿಸ್‌ ಸ್ಪರ್ಧೆಯಲ್ಲಿ 60 ವರ್ಷದ ಅಲೆಕ್ಸಾಂಡ್ರಾ ಮರೀಸಾ ರಾಡ್ರಿಗಸ್ ಕಿರೀಟ ಮುಡಿಗೇರಿಸಿ ದಾಖಲೆ ಬರೆದಿದ್ದಾರೆ.

ಈ ಮೂಲಕ 60ನೇ ವಯಸ್ಸಿನಲ್ಲಿ ಮಿಸ್ ಯುನಿವರ್ಸ್ ಕಿರೀಟ ಮುಡಿಗೇರಿಸಿರುವ ಪ್ರಥಮ ಮಹಿಳೆ ಎಂಬ ಹೆಗ್ಗಳಿಕೆಗೆ ಅಲೆಕ್ಸಾಂಡ್ರಾ ಮರೀಸಾ ರಾಡ್ರಿಗಸ್ ಪಾತ್ರರಾಗಿದ್ದಾರೆ. ಇವರು ವೃತ್ತಿಯಲ್ಲಿ ನ್ಯಾಯವಾದಿಯಾಗಿದ್ದಾರೆ. ಈ ಸ್ಪರ್ಧೆಯಲ್ಲಿ 18ರಿಂದ 73 ವರ್ಷದವರೆಗಿನ 34 ಸ್ಪರ್ಧಿಗಳು ಭಾಗವಹಿಸಿದ್ದರು.



ಮಿಸ್ ಯೂನಿವರ್ಸ್ ಸಂಸ್ಥೆಯು ಸ್ಪರ್ಧಿಗಳ ವಯಸ್ಸಿನ ಮಿತಿಯನ್ನು ಕಳೆದ ವರ್ಷ ತೆಗೆದುಹಾಕಿದೆ. ಈ ಮೂಲಕ 18 ವರ್ಷ ಮೇಲ್ಪಟ್ಟ ಮಹಿಳೆಯರು ಮಿಸ್ ಯೂನಿವರ್ಸ್ ಸ್ಪರ್ಧೆಯಲ್ಲಿ ಭಾಗಿಸಲು ಅರ್ಹರಾಗಿರುತ್ತಾರೆ ಎಂದು ಹೇಳಿದೆ. ಇದಕ್ಕೂ ಮೊದಲು 18-28 ವರ್ಷ ವಯಸ್ಸಿನ ಮಹಿಳೆಯರು ಮಾತ್ರ ಸ್ಪರ್ಧೆಯಲ್ಲಿ ಭಾಗವಹಿಸಬಹುದಿತ್ತು.

Ads on article

Advertise in articles 1

advertising articles 2

Advertise under the article