-->

“ಹಾಟ್​ನೆಸ್​ ಇರುವುದು ನನ್ನ ತೊಡೆಯಲ್ಲೆಲ್ಲ…ನಿಮ್ಮ ಕಣ್ಣುಗಳಲ್ಲಿ” ಎಂದ ನಟಿ ಆಶು ರೆಡ್ಡಿ: ನೆಟ್ಟಿಗರಿಂದ ಸಖತ್ ಟ್ರೋಲ್

“ಹಾಟ್​ನೆಸ್​ ಇರುವುದು ನನ್ನ ತೊಡೆಯಲ್ಲೆಲ್ಲ…ನಿಮ್ಮ ಕಣ್ಣುಗಳಲ್ಲಿ” ಎಂದ ನಟಿ ಆಶು ರೆಡ್ಡಿ: ನೆಟ್ಟಿಗರಿಂದ ಸಖತ್ ಟ್ರೋಲ್

ಹೈದರಾಬಾದ್​: 'ಚಲ್​ ಮೋಹನ್​ ರಂಗ' ಸಿನಿಮಾದ ಮೂಲಕ ತೆಲುಗು ಸಿನಿರಂಗದಲ್ಲಿ ಪ್ರಯಾಣ ಆರಂಭಿಸಿದ ನಟಿ ಆಶು ರೆಡ್ಡಿ, ಬಿಗ್​ಬಾಸ್​ ಸಿಸನ್​ - 3ರಲ್ಲಿ ಭಾಗವಹಿಸುವ ಮೂಲಕ ಬಹಳ ಖ್ಯಾತಿ ಪಡೆದಿದ್ದರು‌. ನೋಡಲು ಸ್ವಲ್ಪಮಟ್ಟಿಗೆ ನಟಿ ಸಮಂತಾರನ್ನೇ ಹೋಲುವ ಕಾರಣಕ್ಕೆ ಆಶು ರೆಡ್ಡಿಯನ್ನು ಟಾಲಿವುಡ್​ನಲ್ಲಿ ಜೂನಿಯರ್​ ಸಮಂತಾ ಅಂತಾನೇ ಕರೆಯುತ್ತಾರೆ. 

ಸಾಮಾಜಿಕ ಜಾಲತಾಣದಲ್ಲಿ ಸದಾ ಸಕ್ರಿಯರಾಗಿರುವ ಆಶು ರೆಡ್ಡಿ, ಆಗಾಗ ತಮ್ಮ ಬೋಲ್ಡ್​ ಫೋಟೋಗಳನ್ನು ಶೇರ್ ಮಾಡುವ ಮೂಲಕ ಪಡ್ಡೆ ಹುಡುಗರ ಮೈ ಬಿಸಿಯೇರಿಸುತ್ತಿರುತ್ತಾರೆ. ಅಲ್ಲದೆ, ತಮ್ಮ ಯೂಟ್ಯೂಬ್​ ಚಾನೆಲ್​ನಲ್ಲಿ ಬೋಲ್ಡ್​ ಕಂಟೆಂಟ್​ ಗಾಗೂ ವೀಡಿಯೋಗಳನ್ನು ಶೇರ್​ ಮಾಡಿ ಸಾಕಷ್ಟು ಬಾರಿ ಟ್ರೋಲ್​ ಗೂ ಒಳಗಾಗುತ್ತಾರೆ. 


ಕೆಲ ತಿಂಗಳ ಹಿಂದೆ ಸ್ಟಾರ್​ ಡೈರೆಕ್ಟರ್ ರಾಮ್​ಗೋಪಾಲ್​ ವರ್ಮಾ ರೊಂದಿಗಿನ ಸಂದರ್ಶನದಲ್ಲಿ ಸೆಕ್ಸ್​ ಲೈಫ್​ ಬಗ್ಗೆ ಮಾತನಾಡಿ ಆಶು ರೆಡ್ಡಿ ಭಾರೀ ಸುದ್ದಿಯಾಗಿದ್ದರು. ಅಲ್ಲದೆ ಆಶು ರೆಡ್ಡಿ ಜಾಲತಾಣಗಳಲ್ಲಿ ತೀರ ವೈಯಕ್ತಿಕವಾಗಿ ಕಮೆಂಟ್ಸ್ ಗಳನ್ನು​ ಮಾಡುವ ನೆಟ್ಟಿಗರಿಗೆ ತಮ್ಮ ಖಾರವಾದ ಮಾತಿನಿಂದ ಆಗಾಗ ತರಾಟೆಗೆ ತೆಗೆದುಕೊಳ್ಳುತ್ತಿರುತ್ತಾರೆ. 

ಇತ್ತೀಚೆಗಷ್ಟೇ ನಡೆಸಿರುವ ಫೋಟೋಶೂಟ್​ ನಲ್ಲಿ ಕೆಲ ಫೋಟೋಗಳನ್ನು ತಮ್ಮ ಇನ್​ಸ್ಟಾಗ್ರಾಂನಲ್ಲಿ ಶೇರ್​ ಮಾಡುವ ಮೂಲಕ ಕೆಲವರಿಗೆ ತಿರುಗೇಟನ್ನೂ ನೀಡಿದ್ದಾರೆ. ಫೋಟೋದಲ್ಲಿ ಆಶು ರೆಡ್ಡಿ ಟಾಪ್​ ಹಾಗೂ ಜಾಕೆಟ್​ ಧರಿಸಿ ಪೋಸ್​ ನೀಡಿದ್ದು, “ಹಾಟ್​ನೆಸ್​ ಇರುವುದು ನನ್ನ ತೊಡೆಯಲ್ಲೆಲ್ಲ…ನಿಮ್ಮ ಕಣ್ಣುಗಳಲ್ಲಿ” ಎಂದು ಅಡಿಬರಹ ನೀಡಿದ್ದಾರೆ. ಈ ಮೂಲಕ ಟ್ರೋಲ್​ ಮಾಡುವವರನ್ನು ವ್ಯಂಗ್ಯವಾಡಿದ್ದಾರೆ. ಆದರೂ ಟ್ರೋಲಿಗರು ಆಶು ರೆಡ್ಡಿಯನ್ನು ಸಖತ್ ಟ್ರೋಲ್​ ಮಾಡುತ್ತಿದ್ದಾರೆ. ಅಲ್ಲದೆ ತೊಡೆ ಸುಂದರಿ ಎಂದು ಕಾಲೆಳೆಯುತ್ತಿದ್ದಾರೆ.

Ads on article

Advertise in articles 1

advertising articles 2

ಉಚಿತವಾಗಿ ಸುದ್ದಿ ಕೊಡುತ್ತಿರುವ ನಮಗೆ ಸಹಾಯ ಮಾಡಿ

  

Pay Rs 100

Advertise under the article

  

ಉಚಿತವಾಗಿ ಸುದ್ದಿ ಕೊಡುತ್ತಿರುವ ನಮಗೆ ಸಹಾಯ ಮಾಡಿ

  

Pay Rs 100