-->
ಅಗಲಿದ ಪತ್ನಿಯ ಮೂರ್ತಿಯನ್ನು ಮನೆಯಲ್ಲಿ ಪ್ರತಿಷ್ಠಾಪಿಸಿದ ಪತಿರಾಯ!

ಅಗಲಿದ ಪತ್ನಿಯ ಮೂರ್ತಿಯನ್ನು ಮನೆಯಲ್ಲಿ ಪ್ರತಿಷ್ಠಾಪಿಸಿದ ಪತಿರಾಯ!

ಬೆಳಗಾವಿ: ಅಗಲಿದ ಪ್ರೀತಿಯ ಮಡದಿಯನ್ನು ಬಿಟ್ಟಿರಲಾರದ ಪತಿಯೊಬ್ಬ ಆಕೆಯ ನೆನಪಿಗಾಗಿ ಮೂರ್ತಿ ಸ್ಥಾಪನೆ ಮಾಡಿರುವ ಘಟನೆ ಬೆಳಗಾವಿ ಮರಗಾಯಿ ನಗರದಲ್ಲಿ ನಡೆದಿದೆ‌.

ಬೆಳಗಾವಿ ಮಹಾನಗರ ಪಾಲಿಕೆಯ ಸದಸ್ಯರಾಗಿದ್ದ ಬೆಳಗಾವಿಯ ಶಿವಾ ಚೌಗಲೆಯವರು ಮಡಿದ ಪತ್ನಿ ಮೈನಾಬಾಯಿ ಚೌಗಲೆ ಮೂರ್ತಿ ಪ್ರತಿಷ್ಠಾಪನೆ ಮಾಡಿದವರು‌.

ಮೈನಾಬಾಯಿವರು ಕೂಡ ಪಾಲಿಕೆಯ ಸದಸ್ಯೆಯಾಗಿದ್ದರು. ಮೈನಾಬಾಯಿ ಚೌಗಲೆ ಕಳೆದ ಮೇ ತಿಂಗಳಲ್ಲಿ ನ್ಯುಮೋನಿಯ ಆಗಿ ಅನಾರೋಗ್ಯದಿಂದ ಮೃತಪಟ್ಟಿದ್ದರು. ಪತಿ ಶಿವಾ ಚೌಗಲೆ ಅವರಿಗೆ ಕೋವಿಡ್‌ ಸೋಂಕು ತಗುಲಿತ್ತು. ಈ  ಚಿಂತೆಯಲ್ಲಿಯೇ ಮೈನಾಬಾಯಿ ಜ್ವರಕ್ಕೆ ತುತ್ತಾಗಿ ಮಡಿದಿದ್ದರು. 

ಪತ್ನಿಯ ಸಾವಿನಿಂದ ತೀವ್ರ ಆಘಾತಕ್ಕೆ ಒಳಗಾದ ಶಿವಾ ಚೌಗಲೆ ಅವರಿಗೆ ಪತ್ನಿ ನೆನೆಪು ಸದಾ ಕಾಡುತ್ತಿತ್ತು. ಆದ್ದರಿಂದ ಮೂರ್ತಿ ಸ್ಥಾಪನೆ ಬಗ್ಗೆ ನಿರ್ಧಾರ ತೆಗೆದುಕೊಂಡಿದ್ದರು. ಜ್ಯೋತಿಷಿಗಳ ಸಲಹೆ ಮೇರೆಗೆ ಮೂರ್ತಿ ನಿರ್ಮಾಣ ಮಾಡಿದ್ದಾರೆ. ದೀಪಾವಳಿ ಹಬ್ಬದ ಸಮಯದಲ್ಲಿ ಮನೆಯಲ್ಲಿ ಮೈನಾಬಾಯಿ ಮೂರ್ತಿ ಸ್ಥಾಪನೆ ಕಾರ್ಯ ಅದ್ಧೂರಿಯಾಗಿ ನಡೆದಿದೆ. 

ಮನೆಯ ಮುಂಭಾಗ ಪೆಂಡಾಲ್ ಹಾಗಿ ಬಂಧು, ಬಳಗಕ್ಕೆ ಊಟದ ಹಾಕಲಾಗಿದೆ. ಮೂರ್ತಿಯ ಜೊತೆಗೆ ಮೈನಾಬಾಯಿ ಧರಿಸುತ್ತಿದ್ದ ಒಡವೆ, ಸೀರೆ ಸೇರಿ ಎಲ್ಲಾ ವಸ್ತುಗಳನ್ನು ಇಡಲು ವಾರ್ಡರೂಬ್ ವ್ಯವಸ್ಥೆ ಮಾಡಲಾಗಿದೆ. ಮೈನಾಬಾಯಿಯವರು ತಮ್ಮ ವಾರ್ಡ್‌ನಲ್ಲಿ ಸುಮಾರು 8 ಕೋಟಿ ರೂ. ಕೆಲಸ ಮಾಡಿಸಿದ್ದರು. ಇದೀಗ ಅವರ ಎಲ್ಲಾ ಕನಸುಗಳನ್ನು ಈಡೇರಿಸಲು ಪತಿ ಶಿವಾ ಚೌಗಲೆ ಸಂಕಲ್ಪ ತೊಟ್ಟಿದ್ದಾರೆ. ಪತ್ನಿಯ ಹೆಸರಿನಲ್ಲಿ ಫೌಂಡೇಶನ್ ನಿರ್ಮಿಸಿ ಅಭಿವೃದ್ಧಿ ಕಾರ್ಯಕ್ಕೆ ಪಣ ತೊಟ್ಟಿದ್ದಾರೆ. 

Ads on article

Advertise in articles 1

advertising articles 2

Advertise under the article